Home District ಗ್ರಾಮಸ್ಥರಿಗೆ ಕೊರೊನಾ ಸಂಕಟ: ಮಾಂಸ ಮಾರಾಟಗಾರರಿಗೆ ಚೆಲ್ಲಾಟ

ಗ್ರಾಮಸ್ಥರಿಗೆ ಕೊರೊನಾ ಸಂಕಟ: ಮಾಂಸ ಮಾರಾಟಗಾರರಿಗೆ ಚೆಲ್ಲಾಟ

563
0
SHARE

ಹಾವೆರಿ: ಈಗ ಎಲ್ಲೆಲ್ಲೂ ಮಹಾಮಾರಿ ಕೊರೊನಾದೆ ಅಟ್ಟಹಾಸ ಮುಂದುವರೆದಿದೆ. ಹೇಗಪ್ಪಾ ಇದನ್ನು ತಡಿಯೋದು ಅಂತಾ ಸರ್ಕಾರ ಮತ್ತು ವೈದ್ಯರು ಚಿಂತೆಗೀಡಾಗಿದ್ದಾರೆ. ಅಂತದರಲ್ಲಿ ನಮ್ಮ ಕೆಲ ಜನ ಮಾತ್ರ ನಮಗೇನು ಆಗಿಯೆ ಇಲ್ಲಾ ಎಂಬಂತೆ ನಿಯಮಗಳನ್ನು ಉಲ್ಲಂಘಿಸಿ ಮಸ್ತ್ ಮೋಜು ಮಾಡುತ್ತಿದ್ದಾರೆ. ಹಾನಗಲ್ ತಾಲೂಕಿನ ಎರಡು ಹಳ್ಳಿಗಳಲ್ಲಿ ಕೆಲವರು  ಚಿಕ್ಕೇರಿಹೊಸಳ್ಳಿಯಲ್ಲಿ ನಡೆದ ದೃಶ್ಯಗಳನ್ನು ನೋಡಿದ್ರೆ ಎದೆ ಝುಲ್ ಎನ್ನೊದು ಗ್ಯಾರಂಟಿ. ಈ ಊರಿನಲ್ಲೂ ಲಾಕಡೌನ್ ಆಗಿದ್ದರೂ ಕೂಡಾ ಜನರೆಲ್ಲಾ ಸೇರಿ ರಸ್ತೆಯಲ್ಲಿ ಹಾಡುಹಗಲೆ ಅಮಾನವೀಯ ವರ್ತನೆ ತೋರಿದ್ದಾರೆ. ಯಾವ ಮಾಸ್ಕ್ ಇಲ್ಲದೆ ಸಾಮಾಜಿಕ ಅಂತರ ಇಲ್ಲದೆ ಇಲ್ಲದೆ ಕುರಿ ಕಡಿದು ತಿಂದಿದ್ದಾರೆ. ಇದಕ್ಕೆ ಗ್ರಾಮದ ಇನ್ನುಳಿದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಇದರ ಬೆನ್ನಲೆ ಮತ್ತೆ ಇದೆ ತಾಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ  ಮಾಂಸ ಮಾರಾಟಗಾರರು ಸಾರ್ವಜನಿಕರ ಮೇಲೆ ಜಗಳ ಮಾಡಿದ್ದಾರೆ. ಗ್ರಾಮದಲ್ಲಿ ಕೊರೊನಾ ಮಾರಿ ಕಾಲಿಟ್ಟರು ಅಕ್ಕಿಆಲೂರಿನ ಕೆಲ ಜನರು ಬುದ್ಧಿ ಕಲಿಯದೆ ಗ್ರಾಮದ 5 ನೇ ವಾರ್ಡಿನಲ್ಲಿ ಅಕ್ರಮವಾಗಿ ಕುರಿ, ಕೋಳಿ ಮಾಂಸ ಮಾರಾಟ ಧಂದೆ ಮಾಡುತ್ತಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ ರೋಗಗಳು ಹೆಚ್ಚಾಗುತ್ತಿವೆ, ಬಂದ್ ಮಾಡಿ ಎಂದು ಕೇಳಿಕೊಂಡು ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಕ್ಯಾರೆ ಎನ್ನದ ಮಾಂಸ ಮಾರಾಟಗಾರರು ಬುದ್ದಿ ಹೇಳಲು ಬಂದವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಹೀಗಾಗಿ ಮತ್ತಷ್ಟು ರೋಗ ಹರಡುವ ಭೀತಿಯಲ್ಲಿ ಅಕ್ಕಿಆಲೂರು ಜನರು ಬದುಕುತ್ತಿದ್ದಾರೆ. ಈ ಮೂಲಕ ದಿನೆ ದಿನೆ ಹಾವೇರಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದಿನವರೆಗೂ ಜಿಲ್ಲೆಯಲ್ಲಿ 175 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇನ್ನೂ ಕೂಡಾ ಕೊರೊನಾ ರೋಗವನ್ನು ನೆಗ್ಲೆಟ್ ಮಾಡಿದರೆ ಮುಂದೆ ಬೀಕರ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

LEAVE A REPLY

Please enter your comment!
Please enter your name here