Home Politics ಜನಸಾಮಾನ್ಯರ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ; ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ

ಜನಸಾಮಾನ್ಯರ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ; ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ

333
0

ರಾಮನಗರ; ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜನ ಪ್ರತಿನಿಧಿಗಳೊಂದಿಗೆ ಮಾತುಕೆತೆ ನಡೆಸಿದರು. ರಾಮನಗರ ತಾಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ಸರ್ಕಾರದ ಆಡಳಿತದ ಕುರಿತು ಹೇಳಿಕೆ ನೀಡಿದರು. ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಸಾರ್ವಜನಿಕರ ಜೊತೆ ಯಾವ ರೀತಿ ನಡೆದುಕೊಳ್ಳಬೇಕು ಎಂದು ಬಿಜೆಪಿ ಸರ್ಕಾರಕ್ಕೆ ಗೊತ್ತಿಲ್ಲ. ಅವರ ನಿರ್ಧಾರವೇ ಅಂತಿಮ ಎಂದು ಬಿಜೆಪಿ ಸರ್ಕಾರ ಭಾವಿಸಿದೆ ಎಂದರು.

ಚುನಾವಣಾ ಆಯೋಗವಾಗಲಿ ಅಥವಾ ರಾಜ್ಯ ಸರ್ಕಾರವಾಗಲೀ ಇಂತಹ ಕೊರೋನಾದ ಲಾಕ್ ಡೌನ್ ಸಂದರ್ಭದಲ್ಲಿ ಯಾವ ರೀತಿ ನಡೆಸಿಕೊಳ್ಳುತ್ತಿದ್ದೀರಿ? ಎಂದು ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದರು. ನೈಟ್ ಕರ್ಫ್ಯೂ , ಲಾಕ್ ಡೌನ್ ಮಾಡುವುದರಿಂದ ಯಾರಿಗೆ ಉಪಯೋಗವಿದೆ? ನಮ್ಮ ಜೀವದ ಬಗ್ಗೆ ನಾವೇ ಚೆಲ್ಲಾಟವಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಜವಬ್ದಾರಿ ಇರಬೇಕು. ಬೆಂಗಳೂರಿನಲ್ಲಿ ಬೆಡ್ ದೊರೆಯುತ್ತಿಲ್ಲ.ಸರ್ಕಾರ ಇಂತಹ ಸಂದರ್ಭದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ.ಆದರೆ ಸರ್ಕಾರಕ್ಕೆ ಉಪಚುನಾವಣೆ ಚಿಂತೆ. ದಿನದಿಂದ ದಿನಕ್ಕೆ ಕೊರೋನಾದ ಸೋಂಕು ಏರುತ್ತಿದೆ.ಕೊರೊನಾ ಪಾಸಿಟಿವ್ ಬಂದವರಿಗೆ ಕೊಡುವ ಇಂಜೆಕ್ಷನ್ ಲಭ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಜನಸಾಮಾನ್ಯರ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಬಿಡದಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ.

ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಾರಿಗೆ ನೌಕರರ ಬಗ್ಗೆ ಸರ್ಕಾರದ ಇಷ್ಟೊಂದು ಬಿಗಿ ಧೋರಣೆ‌ ಇದೆ. ಸರ್ಕಾರವೇ ಫ್ರಿ ಪಾಸ್ ಕೊಡುತ್ತೇವೆ ಎನ್ನುತ್ತಾರೆ.ಮತಕ್ಕಾಗಿ ತೆಗೆದುಕೊಳ್ಳುವ ಕಾರ್ಯಕ್ರಮಗಳಿಗೆ ಕೊಡುವ ಹಣ ಎಷ್ಟು ಇದೆ?ಅದರಿಂದ ಸಾರಿಗೆ ಇಲಾಖೆ ನಷ್ಟದಲ್ಲಿ ಇದೆ.ಸರ್ಕಾರದ ತಪ್ಪು‌ ಇಟ್ಟುಕೊಂಡು ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎನ್ನುವುದು ಎಷ್ಟು ಸರಿ? ನಿಮ್ಮಲ್ಲೆ ವಿಶ್ವಾಸದ ಕೊರತೆ ಇದೆ.ನಾನು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ .ಸಾರಿಗೆ ನೌಕರರನ್ನ ಕರೆದು ಹೇಳಬೇಕು. ಸಮಯಕೊಡಿ, ಗೌರವಯುತವಾಗಿ ನಡೆಸಿಕೊಡುತ್ತೆವೆ ಎಂದು ಕೇಳಬೇಕು. ಅದನ್ನು ಬಿಟ್ಟು ಹೆದರಿಸುತ್ತೇವೆ ಎಂದರೇ ಅದು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

Previous articleಅಂಬೇಡ್ಕರ್ ಜಯಂತಿ ಸರಳ ಆಚರಣೆ ಖಂಡಿಸಿ ವಿವಿಧ ದಲಿತ ಸಂಘಟನೆಗಳಿಂದ ಪ್ರತಿಭಟನೆ
Next articleಅಂಬೇಡ್ಕರ್ ಫೋಟೋ ತಲೆಮೇಲೆ ಹೊತ್ತು 40km ಕಾಲು ನಡಿಗೆ! ಇದಕ್ಕೆ ಕಾರಣವೇನು ಗೊತ್ತೇ?

LEAVE A REPLY

Please enter your comment!
Please enter your name here