Home District HDKರನ್ನ ಎದುರಿಸಿ BJP ಗೆಲ್ಲೋ ಚಾನ್ಸ್ ಇದ್ಯಾ.!? ಮಡಿಲಲ್ಲಿ ಕೆಂಡ ಇಟ್ಕೊಂಡು ಅಖಾಡಕ್ಕೆ ಇಳಿದರೇ ಮೈತ್ರಿ...

HDKರನ್ನ ಎದುರಿಸಿ BJP ಗೆಲ್ಲೋ ಚಾನ್ಸ್ ಇದ್ಯಾ.!? ಮಡಿಲಲ್ಲಿ ಕೆಂಡ ಇಟ್ಕೊಂಡು ಅಖಾಡಕ್ಕೆ ಇಳಿದರೇ ಮೈತ್ರಿ ಅಭ್ಯರ್ಥಿ.!?

526
0
SHARE

ಈ ಬೈ ಎಲೆಕ್ಷನ್ ಯಾವ ಮೇನ್ ಎಲೆಕ್ಷನ್ ಗೂ ಕಡಿಮೆ ಇಲ್ಲದಂತೆ ನಡೆಯುತ್ತಿದೆ. ಆರೋಪ ಪ್ರತ್ಯಾರೋಪಳು. ಹಿಂದಿನ ವಿಧಾನ ಸಭಾ ಚುನಾವಣೆಯನ್ನೇ ಮೀರಿಸುತ್ತಿದೆ. ದೋಸ್ತಿ ಸರ್ಕಾರದ ಅಳಿವು ಉಳಿನ ಪ್ರಶ್ನೆ ಅಂತಾ ಹೇಳಲಾಗುತ್ತಿರೋ ಈ ಬೈ ಎಲೆಕ್ಷನ್ ನಲ್ಲಿ ಗೆಲ್ಲಲು ಸಮ್ಮಿಶ್ರ ಸರ್ಕಾರ ತಂತ್ರದ ಮೇಲೆ ತಂತ್ರ ಮಾಡುತ್ತಿದ್ರೆ. ಬಿಜೆಪಿಯು ಸಹ ನಾವು ಅವರಿಗಿಂತ ಏನು ಕಮ್ಮಿ ಇಲ್ಲ ಅಂತಾ ಜಿದ್ದಿಗೆ ಬಿದ್ದವರಂತೆ ವರ್ತಿಸುತ್ತಿದೆ. ಸಧ್ಯ ರಾಮನಗರದಲ್ಲಿ ಅಂತಹದ್ದೇ ಪೈಪೋಟಿ ಎದ್ದು ಕಾಣುತ್ತಿದೆ. ಇಲ್ಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಅನ್ನೋ ಲೆಕ್ಕಾಚಾರ ಬಲು ಜೋರಾಗಿದೆ. ಸಿಎಂ ಪತ್ನಿಯೇ ಅಖಾಡದಲ್ಲಿ ಇರೋದ್ರಿಂದ ಈ ಕ್ಷೇತ್ರ ಮತ್ತೊಷ್ಟು ರಂಗೇರಿಸಿದೆ..ರಾಜ್ಯ ರಾಜಕೀಯದಲ್ಲಿ ರೇಷ್ಮೆನಗರಿ ರಾಮನಗರ ತನ್ನದೇ ಆದಂತಹ ಖ್ಯಾತಿಯನ್ನಗಳಿಸಿದೆ. ಈ ಜಿಲ್ಲೆ ರಾಜ್ಯಕ್ಕೆ ಮೂರು ಜನ ಮುಖ್ಯಮಂತ್ರಿಗಳು ಹಾಗೂ ಘಟಾನುಘಟಿ ರಾಜಕಾರಣಿಗಳನ್ನು ಹುಟ್ಟುಹಾಕಿದೆ.

ಕೇವಲ ವರ್ಚಸ್ಸನ್ನ ಮಾತ್ರ ಇಟ್ಟುಕೊಂಡು, ಚುನಾವಣೆಗೆ ಬಂದವರಿಗೆ ಮಣೆ ಹಾಕದ ಮತದಾರರು ಈ ಕ್ಷೇತ್ರದ ಜನತೆ. ಇನ್ನೂ ರಾಜಕೀಯವಾಗಿ ತಳಪಾಯ ಸೇರಿದ್ದ ರಾಜಕಾರಣಿಗಳಿಗೆ ಪುನರ್ ಜನ್ಮನೀಡಿ, ರಾಜಕೀಯವಾಗಿ ಬೆಳೆಸಿದ ಖ್ಯಾತಿ ರೇಷ್ಮೆನಗರಿಯದ್ದು. ಈ ಬಾರಿ 2018ರ ಉಪ ಚುನಾವಣೆ ಸಹ ಹಲವಾರು ಅಂಶಗಳು ರಾಜಕೀಯ ವಲಯದಲ್ಲಿ ಇತಿಹಾಸ ಸೇರುವ ಲಕ್ಷಣಗಳು ಕಾಣ್ತಿವೆ.ಕಳೆದ ಬಾರಿ ಜೆಡಿಎಸ್ ತೆಗೆದುಕೊಂಡಿದ್ದ ಮತಗಳು, ಹಾಗೂ ಈ ಕ್ಷೇತ್ರದ ಮೇಲೆ ಕುಮಾರಸ್ವಾಮಿಗೆ ಇರೋ ಗಟ್ಟಿ ನಂಬಿಕೆ ಆಧಾರದ ಮೇಲೆ ಈ ಬಾರಿ ಅನಿತಾ ಕುಮಾರಸ್ವಾಮಿ ಅವರನ್ನ ಕಣಕ್ಕೆ ಇಳಿಸಿದ್ದಾರೆ. ಬಟ್ ಈ ನಿರೀಕ್ಷೆಗೆ ಈ ಕ್ಷೇತ್ರದ ಜನ ಅದೆಷ್ಟು ನೀರು ಎರೆಯುತ್ತಾರೆ ಅನ್ನೋದಕ್ಕೆ ಜೆಸ್ಟ್ ಇನ್ನೇನು ಕೆಲವೇ ದಿನದಲ್ಲಿ ಉತ್ತರ ಸಿಗುತ್ತೆ.

ರಾಮನಗರ ಕ್ಷೇತ್ರದ ಸಧ್ಯದ ಚಿತ್ರಣ ನೋಡೋದಾದ್ರೆ, ರಾಮನಗರ ತಾಲ್ಲೂಕು ನಾಲ್ಕು ಹೋಬಳಿಗಳನ್ನ ಒಳಗೊಂಡಿದೆ. ಒಟ್ಟು ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 2 ಲಕ್ಷ 75 ಸಾವಿರ ಮತದಾರರು ಈ ಇದ್ದಾರೆ. ರಾಮನಗರದ ಜನಸಂಖ್ಯೆಯ ಮೇಲೆ ಒಂದು ಬಾರಿ ಕಣ್ಣಾಡಿಸೋದ್ ಆದ್ರೆ ಸಧ್ಯ ರಾಮಗರದಲ್ಲಿ 4 ಹೋಬಳಿಗಳು ,20 ಗ್ರಾಮ ಪಂಚಾಯಿಗಳು ಇವೆ, ಅದ್ರಲ್ಲಿ ಜನವಸತಿ ಇರೋ ಗ್ರಾಮಗಳು 123…. ಇನ್ನು ಕ್ಷೇತ್ರದ ಒಟ್ಟಾರೆ ಜನಸಂಖ್ಯೆ 2 ಲಕ್ಷದ 75 ಸಾವಿರದ 466.  ಇದ್ರಲ್ಲಿ ಮತದಾರರ ಸಂಖ್ಯೆ  1 ಲಕ್ಷದ 835, ಇನ್ನು ಮಹಿಳಾ ಮತದಾರರನ್ನ ನೋಡೋದ್ ಆದ್ರೆ 1 ಲಕ್ಷದ 1 ಸಾವಿರದ 574 ಈ ಕ್ಷೇತ್ರದಲ್ಲಿ ಪರುಷ ಮತದಾರಿಗಿಂದ ಹೆಚ್ಚಾಗಿ ಮಹಿಳಾ ಮತದಾರರೇ ಇದ್ದಾರೆ.

ಇನ್ನೂ ರಾಮನಗರ ಕ್ಷೇತ್ರದಲ್ಲಿ ಘಟಾನು ಘಟಿ ನಾಯಕರುಗಳು ತಮ್ಮ ಹಿಡಿತವನ್ನು ಸಾಧಿಸಲು ಮುಂದಾಗ್ತಿದ್ದಾರೆ. ಪ್ರಮುಖವಾಗಿ ಈ ಸಾಲಿನಲ್ಲಿ ನಿಲ್ಲುವರು ಕನಕಪುರದ ಡಿ.ಕೆ ಬ್ರದರ್ಸ್…….  ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಒಂದಾನೊಂದು ಕಾಲದಲ್ಲಿ ಗೌಡರ ಕುಟುಂಬದ ವಿರುದ್ದ ರಾಜಕೀಯವಾಗಿ ದ್ವೇಷವನ್ನು ಸಾಧಿಸಿಕೊಂಡು ಬಂದವರು. ಇದು ಒಂದು ರೀತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ಸಾಕಷ್ಟು ಭಾರೀ ಗಲಾಟೆಗಳು ನಡೆಯುವ ಹಂತಕ್ಕೂ ಕೂಡ ಹೋಗಿದೆ. ಈಗಿರುವಾಗ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಡಿ.ಕೆ ವಿರುದ್ದ ಪ್ರತಿ ಸ್ಪರ್ಧಿಯಾಗಿ ಮುಸ್ಲೀಂ ಮುಖಂಡನನ್ನು ಡಿಕೆಶಿ ರೆಫರ್ ಮಾಡಿ ಇಕ್ಬಾಲ್ ಹುಸೇನ್ ಅವರನ್ನ ಕಣಕ್ಕೆ ಇಳಿಸಿದ್ರು. ಅದು ಹೆಚ್.ಡಿ.ಕೆಯನ್ನ ಸೋಲಿಸಲೇ ಬೇಕೆಂದು ಹಟತೊಟ್ಟಿದ್ದರು. ಆದ್ರೆ ಕುಮಾರಸ್ವಾಮಿ 22 ಸಾವಿರ ಮತಗಳ ಹಂತರದಿಂದ ಗೆಲುವನ್ನು ಸಾಧಿಸಿದ್ರ.

ರಾಮನಗರ ಕ್ಷೇತ್ರ  ಒಂದು ಪ್ರತಿಷ್ಠೆಯ ಕ್ಷೇತ್ರ. ದಶಕಗಳ ಕಾಲದಿಂದಲೂ ರಾಜಕೀಯ ವಿರೋದ್ಧಿ ಕುಟುಂಬವೆಂದೇ ಗುರುತಿಸಿಕೊಂಡಿದ್ದವರು, ಈ ಉಪ ಚುನಾವಣೆಯಲ್ಲಿ ಚಂಟಿ ಕಾರ್ಯಚರಣೆಯ ಮೂಲಕ ತಮ್ಮ ಹೊಂದಾಣಿಕೆಗೆ ಮುಂದಾಗಿದ್ದಾರೆ. ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ತಮ್ಮ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂದು ಪಣತೊಟ್ಟಿದ್ದಾರೆ.  ಇದರ ಸಂಪೂರ್ಣ ಜವಾಬ್ದಾರಿಯನ್ನು ಹೈ ಕಮಾಂಡ್ ಸಂಸದ ಡಿ.ಕೆ. ಸುರೇಶ್ ಅವರ ಹೆಗಲಿದೆ ಹೊರಿಸಿದ್ದಾರೆ. ಈಗಾಗಿ ಡಿ.ಕೆ. ಸುರೇಶ್ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಅನಿತಾ ಕುಮಾರಸ್ವಾಮಿ ಕೂಡ ತಮ್ಮ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಂಪೂರ್ಣವಾಗಿ ಕ್ಷೇತ್ರದಲ್ಲೇ ಬ್ಯೂಸಿಯಾಗಿದ್ದಾರೆ. ಇನ್ನೂ ಅನಿತಾ ಕುಮಾರಸ್ವಾಮಿ ತಮ್ಮ ಅಧೃಷ್ಟ ಪರೀಕ್ಷೆಗಾಗಿ ಈ ರಾಮನಗರ ಕ್ಷೇತ್ರಕ್ಕೆ ಇದೇ ಮೊದಲ ಭಾರಿಗೆ ಬಂದಿದ್ದಾರೆ.

ಈ ಹಿಂದೆ ಅನಿತಾ ಕುಮಾರಸ್ವಾಮಿ ಹಲವು ವಿಧಾನ ಸಭಾ ಚುನಾವಣೆಯನ್ನು ಎದುರಿಸಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆಸಿ, ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ದ ಸೋತಿದ್ದರು.ಎಲ್. ಚಂದ್ರಶೇಖರ್ ಕಾಂಗ್ರೆಸ್ ನಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದವರು. ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದವರು. ಯಾವಾಗ ಸಮಿಶ್ರ ಸರ್ಕಾರದಲ್ಲಿ ರಾಮನಗರ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ ಅನ್ನೋ ಮಾತುಗಳು ಕೇಳತೊಡಗಿತೋ ಅವತ್ತೆ. ಚಂದ್ರಶೇಖರ್ ಕಾಂಗ್ರೆಸ್ ಪಾರ್ಟಿಯನ್ನು ತೊರೆದು ಬಿಜೆಪಿ ಸೇರ್ತಾರೆ. ಬಿಜೆಪಿ ಪಾರ್ಟಿಗೆ ಸೇರಿದ ನಂತರ, ಬಿಜೆಪಿ ಅಭ್ಯರ್ಥಿಯಾಗಿ ರಾಮನಗರ  ರಣ ಕಣಕ್ಕೆ ಇಳಿತ್ತಾರೆ. ಪಕ್ಕದ ಕ್ಷೇತ್ರದ ಮಾಜಿ ಶಾಸಕ ಸಿಪಿ ಯೋಗೇಶ್ವರ್ ಒಕ್ಕಲಿಗ, ಒಕ್ಕಲಿಗರ ನಡುವೆ ಒಕ್ಕಲಿಗನ್ನನ್ನು ಕಣಕ್ಕೆ ಇಳಿಸಿದ್ರೆ ಗೆಲುವು ಪಡೆಯಲು ಸುಲಭವಾಗುತ್ತೆ ಎಂಬ ಕಾರಣಕ್ಕಾಗೆ ಚಂದ್ರಶೇಖರ್ ಗೆ ಟಿಕೇಟ್ ನೀಡುವಂತೆ ಒತ್ತಾಯ ಮಾಡಿ ಟಿಕೇಟ್  ಕೊಡಿಸುವಲ್ಲಿ ಸಫಲರಾದ್ರು.

ಅನಿತಾ ಕುಮಾರಸ್ವಾಮಿ ಎಲ್ಲವೂ ಸರಿಯಾಗಿದೆ ನನ್ನ ಗೆಲುವು ನಿಶ್ಚಿತಾ ಅಂತಾ ಅಂದುಕೊಂಡಿದ್ರು. ಆದ್ರೆ ಕ್ಷೇತ್ರದ ಜನತೆ ಪ್ರಚಾರಕ್ಕೆ ಹೋದಲ್ಲಿ ತಮ್ಮ ನೋವು ಹಾಗೂ ಸಂಕಷ್ಠಗಳನ್ನು ಹೇಳಿಕೊಂಡು ಪ್ರಚಾರದ ವೇಳೆ ಘೇರಾವ್ ಹಾಕುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಪರವಾಗಿ ಕೇಂದ್ರದ ನಾಯಕರು ಹಾಗೂ ನೀರಾವರಿ ಹರಿಕಾರ ಸಿಪಿ ಯೋಗೇಶ್ವರ್ ಭರ್ಜರಿ ಪ್ರಚಾರ ನಡೆಸ್ತಿದ್ದಾರೆ. ಸೋ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿರೋದು ಜೆಡಿಎಸ್ ಗೆ ಪ್ಲಸ್ ಪಾಯಿಂಟ್ ಆದ್ರು ಅಷ್ಟು ಸುಲಭವಾಗಿ ಗೆಲುವು ದಕ್ಕೋದಿಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇನ್ನೇನು ಎಲೆಕ್ಷನ್ ಹತ್ತಿರವಾಗುತ್ತಿದೆ. ಈ ಎಲೆಕ್ಷನ್ ನಲ್ಲಿ ಅನಿತಾ ಕುಮಾರಸ್ವಾಮಿ ರಾಮನಗರದಲ್ಲಿ ಗೆಲ್ತಾರ. ಇಲ್ಲ ಇತಿಹಾಸದಲ್ಲೇ ರಾಮನಗರದಲ್ಲಿ ಬೇರೆಯದ್ದೇ ಫಲಿತಾಂಶ ಬರುತ್ತಾ. ಈ ಎಲ್ಲದಕ್ಕೂ ಕಾಲವೇ ಉತ್ರ ನೀಡಲಿದೆ.

LEAVE A REPLY

Please enter your comment!
Please enter your name here