Home Elections 2019 HDK ಒಂದು ಫೋನ್ ಕಾಲ್ ಗೆ ಕೈ ಕಟ್ಟಿ ಬಾಯ್ ಮುಚ್ಚುತ್ತಿದೆ ಕೈ ಪಾಳೆಯ.!? ನೀರಿನಿಂದ...

HDK ಒಂದು ಫೋನ್ ಕಾಲ್ ಗೆ ಕೈ ಕಟ್ಟಿ ಬಾಯ್ ಮುಚ್ಚುತ್ತಿದೆ ಕೈ ಪಾಳೆಯ.!? ನೀರಿನಿಂದ ಹೊರ ತೆಗೆದ ಮೀನಿನಂತೆ ಒದ್ದಾಡುತ್ತಿದ್ದಾರೇಕೆ ಸಿದ್ದರಾಮಯ್ಯ.!? “ಹಲೋ…. ಕುಮಾರಸ್ವಾಮಿ ಸ್ಪೀಕಿಂಗ್.! “

2652
0
SHARE

ಮೈತ್ರಿ ಸರ್ಕಾರ ಆರಂಭದಿಂದಲೂ ಒಂದಿಲ್ಲೊಂದು ಕಂಟಕ ಎದುರಿಸುತ್ತಲೇ ಇದೆ. ಸರ್ಕಾರ ರಚನೆಯಿಂದ ಹಿಡಿದು, ಖಾತೆ ಹಂಚಿಕೆಯಲ್ಲಿ ಮೊದಲ್ಗೊಂಡು, ಸಚಿವ ಸಂಪುಟ ರಚನೆಯಲ್ಲಿ ಮುಂದುವರೆದು ಇಂದಿನವರೆಗೂ ಕತ್ತಿಯ ಅಂಚಿನ ನಡಿಗೆಯಂತೆ ಭಾಸವಾಗುತ್ತಿದೆ, ಯಾರು, ಯಾರ ಮಾತನ್ನ ಕೇಳ ಬೇಕು , ಯಾರು, ಯಾರ ಆದೇಶದಂತೆ ನಡೆಯ ಬೇಕು ಅನ್ನೋದೇ ದೊಡ್ಡ ಕನಫ್ಯೂಷನ್, ಏಕೆಂದ್ರೆ ರಾಜ್ಯ ಸರ್ಕಾರದಲ್ಲಿ ರಾಜ್ಯ ನಾಯಕರ ಮಾತು ಏನು ನಡೆಯೋದೆ ಇಲ್ಲ, ಇಲ್ಲೇನಿದ್ರು ಹೈ ಕಮಾಂಡ್ ಕಮಾಂಡ್ ಕೊಟ್ಟಂತೆ ಆಡಳಿತ ವಾಹನವನ್ನ ತಿರುಗಿಸಬೇಕು, ಅವ್ರು ಲೆಪ್ಟ್ ಅಂದ್ರೆ ಲೆಫ್ಟ್, ರೈಟ್ ಅಂದ್ರೆ ರೈಟ್, ಒಟ್ನಲ್ಲಿ ಸಮ್ಮಿಶ್ರ ಸರ್ಕಾರ ರಾಜ್ಯದ ಒಳಿತಿಗಾಗಿ ಹೆಚ್ಚು ಕೆಲಸ ಮಾಡೋದಕ್ಕಿಂತ ಕಾಂಗ್ರೆಸ್ ಹೈ ಕಮಾಂಡ್ ಒಳಿತಿಗೆ ತಕ್ಕಂತೆ ನಡೆಯುವಂತೆ ಆಗಿದೆ.

ಸಮ್ಮಿಶ್ರ ಸರ್ಕಾರ ಇನ್ನು ರಚನೆಯಾಗಿ ಕೆಲವು ದಿನಗಳು ಕಳೆದಿತ್ತು ಅಷ್ಟೆ, ಅಂದೇ ಕುಮಾರಸ್ವಾಮಿ ನಾನು ಕಾಂಗ್ರೆಸ್ ನವರ ಮುಲಾಜಿನಲ್ಲಿ ಇದ್ದೇನೆ ಅಂತಾ ಬಹಿರಂಗವಾಗಿ ಹೇಳಿಕೆಯೊಂದನ್ನ ಕೊಟ್ಟು ಬಿಟ್ಟರು. ಈ ಒಂದು ಹೇಳಿಕೆ ರಾಜ್ಯದಲ್ಲಿ ಹೊಸ ಚರ್ಚೆಯನ್ನೇ ಹುಟ್ಟು ಹಾಕಿತ್ತು, ಮಾತ್ರವಲ್ಲ ನಾನು ಸಮ್ಮಿಶ್ರಸರ್ಕಾರದ ಸಾಂಧರ್ಬಿಕ ಶಿಶು ಅಂತಾ ಹೇಳಿದ್ದು ಕೆಲವು ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು, ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಈ ರೀತಿಯ ಹೇಳಿಕೆ ಕೊಡ್ತಿದ್ದಾರೆ ಅಂದ್ರೆ ಆ ಮಾತಿನ ಹಿಂದಿನ ಮರ್ಮ ಏನು ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಆ ಮಾತಿನ ಹಿಂದಿನ ಕಹಿ ಸತ್ಯ ದಿನ ಕಳೆದಂತೆ ಒಂದೊಂದಾಗಿ ಹೊರ ಬರುತ್ತಿದೆ. ಕುಮಾರಸ್ವಾಮಿ ಸಾಂಧರ್ಬಿಕ ಶಿಶುವಾಗಲು ಒಪ್ಪಿಕೊಂಡಿದ್ದಾದ್ರು ಏಕೆ ಅನ್ನೋ ಪ್ರಶ್ನೆಗೆ ತಡವಾಗಿಯಾದರು ಉತ್ತರ ಸಿಗುತ್ತಿದೆ..

ರಾಜ್ಯ ಕಾಂಗ್ರೆಸ್ ನಾಯಕರು ಜೆಡಿಎಸ್ ದೊಸ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಾರೆ ಅನ್ನೋದನ್ನು ಅರಿತಿದ್ದ ರಾಹುಲ್ ಗಾಂಧಿ ಕುಮಾರಸ್ವಾಮಿಯೊಂದಿಗೆ ನೇರವಾದ ಸಂಪರ್ಕ ಇಟ್ಟುಕೊಂಡ್ರು… ರಾಜ್ಯದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳ ಬೇಕು ಅಂದ್ರೆ, ಇಲ್ಲಿನ ಸಮನ್ವಯ ಸಮಿತಿಯಲ್ಲಾಗಲಿ , ದೋಸ್ತಿ ನಾಯಕರ ಜೊತೆಯಾಗಲಿ ಕುಮಾರ ಸ್ವಾಮಿ ಅಷ್ಟಾಗಿ ಮಾತನಾಡಲ್ಲ ಅನ್ನೋದು ಸದ್ಯ ಎಲ್ಲೆಡೆ ಕೇಳಿ ಬರುತ್ತಿರೋ ಮಾತು, ಏಕೆಂದ್ರೆ ಸಿಎಂ ತೆಗೆದುಕೊಳ್ಳುವ ತೀರ್ಮಾನಕ್ಕೆ ದೆಹಲಿಯಿಂದನೇ ಕಮಾಂಡ್ ಬರುತ್ತೆ, ಒಂದು ವೇಳೆ ಇಲ್ಲಿ ನಾಯಕರು ಸಿಎಂ ಕೆಲಸಕ್ಕೆ ಅಡ್ಡಗಾಲು ಹಾಕಿದ್ರೆ ಸಿಎಂ ಹೇಳೋದು ಒಂದೇ ಮಾತು ರಾಹುಲ್ ಗಾಂಧಿಗೆ ಫೋನ್ ಮಾಡ್ಲಾ ಅಂತಾ…ಸಾಮಾನ್ಯವಾಗಿ ರಾಹುಲ್ ಗಾಂಧಿ ಯಾರಿಗೂ ತಮ್ಮ ಪರ್ಸನಲ್ ನಂಬರ್ ಕೊಡೋದಿಲ್ಲ, ಆದ್ರೆ ಕುಮಾರಣ್ಣನಿಗೆ ಮಾತ್ರವೇ ನೀಡಿದ್ದಾರೆ.  ಸಮ್ಮಿಶ್ರ ಸರ್ಕಾರ ರಚನೆ ಆದಾಗಿನಿಂದಲೂ ಕುಮಾರಸ್ವಾಮಿ ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಲುಕಿದ್ದಾರೆ, ಆ ಕಾರಣಕ್ಕೆ ಆಡಳಿತ ಯಂತ್ರ ಟೇಕಾಫ್ ಆಗೋದಕ್ಕೆ ಇಷ್ಟು ದಿನ ತೆಗೆದುಕೊಂಡಿರೋದು. ಮೊದಲಿಗೆ ಹಣಕಾಸು ಖಾತೆಗಾಗಿ ಪಟ್ಟು ಹಿಡಿಯಬೇಕಾಗಿ ಬಂತು, ಕಾಂಗ್ರೆಸ್ ನಾಯಕರು ನಾ ಕೊಡೆ ನೀ ಬಿಡೆ ಅನ್ನೋ ಪರಿಸ್ಥಿತಿಯನ್ನ ನಿರ್ಮಿಸಿ ಬಿಟ್ಟಿದ್ದರು. ಇದ್ರ ಮಧ್ಯೆ ಕುಮಾರಸ್ವಾಮಿ ಪೂರ್ಣ  ಅವಧಿಯ ಮುಖ್ಯಮಂತ್ರಿ ಅಲ್ಲ, ಈ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ ಅನ್ನೋ ಮಾತುಗಳು ಕಾಂಗ್ರೆಸ್ ನಲ್ಲೇ ಕೇಳಿ ಬಂದವು. ಈ ಎಲ್ಲಾ ಬೆಳವಣಿಗೆಗಳು, ಹೇಳಿಕೆಗಳು ಕುಮಾರಸ್ವಾಮಿಯವರನ್ನ ರೋಸಿ ಹೋಗುವಂತೆ ಮಾಡಿದ್ದು ಸುಳ್ಳಲ್ಲ. ಹತಾಷೆಯಿಂದಲೇ ಸರ್ಕಾರದ ಭವಿಷ್ಯದ ಕುರಿತಾಗಿ ಕುಮಾರಸ್ವಾಮಿ ಹಲವಾರು ಬಾರಿ ವ್ಯತಿರಿಕ್ತ ಮಾತುಗಳು ಹೇಳಿದ್ರು…ರಾಹುಲ್ ಗಾಂಧಿ ಕುಮಾರಸ್ವಾಮಿಗೆ ಇಷ್ಟೊಂದು ಸ್ವಾತಂತ್ರವನ್ನ ನೀಡಿ, ತಮ್ಮ ಪಕ್ಷದ ನಾಯಕರನ್ನ ಸುಮ್ಮನಿಸಿರೋದಕ್ಕೆ ಒಂದು ಕಾರಣವಿದೆ, ಆ ಕಾರಣ ಬೇರೆ ಏನು ಅಲ್ಲ ಅದು 2019ರ ಲೋಕ ಸಭಾ ಚುನಾವಣೆ…2019ರ ಮಹಾಯುದ್ಧಕ್ಕೆ ಈಗಾಗಲೇ ಸರ್ವ ಪಕ್ಷಗಳು ಬಿರುಸಿನಿಂದ ತಯಾರಿ ನಡೆಸುತ್ತಿವೆ, ರಾಷ್ಟ್ರಾದ್ಯಂತ ತನ್ನ ಕಬಂಧ ಬಾಹುಗಳನ್ನ ವಿಸ್ತರಿಸಿಕೊಂಡಿರೋ ಮೋದಿಯನ್ನ ಸೋಲಿಸಲು ಎಲ್ಲಾ ಪ್ರಾದೇಶಿಕ ನಾಯಕರು ಒಂದಾಗುತ್ತಿದ್ದಾರೆ. ಇದರೊಟ್ಟಿಗೆ ಅಸ್ತಿತ್ವದ ಭಯ ಹೊಂದಿರೋ ಕಾಂಗ್ರೆಸ್ ಕೂಡ ಕೈ ಜೋಡಿಸುತ್ತಿದೆ, ಪ್ರಾದೇಶಿಕ ಪಕ್ಷಗಳ ಪ್ರೀತಿ ಗಳಿಸೋದಕ್ಕೆ ವೇದಿಕೆ ಆಗಿರೋದು ಕರ್ನಾಟರ,  ಆದ್ದರಿಂದ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಫುಲ್ ಸಪೋರ್ಟ್ ನೀಡಿದಂತೆ ಉಳಿದೆಲ್ಲ ರಾಜ್ಯಗಳಲ್ಲೂ ಸಪೋರ್ಟ್ ನೀಡ್ತೇವೆ ಅನ್ನೋ ಸಂದೇಶವನ್ನ ಪರೋಕ್ಷ ರವಾನಿಸೋದು ಕಾಂಗ್ರೆಸ್ ಗೆ ಅನಿವಾರ್ಯ, ಆ ಕಾರಣಕ್ಕೋ ಏನೋ ಕುಮಾರಸ್ವಾಮಿಯ ಸ್ಥಾನಕ್ಕೆ ಯಾವುದೇ ಕುತ್ತು ಬರದಂತೆ ನೋಡಿಕೊಳ್ಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ದೋಸ್ತಿ ಸರ್ಕಾರದಲ್ಲಿ ಬಜೆಟ್ ವಿಚಾರದಲ್ಲಿ ಜಗಳ ಏರ್ಪಟ್ಟಿತ್ತು, ಕುಮಾರಸ್ವಾಮಿ ಹೊಸ ಬಜೆಟ್ ಮಂಡನೆ ಮಾಡೋ ಅವಶ್ಯಕತೆ ಇದ್ಯಾ ಅನ್ನೋ ಪ್ರಶ್ನೆಯನ್ನ ಸಿದ್ದರಾಮಯ್ಯ ಕೇಳಿದ್ರು, ಅಲ್ಲದೇ ಈ ಹಿಂದಿನ ಸರ್ಕಾರಕ್ಕೆ ಪೂರಕ ಬಜೆಟ್ ಮಂಡಿಸಿದ್ರೆ ಸಾಕು ಅನ್ನೋ ಸಲಹೆಯನ್ನೂ ನೀಡಿದ್ರು, ಆದ್ರೆ ಕುಮಾರಸ್ವಾಮಿ ಆ ಸಲಹೆಯನ್ನ ನಯವಾಗಿಯೇ ತಿರಸ್ಕಾರ ಮಾಡಿದ್ರು, ಇದಕ್ಕೆ ಇಬ್ಬರಲ್ಲು ಮುಸುಕಿನ ಗುದ್ದಾಟ ನಡೆದಿದ್ದು ಸುಳ್ಳಲ್ಲ, ಸಿದ್ದು ನಡೆಯಿಂದ ಸಹಜವಾಗಿಯೇ ಬೇಜಾರಾದ ಕುಮಾರಸ್ವಾಮಿ ಲಗ್ಗೆ ಇಟ್ಟಿದ್ದು ದೆಹಲಿಯ ಕಡೆಗೆ, ಸಿದ್ದು ಬೇಡ ಅಂದ್ರೇನು ರಾಹುಲ್ ಇದ್ದಾರಲ್ಲ ಅಂತಾ ರಾಹುಲ್ ಬಳಿಯೇ ಹೋಗಿ ಬಜೆಟ್ ವಿಚಾರವನ್ನ ಮಂಡಿಸಿದ್ರು, ಸುಮ್ಮನೆ ಯಾಕೆ ಜಟಾಪಟಿ ಅಂತಾ ರಾಹುಲ್ ಸಿಎಂ ಮನವಿಗೆ ಅಸ್ತು ಅಂದು ಬಿಟ್ರು, ಅಲ್ಲಿಗೆ ರಾಜ್ಯ ಕಾಂಗ್ರೆಸ್ ನಾಯಕರು ಹೆಸರಿಗಷ್ಟೆ…. ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿ ಇದೆ ಅನ್ನೋ ಸತ್ಯ ಅರಿವಾಗಿ ಹೋಗಿತ್ತು…ಒಟ್ಟಾರೆ ಕಾಂಗ್ರೆಸ್ ನಾಯಕರು ಸಮ್ಮಿಶ್ರ ಸರ್ಕಾರದಲ್ಲಿ ಡಮ್ಮಿ ಫೀಸ್ ಗಳಾಗಿದ್ದಾರೆ, ಹೆಸರಗಷ್ಟೆ ಇಲ್ಲಿ ಆಡಳಿತ ಮಾಡಬೇಕು, ಕುಮಾರಸ್ವಾಮಿ ದಾರಿಗೆ ಮಾತ್ರ ಅಡ್ಡ ಬರುವಂತಿಲ್ಲ, ಅಡ್ಡ ಬಂದ್ರೆ ಒಂದೇ ಒಂದು ಫೋನ್ ಕಾಲ್ ರೋಡ್ ಕ್ಲಿಯರ್…..  ಕುಮಾರಸ್ವಾಮಿಯ ಈ ಅಧಿಪತ್ಯ ಎಲ್ಲಿವರೆಗೂ ನಡೆಯುತ್ತೋ ಕಾದು ನೋಡಬೇಕು, ಏಕೆಂದ್ರೆ ಮುಂದೆ ಬರೋ ಲೋಕಸಭೆ ಈ ಎಲ್ಲಾದಕ್ಕೂ ಫುಲ್ ಸ್ಟಾಪ್ ಇಡಲಿದೆ… 

LEAVE A REPLY

Please enter your comment!
Please enter your name here