Home Elections 2019 HDK ಕುರ್ಚಿಗೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರಾ ಕೈ ನಾಯಕರು.!? HDKಯನ್ನ ಕೆಳಗಿಳಿಸಿ ಮತ್ತೆ ಸಿಎಂ...

HDK ಕುರ್ಚಿಗೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರಾ ಕೈ ನಾಯಕರು.!? HDKಯನ್ನ ಕೆಳಗಿಳಿಸಿ ಮತ್ತೆ ಸಿಎಂ ಆಗ್ತಾರ ಸಿದ್ದರಾಮಯ್ಯ.!? ಸಿದ್ದು ಪಾಲಿಗೆ ದೀಪಾವಳಿ ಧಮಾಕ..ಸಿದ್ದು ಮತ್ತೆ ಸಿಎಂ.!?

1612
0
SHARE

ಈ ಸಮ್ಮಿಶ್ರ ಸರ್ಕಾರಕ್ಕೆ ಯಾವ ಗಾಳಿ ಮೆಟ್ಟಿಕೊಂಡಿದ್ಯೋ ಗೊತ್ತಿಲ್ಲ.. ದಿನಕ್ಕೊಮ್ಮೆಯಾದ್ರು ಕುಮಾರಸ್ವಾಮಿ ಕುರ್ಚಿಗೆ ಕಂಟಕ ಬರುವ ಮಾತುಗಳು ಕೇಳಿ ಬರ್ತಾನೆ ಇರ್ತವೆ. ಅದ್ರಲ್ಲೂ ಕಚ್ಚೆ ಕಟ್ಟಿ ನಿಂತಿರೋ ಬಿಜೆಪಿ ದೋಸ್ತಿ ಸರ್ಕಾರವನ್ನ ಬೀಳಿಸಬೇಕು ಅಂತಾನೆ ನಿಂತಿದೆ. ನಿತ್ಯ ನಿರಂತರವಾಗಿ ಆಪರೇಷನ್ ಕಮಲ ಮಾಡಲು ಪ್ರಯತ್ನ ಮಾಡುತ್ತಲೇ ಇದೆ. ಆಪರೇಷನ್ ವಿಚಾರ ಕೇಳಿ ಬಂದಾಗಲೆಲ್ಲಾ, ದೋಸ್ತಿ ನಾಯಕರು ಬಿಜೆಪಿ ಮೇಲೆ ಮುಗಿ ಬಿದ್ದು ವಾಚಮಗೋಚರವಾಗಿ ಬೈಯ್ದಿದ್ದು ಕಣ್ಣ ಮುಂದೆಯೇ ಇದೆ. ಈ ವಿಚಾರ ಪಕ್ಕಕ್ಕೆ ಇಟ್ಟು ನೋಡಿದ್ರು, ಕುಮಾರಸ್ವಾಮಿಗೆ ಬಿಜೆಪಿಯಿಂದ ಮಾತ್ರವಲ್ಲ ಸ್ವತಃ ಅವರ ದೋಸ್ತಿ ಪಕ್ಷದಿಂದಲೇ ಕಂಟಕ ಇರೋದು ಮಾತ್ರ ಸುಳ್ಳಲ್ಲ.

ಈಗ ಹೊಸದಾಗಿ ಇನ್ನೊಂದು ಸಂಕಟ ಶುರುವಾಗಿದೆ, ಅಂದ ಹಾಗೆ ಆ ಸಂಕಟ ಬೇರೆ ಏನು ಅಲ್ಲ… ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಅನ್ನೋದು.ಕಾಂಗ್ರೆಸ್ ನ ಕೆಲವು ಶಾಸಕರಿಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಬೇಕಂತೆ, ಅಂದ್ರೆ ಇದ್ರ ಅರ್ಥ ಇಷ್ಟೆ, ನಮಗೆ ಕುಮಾರಸ್ವಾಮಿ ಬೇಡ ಅನ್ನೋದು. ಸಧ್ಯಕ್ಕೆ ನಿಧಾನವಾಗಿ ಶುರುವಾಗಿರೋ ಈ ಕೂಗು ಮುಂದಿನ ದಿನದಲ್ಲಿ ಜೋರಾದ್ರು ಅಚ್ಚರಿ ಪಡಬೇಕಿಲ್ಲ. ಅಂದ ಹಾಗೆ ಸಿದ್ದು ಮತ್ತೆ ಸಿಎಂ ಆಗಬೇಕು ಅಂತಾ ಹೇಳುತ್ತಿರೋದು ಯಾರು ಗೊತ್ತಾ ಕಂಪ್ಲಿ ಶಾಸಕ ಗಣೇಶ್. ಇದು ಕೇವಲ ಗಣೇಶ್ ಒಬ್ಬರ ಅಭಿಪ್ರಾಯ ಅಲ್ವಂತೆ. ಬದಲಾಗಿ ಕಾಂಗ್ರೆಸ್ ಶಾಸಕರು ಮತ್ತು, ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವಂತೆ.

ಮೊನ್ನೆ ತಾನೆ ಪ್ರಕಾಶ್ ಜಾವಡೇಕರ್ , ರಾಜ್ಯದಲ್ಲಿ ಧಮಾಕ ಆಗುತ್ತೆ ಅಂತಾ ಬೇರೆ ಹೇಳಿ ಬಿಟ್ರು, ಸೋ ಈ ಮಾತಿಗೆ ದೋಸ್ತಿ ನಾಯಕರು ಜಾವಡೇರ್ ಮೇಲೆ ಮುಗಿ ಬಿದ್ದು, ಯಾವ ಧಮಾಕನು ಇಲ್ಲ ಅಂದು ಬಿಟ್ರು, ಜಾವಡೇಕರ್ ಈ ಮಾತು ಹೇಳಿ ಇನ್ನು ಸರಿಯಾಗಿ 24 ಗಂಟೆಯೂ ಕಳೆದಿರಲಿಲ್ಲ, ಅದಾಗಲೇ ಕಂಪ್ಲಿ ಶಾಸಕ ಗಣೇಶ್ ಧಮಾಕದ ಮುಂದುವರೆದ ಭಾಗವನ್ನ ಸಿಡಿಸಿ ಬಿಟ್ರು. ಅಲ್ಲಿಗೆ ರಾಜ್ಯದಲ್ಲಿ ಅಲ್ಲ ದೋಸ್ತಿ ಸರ್ಕಾರದಲ್ಲಿ ಧಮಾಕ ಶುರುವಾಗಿತ್ತು. ಈ ಧಮಾಕ ಕುಮಾರಸ್ವಾಮಿ ಕುರ್ಚಿಯನ್ನ ಅಲ್ಲಾಡಿಸಿದ್ರೆ, ಸಿದ್ದು ಪಾಲಿಗೆ ದೀಪಾವಳಿ ಧಮಾಕವಾಗಿ ಬಿಟ್ಟಿದೆ.

ಈ ದೋಸ್ತಿ ಸರ್ಕಾರ ಅಸ್ತಿತ್ವದಲ್ಲಿ ಇರೋದು ಬಿಜೆಪಿಗರಿಗೆ ಮಾತ್ರವಲ್ಲ ಕಾಂಗ್ರೆಸ್ ನವರಿಗೂ ಇಷ್ಟವಿಲ್ಲದಂತೆ ಕಾಣುತ್ತೆ. ಏಕೆಂದ್ರೆ ಒಂದು ಕಡೆ ಬಿಜೆಪಿ ಆಪರೇಷನ್ ಹೆಸರಲ್ಲಿ ಸಾಂದರ್ಬಿಕ ಕಂದನನ್ನ ಹೆದರಿಸುತ್ತಿದ್ರೆ, ಮತ್ತೊಂದು ಕಡೆ ಸ್ವತಃ ಕಾಂಗ್ರೆಸ್ ನಾಯಕರೇ ಸಾಂದರ್ಬಿಕ ಕೂಸಿನ ಕತ್ತು ಕೊಯ್ಯಲು ಸಿದ್ದವಾಗಿದ್ದಾರೆ. ಮತ್ತೆ ನಮಗೆ ಸಿದ್ದರಾಮಯ್ಯ ಬೇಕು ಎನ್ನುವ ಮೂಲಕ ಸಿಎಂ ಕುರ್ಚಿಗೆ ಟೈಂ ಬಾಂಬ್ ಫಿಕ್ಸ್ ಮಾಡುತ್ತಿದ್ದಾರೆ. ಈ ಟೈಂ ಬಾಂಬ್ ಅದ್ಯಾವಾಗ ಸಿಡಿಯುತ್ತೋ ಗೊತ್ತಿಲ್ಲ. ಆದ್ರೆ ಸಧ್ಯಕ್ಕಂತು ಸಿದ್ದು ಮತ್ತೊಮ್ಮೆ ಸಿಎಂ ಆಗಬೇಕು ಅಂತಾ ಮಾತು ಕೇಳಿ ಬರುತ್ತಿರೋ ಮಾತ್ರ ಸುಳ್ಳಲ್ಲ.

ರಾಜ್ಯ ಕಾಂಗ್ರೆಸ್ ನಾಯಕರು ಸುಮ್ಮನೆ ಕುಳಿತುಕೊಂಡಿದ್ದಾರೆ ಅಂದ್ರ ಅದಕ್ಕೆ ಹೈ ಕಮಾಂಡ್ ಆಜ್ಞೆಯೇ ಕಾರಣ ಅನ್ನೋದನ್ನ ಬೇರೆ ಹೇಳಬೇಕಿಲ್ಲ. ಇಲ್ಲಿನ ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿರೋದು ಇಷ್ಟವಿಲ್ಲ. ಸೋ ಪರಿಸ್ಥಿತಿ ಹೀಗಿದೆ ಕಾಂಗ್ರೆಸ್ ಯಾವಾಗ ಬ್ಲಾಸ್ಟ್ ಆಗುತ್ತೋ ಗೊತ್ತಿಲ್ಲ. ಯಾಕೆಂದ್ರೆ ಕಾಂಗ್ರೆಸ್ ಅನ್ನು ನಂಬಿ ಸರ್ಕಾರ ಮಾಡಿದ ಯಾವ ಪಕ್ಷವೂ ತನ್ನ ಪೂರ್ತಿ ಅಧಿಕಾರವನ್ನ ಪೂರೈಕೆ ಮಾಡಿಯೇ ಇಲ್ಲ. ಹೇಳುತ್ತಾ ಹೋದ್ರೆ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದ ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಇತಿಹಾಸವನ್ನೇ ಒಮ್ಮೆ ಗಮನಿಸಿದಾಗ ಯಾರಿಗೂ ಕೂಡ ಕಾಂಗ್ರೆಸ್ ಸಂಪೂರ್ಣ ಬೆಂಬಲ ಕೊಟ್ಟಿರೋ ಅಂಶವೇ ದಾಖಲಾಗಿಲ್ಲ. ಸೋ ಈಗಲೂ ಕಾಂಗ್ರೆಸ್ ಅದೇ ದಾರಿಯಲ್ಲಿ ನಡೆಯುತ್ತಾ ಅನ್ನೋದು ಸಧ್ಯಕ್ಕೆ ಎದ್ದಿರೋ ಪ್ರಶ್ನೆ.

ಈ ಮಾತನ್ನ ಯಾಕೆ ಹೇಳ್ತಾ ಇದ್ದೀವಿ ಅಂದ್ರೆ ಸಧ್ಯ ರಾಷ್ಟ್ರದಲ್ಲಿ ಕಾಂಗ್ರೆಸ್ ಅಧೋಗತಿಯನ್ನ ತಲುಪಿದೆ, ಎಲ್ಲಿ ಚಾನ್ಸ್ ಸಿಕ್ಕಿದ್ರು ಅಲ್ಲಿ ಆಡಳಿತ ಮಾಡಬೇಕು ಅಂತಾ ತುದಿಗಾಲಲ್ಲಿ ನಿಂತಿದೆ. ಸೋ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸಧ್ಯ ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಫಲಿತಾಂಶ ಬಂದಿದ್ದೇ ಆದಲ್ಲಿ ಇಲ್ಲಿ ಸರ್ಕಾರ ಉಳಿಯೋದು ಡೌಟು. ಈ ಪಂಚ ಫಲಿತಾಂಶದಲ್ಲಿ ಸಾಂದರ್ಬಿಕ ಕಂದನ ಭವಿಷ್ಯ ಅಡಗಿರೋದು ಮಾತ್ರ ಸುಳ್ಳಲ್ಲ.ಕಾಂಗ್ರೆಸ್ ನಾಯಕರಿಗೆ ಮುಳುವಾಗಿರೋದು ಇದೆ ವಿಷ್ಯ. ಮೊದಲು ಎಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿ ಬಿಡುತ್ತೋ ಅನ್ನೋ ಭಯದಲ್ಲಿ ಏಕಾ ಏಕಿ ಜೆಡಿಎಸ್ ಗೆ ನಮ್ಮ ಭೇಷರತ್ ಬೆಂಬಲ ಅಂದ್ರು ಬಿಟ್ರು. ಜೆಡಿಎಸ್ ಗೂ ಕೂಡ ಬಯಸದೆ ಸಿಎಂ ಪಟ್ಟ ದಕ್ಕಿತ್ತು.

ಸಚಿವ ಸ್ಥಾನದ ಆಕಾಂಕ್ಷಿಗಳು, ತಮ್ಮ ಗೂಟದ ಕಾರಿನ ಕನಸಿಗೆ ಇನ್ನೂ ಎರಡು ವಾರದ ಮೇಲೆ ಚಾತಕ ಪಕ್ಷಿಗಳಂತೆ ಕಾಯಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಆದರೆ, ಸಮ್ಮಿಶ್ರ ಸರಕಾರದ ರಾಜಕೀಯ ಅನುಭವವನ್ನು ಪಕ್ಕಾ ಅರಿತಿರುವ ಆಕಾಂಕ್ಷಿಗಳು, ಡಿಸೆಂಬರ್ 22ಕ್ಕೂ ವಿಸ್ತರಣೆಯಾಗುವುದು ಡೌಟು ಎನ್ನುವ ನಿಲುವನ್ನು ಹೊಂದಿದ್ದಾರೆ. ಸಮನ್ವಯ ಸಮಿತಿಯ ಸಭೆ, ನಿರ್ಧಾರ ಏನೇ ಇರಲಿ, ಸಮ್ಮಿಶ್ರ ಸರಕಾರದಲ್ಲಿ ಅಂತಿಮವಾಗಿ ನಡೆಯುವುದು ಪದ್ಮನಾಭ ನಗರದ ಹುಕುಂ ಹೊರತು ಇನ್ನೇನು ಅಲ್ಲ.. ಸಮನ್ವಯ ಸಮಿತಿ ನಿಗದಿ ಪಡಿಸಿರುವ ಡಿಸೆಂಬರ್ 22, ಹೇಳಿ ಕೇಳಿ ಧನುರ್ಮಾಸ. ಸಮನ್ವಯ ಸಮಿತಿಯ ಅಧ್ಯಕ್ಷರೇನೋ ಇದನ್ನೆಲ್ಲಾ ನಂಬುವುದಿಲ್ಲ. ಆದರೆ, ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ರೇವಣ್ಣನವರು, ಇದನ್ನೆಲ್ಲಾ ನಂಬುತ್ತಾರ. ಮೊದಲೇ ನಿಂಬೆ ಹಣ್ಣು , ವಾಸ್ತು, ದೇವರು , ದಿಂಡಿರು, ಯಜ್ಞ ಯಾಗವನ್ನ ನಂಬುವ ದೇವೆಗೌಡ್ರು ಅಂಡ್ ಫ್ಯಾಮಿಲಿ..

ಇದನ್ನ ಸಾರಸಗಟಾಗಿ ತಳ್ಳಿ ಹಾಕೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಧನುರ್ಮಾಸದಲ್ಲಿ ಯಾವುದೇ ಕಾರಣಕ್ಕೂ ಸಂಪುಟ ವಿಸ್ತರಣೆಗೆ ಮಾಡಲು ಬಿಲ್ ಕುಲ್ ಒಪ್ಪೋದಿಲ್ಲ, ಇದು ಎಲ್ಲರಿಗೂ ಗೊತ್ತಿರೋ ವಿಚಾರ, ಇದನ್ನೆ ಮುಂದಿಟ್ಟು ಕೊಂಡು ಸಂಪುಟ ವಿಸ್ತರಣಾ ಸಮಯ ಮುಂದೆ ಹೋದ್ರು ಅಚ್ಚರಿ ಪಡಬೇಕಿಲ್ಲ.ಬೆಳಗಾವಿ ಅಧಿವೇಶನ ಸುಸೂತ್ರವಾಗಿ ನಡೆಯಲು, ಕೆಲವೊಂದು ಬಿಲ್ ಪಾಸ್ ಮಾಡಲು ಡಿಸೆಂಬರ್ 22ರ ದಿನ ಘೋಷಣೆ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಅದಕ್ಕೂ ಮುನ್ನ ಸಂಪುಟ ವಿಸ್ತರಣೆ ನಡೆದರೆ, ಅತೃಪ್ತರ ಕೂಗು ಹೆಚ್ಚಾಗಬಹುದು, ಅಧಿವೇಶನದಲ್ಲಿ ಮುಜುಗರ ಎದುರಿಸಬೇಕಾಗಿ ಬರಬಹುದು ಎನ್ನುವ ಲೆಕ್ಕಾಚಾರ ಇದರ ಹಿಂದೆ. ಕಾಂಗ್ರೆಸ್ಸಿನಿಂದ ಇಪ್ಪತ್ತು, ಜೆಡಿಎಸ್ ನಿಂದ ಹತ್ತು ಶಾಸಕರಿಗೆ ನಿಗಮ ಮಂಡಳಿಯಲ್ಲಿ ಪ್ರಾತಿನಿಧ್ಯ ನೀಡಲಾಗುವುದು ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇರುವುದರಿಂದ, ಸದ್ಯದ ಮಟ್ಟಿಗೆ ಬಚಾವ್ ಆಗಲು, ಡಿಸೆಂಬರ್ 22ರ ದಿನ ಪ್ರಕಟಿಸಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಜನವರಿಯಲ್ಲಿ ಅಧಿವೇಶನ, ನಂತರ ಬಜೆಟ್ ಅಧಿವೇಶನ ಮುಗಿದ ನಂತರ, ಧನುರ್ಮಾಸ, ಅದಾದ ನಂತರ ಸಂಕ್ರಾಂತಿ, ಅದಾದ ನಂತರ ಜನವರಿಯಲ್ಲಿ ಅಧಿವೇಶನ, ನಂತರ ಬಜೆಟ್ ತಯಾರಿ ಎನ್ನುವ ಕಾರಣಗಳನ್ನು ನೀಡಿ, ಕೊನೆಗೆ ಲೋಕಸಭಾ ಚುನಾವಣೆ ಎಂದು ಇನ್ನೊಂದು ಕಾರಣ ಕೊಟ್ಟು, ಮುಂದಿನ ಕನಿಷ್ಠ ನಾಲ್ಕೈದು ತಿಂಗಳು ಸಂಪುಟ ವಿಸ್ತರಣೆಯ ಕಣ್ಣುಮುಚ್ಚಾಲೆಯನ್ನು ಮುಂದುವರಿಸಲಿದ್ದಾರಾ ಎನ್ನವುದು ಸಧ್ಯಕ್ಕೆ ಮೂಡುತ್ತಿರೋ ಸಂಶಯ,…ಈ ವಿಚಾರ ಜನರಿಗೇ ಕಾಡುತ್ತಿರ ಬೇಕಾದರೆ, ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕಾಡದೇ ಇರುತ್ತಾ?.ಸೋ ಒಟ್ಟಾರೆ ಸಂಪುಟ ವಿಸ್ತಾರಣೆ ಅನ್ನೋದು ಅತೃಪ್ತರ ಪಾಲಿಗೆ ಮೂಗಿದೆ ತುಪ್ಪ ಸುರಿದು ಹಾಗೂ ಹೀಗೂ ಲೋಕ ಸಭೆ ಚುನಾವಣೆವರೆಗೂ ಈ ಸಂಪುಟ ವಿಸ್ತರಣೆ ತೆಗೆದುಕೊಂಡು ಹೋಗುತ್ತೆ. ಅಮೇಲೆ ಏನ್ ಆಗುತ್ತೋ ಆ ದೇವರೇ ಬಲ್ಲ. ಯಾಕೆಂದ್ರೆ ಸಂಪೂಟ ವಿಸ್ತರಣೆ ಆದ್ರೆ ಧಮಾಕ ಆಗಿ ಬಿಡುತ್ತೆ ಅನ್ನೋದು ದೋಸ್ತಿ ನಾಯಕರಲ್ಲಿ ಭಯ ಕಾಡುತ್ತಿರೋದು ನೂರಕ್ಕೆ ನೂರರಷ್ಟು ಸತ್ಯ..

LEAVE A REPLY

Please enter your comment!
Please enter your name here