Home District HDK ಕೈ-ದಳ ಮೈತ್ರಿ ಸರ್ಕಾರ ಹಲವು ಗೊಂದಲಗಳ ನಡುವೆಯೇ ರಾಜ್ಯಭಾರದ ಬಗ್ಗೆ ಹೇಳಿದ್ದು ಹೀಗೆ..?!

HDK ಕೈ-ದಳ ಮೈತ್ರಿ ಸರ್ಕಾರ ಹಲವು ಗೊಂದಲಗಳ ನಡುವೆಯೇ ರಾಜ್ಯಭಾರದ ಬಗ್ಗೆ ಹೇಳಿದ್ದು ಹೀಗೆ..?!

1936
0
SHARE

ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ಸಿಎಂ.ಎಐಸಿಸಿ ಅಧ್ಯಕ್ಷರ ಭೇಟಿ ಮಾಡಿ ಮಾತುಕತೆ ನಡೆಸಿದ ಹೆಚ್‌ಡಿಕೆ.ರಾಜ್ಯ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆ.ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದಕ್ಕಾಗಿ ರಾಹುಲ್‌ಗೆ ಕೃತಜ್ಞತೆ-ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ ವಿಚಾರ.

ಆದಷ್ಟು ಬೇಗ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ.ಇದು ಬಿಟ್ಟು ಬೇರೆ ಯಾವ ವಿಚಾರವನ್ನೂ ಚರ್ಚಿಸಿಲ್ಲ.ಮೈತ್ರಿ ಸರ್ಕಾರ ಇಂದಿಗೆ ನೂರು ದಿನಗಳನ್ನು ಪೂರೈಸುತ್ತಿದೆ.ನಾವು ಹನಿಮೂನ್ ಪಿರಿಯಡ್ ಅಂತ ಒಂದು ವರ್ಷವನ್ನು ಕೇಳುವುದಿಲ್ಲ.ಸೆಪ್ಟೆಂಬರ್‌ನಿಂದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಚಾಲನೆ ಕೊಡುತ್ತೇವೆ.

ರಾಹುಲ್ ಭೇಟಿ ಬಳಿಕ ದೆಹಲಿಯಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ.ನಾನು ಇನ್ನೊಂದು ಸಾರಿ ಬರ್ತೀನಿ ಅಂದುಕೊಂಡಿದ್ದೇನೆ ಅನ್ನುವ ಸಿದ್ದರಾಮಯ್ಯ ಹೇಳಿಕೆ.ಮತ್ತೆ ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದ ಸಿದ್ದು ಹೇಳಿಕೆ ಬಗ್ಗೆ ಎಚ್‌ಡಿಕೆ ಪ್ರತಿಕ್ರಿಯೆ.ಸಿದ್ದರಾಮಯ್ಯನವರು ಈಗಾಗಲೇ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿದ್ದಾಗಿ ತಿಳಿಸಿದ್ದಾರೆ.ಹೀಗಾಗಿ ಸಿದ್ದರಾಮಯ್ಯನವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವುದು ಬೇಡ.ಸಿದ್ದರಾಮಯ್ಯನವರ ನೇತೃತ್ವದಲ್ಲೇ ಮೈತ್ರಿ ಸರ್ಕಾರಕ್ಕೆ ರಕ್ಷಣೆ ಮುಂದುವರಿಯಲಿದೆ.ದೆಹಲಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ…

LEAVE A REPLY

Please enter your comment!
Please enter your name here