Home District “HDK ಗಂಡೂ ಅಲ್ಲ , ಹೆಣ್ಣೂ ಅಲ್ಲ ಎಂಬುವುದನ್ನು ತೋರಿಸಿದ್ದಾರೆ, ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ಧರಾಮಯ್ಯ”...

“HDK ಗಂಡೂ ಅಲ್ಲ , ಹೆಣ್ಣೂ ಅಲ್ಲ ಎಂಬುವುದನ್ನು ತೋರಿಸಿದ್ದಾರೆ, ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ಧರಾಮಯ್ಯ” ಸಂಸದ ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

376
0
SHARE

ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ಧರಾಮಯ್ಯ.ಕುಮಾರಸ್ವಾಮಿ ಟಿಪ್ಪು ಬದಲು ಸಿದ್ಧರಾಮಯ್ಯನ ಜಯಂತಿ ಮಾಡಬಹುದಿತ್ತು ಎಂದು ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಟಿಪ್ಪು ಜಯಂತಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಸದ, ಅಪ್ಪನಿಗೆ ಬೈದ ಋಣ ತೀರಿಸಲು ಸಿದ್ದರಾಮಯ್ಯ ಮಗನಿಗೆ ಅಧಿಕಾರ ಕೊಟ್ಟವರು ಎಂದರು.
ಕುಮಾರಸ್ವಾಮಿ ಟಿಪ್ಪು ಕಾರ್ಯಕ್ರಮದಲ್ಲಿ ಹೆಸರು ಹಾಕಿಸಿಕೊಂಡಿಲ್ಲ.

ಕಾರ್ಯಕ್ರಮದಲ್ಲಿ ಭಾಗವಹಿಸದೆ ಆಚೆಯೂ ಅಲ್ಲ ಈಚೆಯೂ ಅಲ್ಲ ಅಂತಿದ್ದಾರೆ. ಕುಮಾರಸ್ವಾಮಿ ಗಂಡೂ ಅಲ್ಲ , ಹೆಣ್ಣೂ ಅಲ್ಲ ಎಂಬುವುದನ್ನು ತೋರಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಟಿಪ್ಪುವಿನ ಖಡ್ಗ ಪಡೆದ ವಿಜಯ ಮಲ್ಯ ಸೋತು ಸುಣ್ಣವಾದ್ರು.

ಟಿಪ್ಪು ಜಯಂತಿ ಮಾಡಿದ ಸಿದ್ಧರಾಮಯ್ಯ ಅಧಿಕಾರ ಕಳೆದುಕೊಂಡ್ರು.ಮುಂದೆ ಕುಮಾರಸ್ವಾಮಿಯೂ ಅಧಿಕಾರ ಕಳ್ಕೊಂಡು ಕಾಡಿಗೆ ಹೋಗಲಿದ್ದಾರೆ ಎಂದಿದ್ದಾರೆ.ಟಿಪ್ಪು ಜಯಂತಿಗೆ ಮಂಡ್ಯ ಬಿಜೆಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ತಹಶಿಲ್ದಾರರ ಕಛೇರಿಗೆ ತೆರಳಿ ಮನವಿ ಸಲ್ಲಿಸಲ್ಲಿ ಸಿದ ಬಾಜಪ ಮುಖಂಡರು ಕಳೆದ ವರ್ಷ ರೌಡಿಗಳಂತೆ ನಿಷ್ಕ್ರಿಯ ದದ ನಡುವೆಯೂ ಮೆರವಣಿಗೆಯಲ್ಲಿ‌ ಬಂದು ಪೋಲೀಸ್ ಇಲಾಖೆಯನ್ನ ಅಣಕಿಸುವ ರೀತಿ ಜಯಂತಿ ಆಚರಿಸಲಾಯಿತು ಈ ಬಾರಿ ಕೂಡಾನಿಷೇದಾಜ್ಞೆ ನಡುವೆ ಜಯಂತಿ ಆಚರಿಸಲು ಮುಂದಾಗಿರುವುದು ಹೇಯಕರ ಸಂಗತಿ ಅಂತ ಬಿಜೆಪಿ ಜಿಲ್ಲಾದ್ಯಕ್ಷ ನಾಗಣ್ಣ ಗೌಡ ಕಿಡಿಕಾರಿದ್ರು.

LEAVE A REPLY

Please enter your comment!
Please enter your name here