Home District HDK ಗೆ ದೆಹಲಿಯಲ್ಲಿ HDD ಯವರದ್ದೇ ಸಾರಥ್ಯ..?! ಕೇಂದ್ರ ಸಚಿವರ ಭೇಟಿ ಮಾಡುವಾಗಲೂ ಫ್ಯಾಮಿಲಿ..!? ಕಾಂಗ್ರೆಸ್...

HDK ಗೆ ದೆಹಲಿಯಲ್ಲಿ HDD ಯವರದ್ದೇ ಸಾರಥ್ಯ..?! ಕೇಂದ್ರ ಸಚಿವರ ಭೇಟಿ ಮಾಡುವಾಗಲೂ ಫ್ಯಾಮಿಲಿ..!? ಕಾಂಗ್ರೆಸ್ ನ ಯಾವ ಸಚಿವರೂ CM ಜೊತೆಗಿಲ್ಲ

668
0
SHARE

ಮುಖ್ಯಮಂತ್ರಿ ಕುಮಾರಸ್ವಾಮಿ ದೆಹಲಿ ಪ್ರವಾಸದಲ್ಲಿದ್ದಾರೆ..ಕುಮಾರಸ್ವಾಮಿಯವರಿಗೆ ತಂದೆ,ಮಾಜಿ ಪ್ರಧಾನಿ ದೇವೇಗೌಡರು ಸಾಥ್ ನೀಡಿದ್ದಾರೆ..ಇನ್ನು ದೆಹಲಿಗೆ ಹೋದಾಗಲೆಲ್ಲ ಜೊತೆಗೆ ತೆರಳುವ ರೇವಣ್ಣ ಕೂಡ ಹೋಗಿದ್ದಾರೆ..ಅದು ಬಿಟ್ಟು ಮೈತ್ರಿ ಪಕ್ಷ ಕಾಂಗ್ರೆಸ್ ನವರಂತೂ ಯಾರೂ ಅತ್ತ ತಲೆ ಹಾಕಿಲ್ಲ..ಇನ್ನು ಕುಮಾರಸ್ವಾಮಿಯವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್,ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ಋಣಮುಕ್ತ ಕಾಯ್ದೆಯ ಬಗ್ಗೆಯೂ ಚರ್ಚಿಸಿದ್ದಾರೆ..

ಸಾಲ ಮನ್ನಾ ಅರ್ಜಿ ಭರ್ತಿ ಮಾಡುವ ವಿಚಾರದಲ್ಲಿ ರೈತರಿಗೆ ಕಾಲಮಿತಿ ಹಾಕಿಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ದೆಹಲಿಯಿಂದ ಸಿಎಂ ಕೊಟ್ಟಿದ್ದಾರೆ..ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೆಹಲಿ ಪ್ರವಾಸದಲ್ಲಿದ್ದಾರೆ..ರಾಜ್ಯದ ವಿವಿಧ ಯೋಜನೆಗಳು, ಅತಿವೃಷ್ಠಿ ಅನಾವೃಷ್ಠಿ ಪರಿಹಾರದ ವಿಚಾರವನ್ನು ಚರ್ಚಿಸಲು ಅವರು ದೆಹಲಿಯಲ್ಲಿದ್ದಾರೆ..ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು..ಕೊಡಗು ಮತ್ತಿತರೆಡೆ ಅತಿವೃಷ್ಠಿಯಿಂದಾದ ಹಾನಿ ಮತ್ತು ಬರದಿಂದಾದ ನಷ್ಟದ ಬಗ್ಗೆ ಚರ್ಚಿಸಿದರು..

ಆದ್ರೆ ಸಿಎಂ ಕುಮಾರಸ್ವಾಮಿಯವರ ಭೇಟಿಗೆ ತಂದೆ,ಮಾಜಿ ಪ್ರಧಾನಿ ದೇವೇಗೌಡರೇ ನೇತೃತ್ವ ವಹಿಸಿದ್ದು ವಿಶೇಷವಾಗಿತ್ತು..ಇನ್ನು ಎಂದಿನಂತೆ ದೆಹಲಿಗೆ ಜೊತೆಯಲ್ಲೇ ಹೋಗುವ ಸಹೋದರ ಸಚಿವ ರೇವಣ್ಣ ಕೂಡ ಸಾಥ್ ನೀಡಿದರು..ಇಬ್ಬರು ಪುತ್ರರೊಂದಿಗೆ,ದೇವೇಗೌಡರು ರಾಜ್ಯ ಸರ್ಕಾರದ ಅಹವಾಲನ್ನು ಕೇಂದ್ರಕ್ಕೆ ತಲುಪಿಸುವ ಕೆಲಸ ಮಾಡಿದರು..ಆದ್ರೆ ಕಾಂಗ್ರೆಸ್ ನಿಂದ ಸಚಿವರಾದವರಾಗಲಿ, ಇನ್ಯಾವುದೇ ಸಚಿವರಾಗಲಿ ಸಿಎಂ ಜೊತೆ ಇರಲಿಲ್ಲ..ಇದನ್ನು ಬಿಜೆಪಿ ಕೂಡ ಟೀಕೆ ಮಾಡಿದೆ..

ಈಗಲಾದರೂ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವುದು ಯಾರು ಅಂತ ಗೊತ್ತಾಯಿತಾ ಅಂತ ಲೇವಡಿ ಮಾಡಿದೆ..ಮೈತ್ರಿ ಪಕ್ಷ ಕಾಂಗ್ರೆಸ್ ಅನ್ನೇ ಜೆಡಿಎಸ್ ನಿರ್ಲಕ್ಷಿಸಿದೆ ಅಂತ ವ್ಯಂಗ್ಯ ಮಾಡಿದೆ..
ದೆಹಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಋಣ ಮುಕ್ತ ಕಾಯ್ದೆ ಬಗ್ಗೆ ಕೇಂದ್ರ ಗೃಹ ಸಚಿವರೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು..ಹಣಕಾಸು ಇಲಾಖೆಯಿಂದ ಎರಡು ಕ್ಲ್ಯಾರಿಫಿಕೇಷನ್ ಕೇಳಿದ್ದರು ಅದನ್ನು ಸಹ ಕಳಿಹಿಸಿಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.ಖಾಸಗಿ ಸಾಲ ಮಾಡಿದವರು ಭಯಪಡಬೇಕಾಗಿಲ್ಲ..

ಸರ್ಕಾರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧವಿದೆ..ಯಾರೂ ಆತ್ಮಹತ್ಯೆಗೆ ಮುಂದಾಗಬಾರದು ಎಂದು ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ..ಇನ್ನು ಸಾಲ ಮನ್ನಾ ಅರ್ಜಿ ಭರ್ತಿಗೆ ಕಾಲಮಿತಿ ಹಾಕಿಲ್ಲ,ರೈತರು ಈ ವಿಷಯದಲ್ಲಿ ಗಾಬರಿಪಡುವ ಅಗತ್ಯವಿಲ್ಲ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು..ನಿಧಾನವಾಗಿಯೇ ಅರ್ಜಿ ಭರ್ತಿ ಮಾಡಿ,ಕಾಲಮಿತಿ ಹಾಕಿದ್ದಾರೆಂಬ ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದರು.ಸಚಿವ ನಿತೀನ್ ಗಡ್ಕರಿ ಅವರ ಭೇಟಿ ಬಳಿಕ ಪ್ರತಿಕ್ರಿಯಿಸಿದ ಸಿಎಂ,ಮೇಕೆದಾಟು ಯೋಜನೆ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದೇವೆ, ಸಕರಾತ್ಮಕವಾಗಿ ಕೇಂದ್ರದಿಂದ ಸ್ಪಂದನೆ ದೊರೆತಿದೆ ಎಂದು ಹೇಳಿದರು..

LEAVE A REPLY

Please enter your comment!
Please enter your name here