Home District HDK ಜೊತೆ ಹೊಡೆದಾಡ್ತೀನಿ ಅಂದುಕೊಂಡಿದ್ರೆ ಅದು ಭ್ರಮೆ..! ಮಾಟ-ಮಂತ್ರ ನಮ್ಮ ಕುಟುಂಬಕ್ಕೆ ತಟ್ಟಲ್ಲ..! ವಿರೋಧಿಗಳಿಗೆ ಸಚಿವ...

HDK ಜೊತೆ ಹೊಡೆದಾಡ್ತೀನಿ ಅಂದುಕೊಂಡಿದ್ರೆ ಅದು ಭ್ರಮೆ..! ಮಾಟ-ಮಂತ್ರ ನಮ್ಮ ಕುಟುಂಬಕ್ಕೆ ತಟ್ಟಲ್ಲ..! ವಿರೋಧಿಗಳಿಗೆ ಸಚಿವ H.D.ರೇವಣ್ಣ ಮಸ್ತ್ ತಿರುಗೇಟು..!

926
0
SHARE

ದೋಸ್ತಿ ಸರಕಾರ ಬೀಳಲಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಸೇರಿ ಯಾರೇ ಮಾಟ-ಮಂತ್ರ ಮಾಡಿಸಿದ್ರೂ ಸರಕಾರಕ್ಕೆ ಯಾವುದೇ ರೀತಿಯ ಧಕ್ಕೆಯಾಗದು, 5 ವರ್ಷ ಸುಭದ್ರವಾಗಿ ಮುನ್ನಡೆಯಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರಕಾರಕ್ಕೆ ಅಥವಾ ನಮ್ಮ ಕುಟುಂಬಕ್ಕೆ ಮಾಟ-ಮಂತ್ರ ಮಾಡಿಸಿದ್ರೆ ಅದು ಮಾಡಿಸಿದವರಿಗೇ ರಿವರ್ಸ್ ಆಗಲಿದೆ ಎಂದು ನಗುತ್ತಲೇ ಹಾಸನದಲ್ಲಿ ತಿರುಗೇಟು ನೀಡಿದ್ದಾರೆ.

ಇನ್ನೂ ಹೆಚ್ಡಿಕೆ ಜೊತೆ ಜಗಳ ಆಡ್ತೀನಿ ಅನ್ನೋದು ಭ್ರಮೆ ಅಂದಿದ್ದಾರೆ.ಬದುಕಿರುವ ವರೆಗೆ ನನ್ನ ಕುಮಾರಸ್ವಾಮಿ ನಡುವೆ ಜಗಳ ಆಗುವುದಿಲ್ಲ. ಅವರೊಂದಿಗೆ ಹೊಡೆದಾಡಿಸ್ತೀನಿ ಅಂದುಕೊಂಡಿದ್ರೆ ಅದು ಭ್ರಮೆ’ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಮುಖ್ಯಮಂತ್ರಿ ಆಕಾಂಕ್ಷಿನೂ ಅಲ್ಲ. ದೇವೇಗೌಡರು ನಮ್ಮ ನಾಯಕರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ.

ಬೇಕಾದ್ರೆ ಮುಖ್ಯಮಂತ್ರಿಗಳು ಕೆಲಸ ಮಾಡು ಅಂದ್ರೆ ಮಾಡುತ್ತೇನೆ. ಅವರಿಗೆ ಬಲಭುಜವಾಗಿ ನಿಲ್ಲತ್ತೇನೆ ಎಂದರು.ಶೃಂಗೇರಿ ಶಾರಾದಾಂಬೆಯ ಆಶೀರ್ವಾದ, ಗುರುಗಳ ಆಶೀರ್ವಾದ, ಶಿವನ ಅನುಗ್ರಹ ಇರುವವರೆಗೆ ದೇವೇಗೌಡರ ಕುಟುಂಬಕ್ಕೆ ಏನೂ ಮಾಡಲು ಆಗುವುದಿಲ್ಲ. ಮಾಟ ಮಂತ್ರ ಮಾಡಿಸಿದವರಿಗೆ ಅದು ತಿರುಗು ಬಾಣ ಆಗುತ್ತದೆ ಎಂದು ರೇವಣ್ಣ ನಗುತ್ತಲೇ ತಿರುಗೇಟು ನೀಡಿದ್ದಾರೆ.ಸಮ್ಮಿಶ್ರ ಈಗ ಪತನವಾಗಲಿದೆ.

ನಾಳೆ ಆಗಲಿದೆ ಎಂದು ಉಯ್ಯಿಲೆಬ್ಬಿಸುತ್ತಿದ್ದಾರೆ.ನಾನು ಇಂದೇ ಬರೆದುಕೊಡುತ್ತೇನೆ. ಹಾಲಿ ಸರಕಾರ ಯಾವುದೇ ಕಾರಣಕ್ಕೂ ಬೀಳದು.ಸಣ್ಣ ಧಕ್ಕೆಯೂ ಆಗದು ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ…ರಾಜ್ಯದಲ್ಲಿ ಅನೇಕರಿಗೆ ನನ್ನ ಹೆಸರು ಹೇಳದೇ ಹೋದ್ರೆ ಹೊಟ್ಟೆ ತುಂಬೋದಿಲ್ಲ. ನನ್ನನ್ನ ಸೂಪರ್ ಸಿಎಂ ಅಂತಾರೆ. ರಾಜ್ಯದ ಜನತೆ ನನ್ನ ಹೆಸರು ಮರೆಯದಂತೆ ಪುಕ್ಸಟ್ಟೆ ಪ್ರಚಾರ ಕೊಟ್ರೆ ನಾನೇಕೆ ಬೇಡ ಅನ್ನಲಿ ಎಂದು ರೇವಣ್ಣ ಹೇಳದೆಯೇ ವಿರೋಧಿಗಳ ಕಾಲೆಳೆದರು.

LEAVE A REPLY

Please enter your comment!
Please enter your name here