ಕೊಡಗು ಸಂತ್ರಸ್ತರ ಮನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದರು ಮತ್ತು ಸಚಿವರ ನಡುವೆ ಟಾಕ್ ವಾರ್ ನಡೆದಿದೆ. ಕೊಡಗಿನ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ವೇದಿಕೆಯಲ್ಲಿ ಹೇಳಿದ್ರು. ಎನ್ಡಿಆರ್ಎಫ್ನಲ್ಲೂ ಶೇ.75ರಷ್ಟು ಹಣವನ್ನ ಕೇಂದ್ರಸರ್ಕಾರವೇ ನೀಡುತ್ತೆ.
ಆದ್ರೆ ರಾಜ್ಯದಲ್ಲಿ ಕೇಂದ್ರ ಸರ್ಕಾರ ಏನೂ ನೀಡಿಲ್ಲ ಅಂತಿದ್ದಾರೆ. ಮಗುವನ್ನು ಶಾಲೆಗೆ ಸೇರಿಸುವಾಗ ಅಪ್ಪ ಯಾರು ಅಮ್ಮ ಯಾರು ಅಂತ ಬರೀಬೇಕು. ಅದೇ ರೀತಿ ಬಂದ ಹಣಕ್ಕೆ ಅಡ್ರೆಸ್ ಯಾವುದು ಅಂತ ಹೇಳಬೇಕಿದೆ ಎಂದು ಬಹಿರಂಗ ವೇದಿಕೆಯಲ್ಲಿ ರಾಜ್ಯ ಸರ್ಕಾಕ್ಕೆ ಪ್ರತಾರ್ ಸಿಂಹ ಸಿಎಂ ಎದುರೇ ಟಾಂಗ್ ನೀಡಿದ್ರು.
ಇದೇ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಪ್ರತಾಪ್ ಸಿಂಹ ಮೇಲೆ ಗರಂ ಆಗಿ ಭಾಷಣವನ್ನು ನಿಲ್ಲಿಸುವಂತೆ ತಾಕೀತು ಮಾಡಿದ್ರು. ಸಿಎಂ ಗರಂ ಆಗಿದ್ದಕ್ಕೆ ಭಾಷಣ ಮೊಟಕುಗೊಳಿಸಿದ ಪ್ರತಾಪ್ ಸಿಂಹ ಕುರ್ಚಿ ಮೇಲೆ ಬಂದು ಕುಳಿತಾಗ ಸಿಎಂ ಏನ್ರೀ ನೀವು ಕೊಟ್ಟಿರೋದು ಎಂದು ಪ್ರತಾಪ್ ಸಿಂಹಗೆ ವೇದಿಕೆ ಮೇಲೆಯೇ ಜೋರಾಗಿ ಗದರಿದ್ರು. ಕೇರಳಕ್ಕೆ ಕೊಟ್ಟಿರುವ ಅನುದಾನ ಹೆಚ್ಚಿದೆ ಎಂದು ತರಾಟೆಗೆ ತೆಗೆದುಕೊಂಡು.
ಇನ್ನೂ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಚಿವ ಯು.ಟಿ.ಖಾದರ್ ಟಾಂಗ್ ನೀಡಿದ್ದಾರೆ. ರಾಜ್ಯ ಸರ್ಕಾರ ಶಕ್ತಿ ಮೀರಿ ಕೊಡಗು ಜಿಲ್ಲೆಗೆ ಸಹಾಯ ಮಾಡಿದೆ. ಕೇಂದ್ರದೊಂದಿಗೆ ನಾವು ಭಿಕ್ಷೆ ಬೇಡಬೇಕಿಲ್ಲ. ನಮ್ಮ ಟ್ಯಾಕ್ಸ್ ಹಣ ಕೇಂದ್ರ ವಾಪಸ್ ನಮಗೆ ಕೊಟ್ಟಿದೆ ಎಂದು ಟಾಂಗ್ ನೀಡಿದ್ರು.