Home District HDK ಮಂಡಿಸಿದ ಬಜೆಟ್‌ಗೆ ಕಾಂಗ್ರೆಸ್‌ನಲ್ಲಿ ಭಾರೀ ಅಸಮಾಧಾನ ಸ್ಫೋಟ..?! ಮೌನಕ್ಕೆ ಶರಣಾದ ಸಿದ್ದರಾಮಯ್ಯ-ಪರಮೇಶ್ವರ್..?!

HDK ಮಂಡಿಸಿದ ಬಜೆಟ್‌ಗೆ ಕಾಂಗ್ರೆಸ್‌ನಲ್ಲಿ ಭಾರೀ ಅಸಮಾಧಾನ ಸ್ಫೋಟ..?! ಮೌನಕ್ಕೆ ಶರಣಾದ ಸಿದ್ದರಾಮಯ್ಯ-ಪರಮೇಶ್ವರ್..?!

1700
0
SHARE

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಬಜೆಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಜೆಟ್‌ನಲ್ಲಿ ಉತ್ತರ ಕರ್ನಾಟಕ, ಹೈದರಾಬ್ ಕರ್ನಾಟಕ, ಮಲೆನಾಡು ಜಿಲ್ಲೆ ನಿರ್ಲಕ್ಷ್ಯಕ್ಕೆ ಕಿಡಿಕಾರಿದ್ದಾರೆ…

ಹೀಗಾದ್ರೆ ಮುಂದೆ ಕಾಂಗ್ರೆಸ್ ಪಕ್ಷದ ಗತಿ ಏನು ? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ತನ್ನ ಭದ್ರಕೋಟೆಗಳನ್ನ ಕಳೆದುಕೊಳ್ಳುವ ಸ್ಥಿತಿ ತಲುಪುತ್ತಿದೆ. ಮುಂದೆ ಲೋಕಸಭೆ ಚುನಾವಣೆ ಇರುವಾಗ ಈ ಬಜೆಟ್ ಇಟ್ಕೊಂಡು ಏನ್ ಕೇಳೋದು?. ಹೀಗಿರುವಾಗ ಈ ಬಜೆಟ್ ಪಾಸ್ ಕೊಡಿ ಅಂದ್ರೆ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ…

ಸಿದ್ದರಾಮಯ್ಯನವರ ಕಾರ್ಯಕ್ರಮ ಮುಂದುವರಿಕೆ ಅಂದಿದ್ದಾರೆ. ಆದ್ರೆ, ಯಾವುದಕ್ಕೆ ಎಷ್ಟು ಹೇಳಿಲ್ಲ, ಅನುದಾನ ಕಡಿತ ವಾಗಬಹುದು. ಈಗಾಗಲೇ ಅನ್ನಭಾಗ್ಯ ದ ಅಕ್ಕಿ ಕಡಿತ ಮಾಡಿದ್ದಾರೆ.
ಸಾಲ ಮನ್ನಾ ಬೋಗಸ್ ಅಂತ ಜನ ಮಾತಾಡ್ತಾ ಇದ್ದಾರೆ. ನಿಮ್ಮ ಯೋಜನೆಗಳಿಗೆ ನೀವು ಇಟ್ಟಿರುವ ಹಣಕಾಸಿನ ಲಭ್ಯತೆಯನ್ನ ಕಡಿತಗೊಳಿಸಿದ್ರೆ ಕೇಳೊರು ಯಾರು…?

ಎಂದು ಹೆಚ್.ಕೆ.ಪಾಟೀಲ್ ಸೇರಿದಂತೆ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಶಾಸಕರು ಆಕ್ರೋಶದ ಮಾತುಗಳನ್ನಾಡುತ್ತಿದ್ದರೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಮಾತ್ರ ಮೌನಕ್ಕೆ ಶರಣಾಗಿದ್ದರು…ಶಾಸಕಾಂಗ ಪಕ್ಷದ ಸಭೆ ಮುಕ್ತಾಯದ ಬಳಿಕ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯೆ…

ಬಜೆಟ್‌ನಲ್ಲಿ ಮಾಡಲಾಗಿರುವ ತಾರತಮ್ಯದ ಬಗ್ಗೆ ಪ್ರಸ್ತಾಪಿಸಿದ್ದೇನೆ.ವಿದ್ಯುತ್, ಇಂಧನ ದರ ಏರಿಕೆ ಪರಿಣಾಮದ ಬಗ್ಗೆ ಚರ್ಚೆ ನಡೆಸಲಾಗಿದೆ. ಉಪಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಧಾನಸೌಧದಲ್ಲಿ ಶಾಸಕ ಹೆಚ್.ಕೆ.ಪಾಟೀಲ್ ಹೇಳಿಕೆ…

LEAVE A REPLY

Please enter your comment!
Please enter your name here