Home District HDK ರೈತರ ಮನಸ್ಸಿಗೆ ನಾಟುವಂತೆ ಭಾಷಣ | CM ಮಾತಿಗೆ ರೈತರು ಜೇಂಕಾರ | ಮಣ್ಣಿನ...

HDK ರೈತರ ಮನಸ್ಸಿಗೆ ನಾಟುವಂತೆ ಭಾಷಣ | CM ಮಾತಿಗೆ ರೈತರು ಜೇಂಕಾರ | ಮಣ್ಣಿನ ಮಗನನ್ನು ನೋಡಲು ನೂಕು ನುಗ್ಗಲು

1303
0
SHARE

ಆತ್ಮಹತ್ಯೆಗೆ ಶರಣಾಗಬೇಡಿ, ನಿಮ್ಮನ್ನು ಉಳಿಸಿಕೊಡುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ನಾಡಿನ ರೈತರಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ..ನಾಡಿನ ಜನತೆಗೆ ಗಣೇಶನ ಹಬ್ಬದೊಳಗೆ ಮತ್ತೊಂದು ಸಂತಸದ ಸುದ್ದಿ ಕೊಡುವುದಾಗಿಯೂ ಅವರು ತಿಳಿಸಿದ್ದಾರೆ.. ಮಂಡ್ಯದ ಸೀತಾಪುರದಲ್ಲಿ ಭತ್ತ ನಾಟಿ ಮಾಡಿದ ಬಳಿಕ ಮಾತನಾಡಿದ ಅವರು, ತಿಂಗಳು ಒಂದೊಂದು ಜಿಲ್ಲೆಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.

ಆತ್ಮಹತ್ಯೆಗೆ ಶರಣಾಗಬೇಡಿ ಎಂದು ನಾಡಿನ ರೈತರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೊಮ್ಮೆ ಮನವಿ ಮಾಡಿದ್ದಾರೆ..ನಾವು ನಿಮ್ಮನ್ನು ಉಳಿಸಿಕೊಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ..ಮಂಡ್ಯ ಜಿಲ್ಲೆ ಸೀತಾಪುರ ಗ್ರಾಮದಲ್ಲಿ ಭತ್ತದ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಏನೇ ಕಷ್ಟ ಇದ್ರೂ ನನ್ನ ಬಳಿ ಬನ್ನಿ ಎಂದಿದ್ದಾರೆ..

ಗೌರಿ ಗಣೇಶನ ಹಬ್ಬದೊಳಗೆ ನಾಡಿನ ಜನತೆಗೆ ಸಂತಸದ ಸುದ್ದಿ ಕೊಡುವುದಾಗಿ ಅವರು ಹೊಸ ಕಾರ್ಯಕ್ರಮ ರೂಪಿಸಿರುವ ಬಗ್ಗೆ ಕುತೂಹಲ ಮೂಡಿಸಿದ್ದಾರೆ..ಪ್ರತಿ ತಿಂಗಳಿಗೊಮ್ಮೆ ರೈತರೊಂದಿಗೆ ಚರ್ಚಿಸುತ್ತೇನೆ..ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಅವರ ಬಳಿಯೇ ಹೋಗುತ್ತೇನೆ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ..

ಭತ್ತ ನಾಟಿ ಮಾಡುವ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಅವರು, ನಾನು ಡ್ರಾಮಾ ಮಾಡ್ತಾ ಇಲ್ಲ, ಯಾರನ್ನೊ ಮೆಚ್ಚಿಸಲು ಕೆಲಸ ಮಾಡೋದಿಲ್ಲ, ಏನೇ ಮಾಡಿದ್ರೂ ಹೃದಯಪೂರ್ವಕವಾಗಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಬಗ್ಗೆ ವಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ..

ಸಾಲ ಮನ್ನಾ ಮಾತ್ರವಲ್ಲ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.ನಾನು ಯಾವುದೇ ಒಂದು ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ..ಉತ್ತರ ಕರ್ನಾಟಕ ಬೇರೆ ಅಲ್ಲ, ಹಳೆ ಕರ್ನಾಟಕ ಬೇರೆ ಅಲ್ಲ..ಇದು ನಿಮ್ಮ ಸರ್ಕಾರ ಎಂದು ಕುಮಾರಸ್ವಾಮಿ ಹೇಳಿದ್ದಾರೆ..

LEAVE A REPLY

Please enter your comment!
Please enter your name here