Home District HDK ವಿರುದ್ಧವೇ ತೊಡೆ ತಟ್ಟಿದ್ರಾ ಶಿಡ್ಲಘಟ್ಟ JDS ಅಭ್ಯರ್ಥಿ ರವಿಕುಮಾರ್.? HDK ಮಾತನಾಡಿರುವ ಆಡಿಯೋ ಫುಲ್...

HDK ವಿರುದ್ಧವೇ ತೊಡೆ ತಟ್ಟಿದ್ರಾ ಶಿಡ್ಲಘಟ್ಟ JDS ಅಭ್ಯರ್ಥಿ ರವಿಕುಮಾರ್.? HDK ಮಾತನಾಡಿರುವ ಆಡಿಯೋ ಫುಲ್ ವೈರಲ್..?!!

7283
0
SHARE

ಮಾಜಿ ಸಿ.ಎಂ. ಕುಮಾರಸ್ವಾಮಿಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್..ಶಿಡ್ಲಘಟ್ಟ ಶಾಸಕ ರಾಜಣ್ಣ ಗೆ ಜೆಡಿಎಸ್ ಟಿಕೆಟ್ ಕೈತಪ್ಪಿಸಿ ರವಿಕುಮಾರ್ ಗೆ ನೀಡಿದ ಹಿನ್ನೆಲೆ..10 ಕೋಟಿ ಖರ್ಚಾದ್ರೂ ಪರವಾಗಿಲ್ಲ, ರಾಜಣ್ಣ ಗೆಲ್ಲಬೇಕು..ಪಕ್ಷೇತರ ಅಭ್ಯರ್ಥಿಯಾಗಿ ರಾಜಣ್ಣ ಚುನಾವಣೆಗೆ ನಿಲ್ಲಲಿ..ಕುಮಾರಣ್ಣ ಮುಖ್ಯಮಂತ್ರಿ ಆಗಬೇಕಾದ್ರೆ ರಾಜಣ್ಣಗೆ ಮತ ಹಾಕಿ ಅಂತ ಹೇಳಿ..

ಹೌದು..ಸ್ವಪಕ್ಷದವರನ್ನೆ ಸೋಲಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ಶಿಡ್ಲಘಟ್ಟ ಶಾಸಕ ರಾಜಣ್ಣಗೆ ಜೆಡಿಎಸ್ ಟಿಕೆಟ್ ತಪ್ಪಿಸಿ ರವಿಕುಮಾರ್‌ಗೆ ನೀಡಿದ ಹಿನ್ನೆಲೆ ರವಿಕುಮಾರ್‌ರನ್ನು ಸೋಲಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. 10 ಕೋಟಿ ಖರ್ಚಾದ್ರು ಪರವಾಗಿಲ್ಲ, ಪಕ್ಷೇತರ ಅಭ್ಯರ್ಥಿಯಾಗಿ ರಾಜಣ್ಣ ಗೆಲ್ಲಬೇಕು, ಕುಮಾರಣ್ಣ ಮುಖ್ಯಮಂತ್ರಿ ಆಗಬೇಕಾದ್ರೆ, ರಾಜಣ್ಣಗೆ ಮತಹಾಕಿ ಎಂದು ಹೇಳಿದ್ದಾರೆ.

ರವಿಕುಮಾರ್ ನನಗೆ ನೋವು ಕೊಟ್ಟು ಶಿಡ್ಲಘಟ್ಟ ಜೆಡಿಎಸ್ ಟಿಕೆಟ್ ಪಡೆದುಕೊಂಡಿದ್ದಾನೆ, ರವಿಕುಮಾರ್ ಗೆಲ್ಲೊಂದ್ರಿಂದ ನನಗೇನು ಪ್ರಯೋಜನವಿಲ್ಲ, ನಾನು ಶಿಢ್ಲಘಟ್ಟದಲ್ಲಿ ಪ್ರಚಾರ ನಡೆಸುವುದಿಲ್ಲ, ಈಗಾಗಲೇ ಜನರಿಗೆ ಮಾಹಿತಿ ನೀಡಿಯಾಗಿದೆ ಎಂದು ಹೇಳಿದ್ದಾರೆ., ಇನ್ನೂ ಮಾಜಿ ಸಿಎಂ ಕುಮಾರಸ್ವಾಮಿ ಆಡಿಯೋ ಪ್ರಜಾಟಿವಿಗೆ ಲಭ್ಯವಾಗಿದೆ.

ನಾನು ಶಿಡ್ಲಘಟ್ಟಕ್ಕೆ ಎಂಟ್ರಿ ಕೊಡೋದಿಲ್ಲ..ಕುಮಾರಣ್ಣನಿಗೆ ನೋವು ಕೊಟ್ಟು ಕಣ್ಣ್ಣೀರು ಹಾಕಿಸಿ ದೇವೇಗೌಡರ ಹತ್ರ ಸೀಟ್ ತೆಗೆದುಕೊಂಡಿದ್ದಾನೆ..ಕುಮಾರಣ್ಣನಿಗೆ ತೊಡೆತಟ್ಟಿ ಸೀಟ್ ತಕೊಂಡಿದ್ದಾನೆ. ಶಿಡ್ಲಘಟ್ಟ ಜೆಡಿಎಸ್ ಅಭ್ಯರ್ಥಿ ರವಿಕುಮಾರ್ ಪರ ಪ್ರಚಾರ ಮಾಡುವುದಿಲ್ಲ.. ಜೆಡಿಎಸ್ ಮುಖಂಡನ ಜೊತೆ ಕುಮಾರಸ್ವಾಮಿ ಮಾತನಾಡಿರುವ ಆಡಿಯೋ..ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ವಿದಾನಸಭಾ ಕ್ಷೇತ್ರ…

LEAVE A REPLY

Please enter your comment!
Please enter your name here