Home Elections 2018 HDK ವಿರುದ್ಧ ಪ್ರತಿಭಟನೆ ನಡೆಸುವಂತೆ ರಾಜ್ಯ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ವಿದ್ಯಾರ್ಥಿಗಳಿಗೆ ಒತ್ತಾಯ.!!!...

HDK ವಿರುದ್ಧ ಪ್ರತಿಭಟನೆ ನಡೆಸುವಂತೆ ರಾಜ್ಯ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ವಿದ್ಯಾರ್ಥಿಗಳಿಗೆ ಒತ್ತಾಯ.!!! ಪ್ರತಿಭಟನೆಗೆ ಬಾರದ ವಿದ್ಯಾರ್ಥಿಗಳಿಗೆ ಕಿರುಕುಳ ಆರೋಪ..!

1705
0
SHARE

ವಿದ್ಯಾರ್ಥಿಗಳನ್ನ ರಾಜಕೀಯಕ್ಕೆ ಬಳಸಿಕೊಂಡ ಕುರುಬರ ಸಂಘ…ಕುರುಬರ ಸಂಘ ವಿದ್ಯಾರ್ಥಿಗಳನ್ನ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದೆ.. ತನ್ನದೇ ಸಂಘದ ವಿದ್ಯಾರ್ಥಿಗಳನ್ನ ರಾಜಕೀಯ ಪ್ರತಿಭಟನೆಗೆ ಬಳಸಿಕೊಳ್ಳಲು ಮುಂದಾಗಿದ್ದು.. ಪ್ರತಿಭಟನೆಗೆ ಬಾರದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ನೀಡದೆ ಪರದಾಡುವಂತೆ ಮಾಡಿದೆ.. ವಿದ್ಯಾರ್ಥಿಗಳು ತಿರುಗಿ ಬೀಳ್ತಿದ್ದಂತೆ, ನುಲುಚಿಕೊಳ್ಳೋ ಯತ್ನವನ್ನ ಮಾಡಲಾಗಿದೆ…

ಹೌದು.. ರಾಜ್ಯ ಕುರುಬರ ಸಂಘದಲ್ಲಿ ರಾಜಕೀಯ ಆಟ ಶುರುವಾಗಿದೆ.. ಇತ್ತೀಚೆಗೆ ಡಿವೈಎಸ್‌ಪಿ ಕಲ್ಲಪ್ಪ ಹಂಡೀಬಾಗ್ ಪತ್ನಿ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಹೇಳಿಕೆಯನ್ನ ನೀಡಿದ್ರು.. ಇದನ್ನೇ ಗಾಳವಾಗಿ ಮಾಡಿಕೊಂಡ ಕುರುಬರ ಸಂಘ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿ ಹೆಚ್‌ಡಿಕೆ ವಿರುದ್ಧ ಪ್ರತಿಭಟನೆ ನಡೆಸುವಂತೆ, ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ವಿದ್ಯಾರ್ಥಿಗಳಿಗೆ ಒತ್ತಾಯಿಸಿದ್ದಾರೆ…

ಸಂಘದ ಹಿರಿಯರ ನಿರ್ದೇಶನದಂತೆ ಕೆಲ ವಿದ್ಯಾರ್ಥಿಗಳು ಹೆಚ್.ಡಿ.ಕೆ ವಿರುದ್ಧ ಪ್ರತಿಭಟನೆ ನಡೆಸಿದ್ರು.. ಆದ್ರೆ ಕೆಲ ವಿದ್ಯಾರ್ಥಿಗಳು ಪ್ರತಿಭಟನೆಗೆ ಹೋಗದಿರೋದ್ರಿಂದ, ಅವರ ಮೇಲೆ ಹಲ್ಲೆ ಮಾಡಿದ್ದಾರೆ.. ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಅವರ ಮಾತನ್ನ ಕೇಳದಿರೋದ್ರಿಂದ.. ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನ ನೀಡದೆ ಸತಾಯಿಸಿದ್ದಾರೆ.. ಇದರಿಂದ ಆಕ್ರೋಷಗೊಂಡ ವಿದ್ಯಾರ್ಥಿಗಳು, ಸಂಘದ ಸದಸ್ಯರ ನಿರ್ಧಾರವನ್ನ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ..

ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಅವರನ್ನ ಸಮರ್ಥಿಸಿಕೊಂಡಿರೋ, ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ರಾಜಕುಮಾರ್.. ಪ್ರತಿಭಟನೆ ನಡೆಸೋದು ಪ್ರತಿಯೊಬ್ಬರ ಹಕ್ಕು, ಹಾಗಾಗಿ ಮಾಡಿದ್ದಾರೆ. ಅಂತ ಸ್ಪಷ್ಟಪಡಿಸಿದ್ರು…

ಈ ಬಗ್ಗೆ ಪ್ರತಿಕ್ರಿಯಿಸಿರೋ ಹೆಚ್.ಡಿ.ಕೆ ಅಂದು ಕಲ್ಲಪ್ಪ ಹಂಡಿಭಾಗ್ ಕುಟುಂಬಕ್ಕೆ ನೆರವಾಗಿದ್ದು ನಾನು.. ಆಗ ಸಹಾಯ ಮಾಡದ ಸಮುದಾಯದವರು, ಈಗ ನನ್ನ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ.. ಆಗ ಇಲ್ಲದವರು ಈಗೇಕೆ ಬಂದಿದ್ದಾರೆ ಅಂತ ಆಕ್ರೋಷ ವ್ಯಕ್ತಪಡಿಸಿದ್ದಾರೆ…

ಚುನಾವಣೆ ಹೊಸ್ತಿಲಲ್ಲಿ ಎದುರಾಳಿಗಳನ್ನ ರಾಜಕೀಯವಾಗಿ ಮಣಿಸೋದಕ್ಕೆ, ಅಮಾಯಕ ವಿದ್ಯಾರ್ಥಿಗಳನ್ನ ಬಳಸಿಕೊಳ್ಳುತ್ತಿರೋದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಉದ್ಬವವಾಗಿದೆ.. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿದೆ..

 

LEAVE A REPLY

Please enter your comment!
Please enter your name here