Home District HDK-DKS ಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲ, ಕುಮಾರಸ್ವಾಮಿ 5 ವರ್ಷ CM ಆಗಿರಬೇಕು ಮೋದಿಗೆ ನಂಜಾವದೂತ...

HDK-DKS ಗೆ ಕಿರುಕುಳ ಕೊಟ್ರೆ ಸುಮ್ಮನಿರಲ್ಲ, ಕುಮಾರಸ್ವಾಮಿ 5 ವರ್ಷ CM ಆಗಿರಬೇಕು ಮೋದಿಗೆ ನಂಜಾವದೂತ ಸ್ವಾಮೀಜಿ ಖಡಕ್ ವಾರ್ನಿಂಗ್..?!!

6910
0
SHARE

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕೇಂದ್ರ ಸರ್ಕಾರ ಕಿರುಕುಳ ಕೊಟ್ರೆ ಒಕ್ಕಲಿಗರು ಸುಮ್ಮನಿರಲ್ಲ ಎಂದು ನಂಜಾವದೂತ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಕುಮಾರಸ್ವಾಮಿ ಐದು ವರ್ಷ ಸಿಎಂ‌ ಆಗಿರಬೇಕು. ಒಂದು ವೇಳೆ ಕುಮಾರಸ್ವಾಮಿಗೆ ಏನಾದ್ರೂ ಸಮಸ್ಯೆ ಮಾಡಿದ್ರೆ ಈ ಸಮುದಾಯ ಶಕ್ತಿ ಏನು ಅನ್ನೋದನ್ನ ರಾಷ್ಟ್ರಮಟ್ಟದಲ್ಲಿ ತೋರಿಸುತ್ತೇವೆ…ಸದಾನಂದಗೌಡ ಕಾರ್ಯಕ್ರಮಕ್ಕೆ ಬಂದಿದ್ರೆ, ಅವ್ರ ಮೂಲಕ‌ ಮೋದಿಗೆ ಸಂದೇಶ ರವಾನೆ ಮಾಡಬಹುದಿತ್ತು ಕೇಂದ್ರ ಸರ್ಕಾರ ಕುಮಾರಸ್ವಾಮಿ ಸರ್ಕಾರಕ್ಕೆ ಅನಗತ್ಯ ತೊಂದ್ರೆ ಮಾಡಬಾರದು. ಒಂದು ವೇಳೆ ಸಮಸ್ಯೆ ಉಂಟು ಮಾಡಿದ್ರೆ, ಮುಂದಿನ‌‌ ಚುನಾವಣೆಯಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ…

ಮೈತ್ರಿ ಸರ್ಕಾರ ರಚನೆ ವೇಳೆ ಡಿ ಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ರು. ಹೀಗಾಗಿಯೇ ಡಿ ಕೆ ಶಿವಕುಮಾರ್ ಗೆ ಸಮಸ್ಯೆ ಮಾಡಲಾಗುತ್ತಿದೆ.ಈ ಬಗ್ಗೆ ನಮಗೆ ಎಲ್ಲ ಮಾಹಿತಿ ಇದೆ. ಮುಂದಿನ‌ ದಿ‌ನಗಳಲ್ಲಿ ಈ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ಅತಂತ್ರ ಚುನಾವಣಾ ಫಲಿತಾಂಶ ಬಂದ್ರೆ ಕುಮಾರಸ್ವಾಮಿ ಅವ್ರನ್ನ ಮುಖ್ಖಮಂತ್ರಿ ಮಾಡುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದರು…

ಕೊಟ್ಟ ಮಾತನ್ನ ಡಿ ಕೆ ಶಿವಕುಮಾರ್ ಉಳಿಸಿಕೊಂಡಿದ್ದಾರೆ. ಕುಮಾರಸ್ವಾಮಿ ಐದು ವರ್ಷ ಸಿಎಂ ಆಗಿ ಉಳಿಸಿಕೊಳ್ಳುವ ಜವಾಬ್ದಾರಿ ಡಿ ಕೆ ಶಿವಕುಮಾರ್ ಹೆಗಲಿಗೆ ಇದೆ.ಈ ಸಮುದಾಯ ಗುರುತರ ಜವಾಬ್ದಾರಿ ಡಿ ಕೆ ಶಿವಕುಮಾರ್ ನೀಡಲಾಗ್ತಿದೆ. ಈ ದೇಶ ತಿರುಗಿ ನೋಡುವಂತ ಕ್ಷೀಪ್ರಕ್ರಾಂತಿ ಆಗಬೇಕಾದ್ರೆ ಅದು ಎಚ್ ಡಿ ಕುಮಾರಸ್ವಾಮಿ ಹಾಗು ಡಿ ಕೆ ಶಿವಕುಮಾರ್ ಕಡೆಯಿಂದ ಮಾತ್ರ ಸಾಧ್ಯ ಎಂದು ನಂಜಾವದೂತ ಸ್ವಾಮೀಜಿ ಹೇಳಿದ್ದಾರೆ…

LEAVE A REPLY

Please enter your comment!
Please enter your name here