ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶೀರ್ವಾದದಿಂದ ನಾನು ಈಗ ಬದುಕುತ್ತಿದ್ದೇನೆ: ಸಚಿವ ಕೆ.ಸಿ.ನಾರಾಯಣ

ಜಿಲ್ಲೆ

ಮಂಡ್ಯ: ನಾನು ಈ ಮಟ್ಟಕ್ಕೆ ಬೆಳೆಯಬೇಕಾದರೆ ಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಕಾರಣ ಎಂದು ಸಚಿವ ಕೆ.ಸಿ.ನಾ ರಾಯಣ ಗೌಡ ಹೇಳಿದ್ದಾರೆ. ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶೀರ್ವಾದದಿಂದ ನಾನು ಈಗ ಬದುಕುತ್ತಿದ್ದೇನೆ. ಮಂಡ್ಯದ ಸುಪುತ್ರ ಯಡಿಯೂರಪ್ಪ ಅವರ ಆಶೀರ್ವಾದದಿಂದ ಮಂತ್ರಿಯಾಗಿದ್ದೇನೆ. ಕೆ.ಆರ್.ಪೇಟೆ ಶಿಕಾರಿಪುರ ಆಗುತ್ತೆ ಅಂತ ಹೇಳಿದ್ರು. ಈ ತಾಲೂಕು ಈಗ ಎರಡನೇ ಶಿಕಾರಿಪುರ ಆಗುತ್ತೆ. ಯಡಿಯೂರಪ್ಪ ಅವರು ಮಾಡಿದ ಆಶೀರ್ವಾದದಿಂದ ಇವತ್ತು ಈ ಮಟ್ಟಕ್ಕೆ ಅಭಿವೃದ್ಧಿಯಾಗ್ತಿದೆ ಎಂದು ಮಾಜಿ ಸಿಎಂ ಯಡಿಯೂ ರಪ್ಪರನ್ನ ಹಾಡಿ ಹೊಗಳಿದರು.

Leave a Reply

Your email address will not be published.