ನೀರಿನ ವಿಚಾರಕ್ಕೆ ಹೊಡೆದಾಡಿಕೊಂಡ ಹೆಡ್ ಕಾನ್ಸಟೇಬಲ್..! ಸಿಸಿಟಿವಿಯಲ್ಲಿ ಸೆರೆ

ಜಿಲ್ಲೆ

ಹುಬ್ಬಳ್ಳಿ: ಹೆಡ್ ಕಾನ್ಸಟೇಬಲ್ ಪ್ರಭು ಪುರಾಣಿಕಮಠ ಹಾಗೂ ಭರತ್ ಜೈನ್ ಪರಸ್ಪರ ಹೊಡೆದಾಡಿಕೊಂಡಿದ್ದ ಘಟನೆಗೆ ಸಂಬಂಧಿ ಸಿದಂತೆ ಇದೀಗ ಸಿಸಿ ಟಿವಿ ಪುಟೇಜ್ ದೊರೆತಿದ್ದು, ಅದರಲ್ಲಿ ಪ್ರಮುಖ ಅಂಶಗಳು ಬೆಳಕಿದೆ ಬಂದಿದೆ. ಹೌದು, ಕಳೆದ ಎರಡು ದಿನಗಳ ಹಿಂದೆ ಹಳೇಹುಬ್ಬಳ್ಳಿಯ ಸಹದೇವನಗರದಲ್ಲಿ ಹೆಡ್ ಕಾನ್ಸಟೇಬಲ್ ಪ್ರಭು ಪುರಾಣಿಕಮಠ ಹಾಗೂ ಭರತ್ ಜೈನ್ ಎಂಬುವವರು ನೀರಿನ ವಿಚಾರಕ್ಕೆ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಸಿಸಿ ಕ್ಯಾಮರಾ ದೃಶ್ಯಾವಳಿಗಳು ಸಿಕ್ಕಿದೆ.ಈ ದೃಶ್ಯಾವಳಿಗಳಲ್ಲಿ ಹೆಡ್ ಕಾನ್ಸಟೇಬಲ್ ಪ್ರಭು ಪುರಾಣಿಕಮಠ ಭರತ್ ಜೈನ್ ನಿಮ್ಮ ಮನೆಯ ನೀರು ನಮ್ಮ ಮನೆಯ ಕಾಂಪೌಂಡ್ ಒಳಗೆ ಬೀಳುತ್ತಿದೆ.

ಅದನ್ನು ಸರಿಪಡಿಸಿ  ಎಂದು ಹೇಳಲು ಹೋಗಿದ್ದರಂತೆ. ಆಗ ಪರಸ್ಪರ ಮಾತಿಗೆ ಬೆಳೆದು ಜಗಳ ಆಗಿದೆ. ಆಗ ಹೆಡ್ ಕಾನ್ಸಟೇಬಲ್ ಪುರಾಣಿ ಕಮಠ ತಮ್ಮ ಮನೆಯ ಕಾಂಪೌಂಡ್ ಜಿಗಿದು ಭರತ್ ಜೈನ್ ಗೆ ಎರಡು ಹೊಡೆದಿದ್ದಾರೆ. ನಂತರ ಇದರಿಂದ ಕುಪಿತಗೊಂಡ ಭರತ್ ಕೂಡಾ ಪುರಾಣಿಕಮಠ ಅವರ ಮೇಲೆ ಕಲ್ಲು ತೂರಿದ್ದಾರೆ. ಇದಕ್ಕೆ ಪ್ರತಿಯಾಗಿ ಪುರಾಣಿಕಮಠ ಅವರು ಕಬ್ಬಿಣದ ರಾಡ್ ತಂದು ಭರತ್ ಜೈನ್ ಅವರನ್ನು ನಡುರಸ್ತೆಯಲ್ಲಿ ಕೆಡವಿ ಮನಬಂದಂತೆ ಹಲ್ಲೇ ಮಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಳೇಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂ ಡಿದ್ದಾರೆ.

Leave a Reply

Your email address will not be published.