Heavy Rain.. ಮಳೆಗಾಲದಲ್ಲಿ ಬದುಕಲೂ ಕಷ್ಟ.. ಸತ್ತರೂ ಕಷ್ಟ: ನೀರಿನಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು..!

ಜಿಲ್ಲೆ

ಮಂಡ್ಯ : ರಾಜ್ಯದಲ್ಲಿ ಮಳೆಯ ಆರ್ಭಟ ಕಡಿಮೆಯಾಗೋ ಲಕ್ಷಣವೇ ಕಾಣ್ತಿಲ್ಲ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ಜನರಿಗೆ ಎಂಥಾ ಸ್ಥಿತಿ ಬಂದಿದೆ. ರಸ್ತೆಯಿಲ್ಲದೇ ಜನರು ಶವವನ್ನು ನೀರಿನಲ್ಲೇ ಹೊತ್ತು ಸಾಗಿದ್ದಾರೆ. ಕಾವೇರಿ ಭೋರ್ಗರೆತಕ್ಕೆ ಜಲಾವೃತವಾಗಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಮಶಾನ ಜಾಗಕ್ಕೆ ರಸ್ತೆಯಿಲ್ಲದೇ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕ್ಯಾನ್ಸರ್‌ನಿಂದ ಸಮಸ್ಯೆಯಿಂದ ಸಾವನ್ನಪ್ಪಿದ್ದ ಸುಲೋಚನಎಂಬ ಮಹಿಳೆಯ ಶವಸಾಗಿಸಲು ಕುಟುಂಬಸ್ಥರು ಹರಸಾಹಸ ಪಟ್ಟಿದ್ದಾರೆ. ಹಳ್ಳದ ನೀರಿನಲ್ಲೇ ಹೊತ್ತುಕೊಂಡು ಸಾಗಿ, ಸುರಿವ ಮಳೆಯಲ್ಲಿ ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿ ಸಿದ್ದಾರೆ.

Leave a Reply

Your email address will not be published.