ಭಾರೀ ಗಾಳಿ ಮಳೆಗೆ ಮರ ಬಿದ್ದು ಕಾರ್ಮಿಕ ಸ್ಥಳದಲ್ಲೇ ಸಾವು..!

ಜಿಲ್ಲೆ

ಕೊಡಗು : ಭಾರೀ ಗಾಳಿ ಮಳೆಗೆ ಮರ ಬಿದ್ದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಅಮ್ಮತ್ತಿ in ಹೊಸಕೋಟೆ ಸಮೀಪದ ಹಿಲ್ ಸೈಡ್ ಎಸ್ಟೇಟ್ ನಲ್ಲಿ ನಡೆದಿದೆ. ಗುಹ್ಯ ಕಕ್ಕಟಕಾಡು ನಿವಾಸಿ ಪ್ರೀನಾ ಎಂಬುವವರ ಪತಿ ಪ್ರಕಾಶ್ (52) ಮೃತ ದುರ್ದೈವಿ.

ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಜೋರಾಗಿ ಗಾಳಿ ಬೀಸಿದ ಪರಿಣಾಮ ಬೃಹತ್ ಗಾತ್ರದ ಮರವೊಂದು  ಕಾರ್ಮಿಕನ ಮೇಲೆ ಬಿದ್ದಿದ್ದು, ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಕಾರ್ಮಿಕ ರಘು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೃತ ಪ್ರಕಾಶ್ ಹೆಂಡತಿ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published.