ಪಾದಯಾತ್ರೆಯಿಂದ ಟ್ರಾಫಿಕ್ ನಲ್ಲಿ ಹೈರಾಣಾದ ಜನರಿಂದ ಹಿಡಿಶಾಪ: ಕ್ಷಮೆಯಾಚಿಸಿದ ಕೆಪಿಸಿಸಿ

ಬೆಂಗಳೂರು

ಬೆಂಗಳೂರು: ವಾರಂತ್ಯದ ದಿನ ಮತ್ತು ಶಿವರಾತ್ರಿ ರಜೆಯೂ ಇರುವುದರಿಂದ ಮೈಸೂರು ಭಾಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಪಾದಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಭಾನುವಾರ ಮತ್ತು ಸೋಮವಾರ ಪಾದಯಾತ್ರೆಯ ಎಫೆಕ್ಟ್ ನಿಂದಾಗಿ ಜನರು ಹೈರಾಣರಾದರು. ಜನರು ಹಿಡಿಶಾಪ ಹಾಕುವುದನ್ನು ಅರಿತ ಕೆಪಿಸಿಸಿ, ಟ್ವಿಟ್ಟರ್ ಮೂಲಕ ಜನತೆಯ ಕ್ಷಮೆಯಾಚಿಸಿ ಈ ಹೋರಾಟ ನಿಮಗಾಗಿ, ಮಾರ್ಚ್ ಮೂರರವರೆಗೆ ನಮ್ಮೊಂದಿಗೆ ಸಹಕರಿಸಿ ಎಂದು ಮನವಿ ಮಾಡಿತು.

Leave a Reply

Your email address will not be published.