ಹೆಚ್ಚಿನ ಬಸ್ ವ್ಯವಸ್ಥೆ ಮಾಡದಿದ್ರೆ ಶಾಲೆಗೆ ಹೋಗಲ್ಲ: ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟ ವಿದ್ಯಾರ್ಥಿಗಳು

ಬೆಂಗಳೂರು

ಕಲಬುರಗಿ: ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಪಸ್ತಾಪೂರ್ ಗ್ರಾಮದ ವಿದ್ಯಾರ್ಥಿಗಳು ತಮ್ಮ ಊರಿಗೆ ಹೆಚ್ಚುವರಿ ಬಸ್​ ಬಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಶಾಲೆಗೆ ರಜೆ ಹಾಕಿ ಕಾಳಗಿ ಬಸ್ ಡಿಪೋ ಎದುರು ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿಗಳು, ತಮ್ಮ ಊರಿಗೆ ಹೆಚ್ಚುವರಿ ಬಸ್​ ಬಿಡುವಂತೆ ಆಗ್ರಹಿಸಿದ್ದಾರೆ.

ಹುಮನಾಬಾದ್ ಡಿಪೋದಿಂದ ಕಾಳಗಿಯಿಂದ ಪಸ್ತಾಪೂರ್ ಹಾಗೂ ಸುಲೇಪೇಟೆಗೆ ಕೇವಲ ಒಂದೇ ಒಂದು ಬಸ್ ಸಂಚಾರ ಮಾಡುತ್ತಿದೆ. ಒಂದೇ ಬಸ್​ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಹೆಚ್ಚಿನ ಬಸ್ ಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ

 

Leave a Reply

Your email address will not be published.