ಹೈಟೆಕ್ ಮಾದರಿಯಲ್ಲಿ ರೈಸ್ ಪುಲ್ಲಿಂಗ್ ದಂಧೆ: CCB ಪೊಲೀಸರಿಂದ ಐವರು ಆರೋಪಿಗಳು ಅರೆಸ್ಟ್

ಬೆಂಗಳೂರು

ಬೆಂಗಳೂರು: ಹೈಟೆಕ್ ಮಾದರಿಯಲ್ಲಿ ರೈಸ್ ಪುಲ್ಲಿಂಗ್ ದಂಧೆ ನಡೆಸುತ್ತಿದ್ದ, ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ದ್ದಾರೆ. ಜನರ ಮೂಢನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಕಳೆದ ಎರಡು – ಮೂರು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದರು ಎನ್ನಲಾಗ್ತಿದೆ. ಆರೋಪಿಗಳಾದ ವಂಶಿ ಸಾಯಿ, ರಾಮ್ ಸಾಯಿ ನಾಯ್ಡು, ವರುಣ್, ಕೃಷ್ಣ ಹಾಗೂ ಅಶೋಕ್ ಬಂಧಿತರು.ಇವರಿಂದ ರೈಸ್ ಪುಲ್ಲಿಂಗ್‌ ಮಿಷನ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ‌.

ಆರೋಪಿಗಳೆಲ್ಲರೂ ಬಿ.ಟೆಕ್, ಏರೋನಾಟಿಕ್ ಇಂಜಿನಿಯರ್ ಹಾಗೂ ಡಿಪ್ಲೋಮಾ ವ್ಯಾಸಂಗ ಮಾಡಿದ್ದಾರೆ. ತಮ್ಮ ಬಳಿ ಬೆಲೆಬಾಳುವ ರೈಸ್ ಪುಲ್ಲಿಂಗ್ ಮಾಡುವ ವಸ್ತುವಿದ್ದು, ಇದನ್ನ ಏರೋನಾಟಿಕ್ಸ್ ಇಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ರಾಕೆಟ್ ಉಡಾವಣೆಗೆ ಬಳಸಲಾಗುತ್ತದೆ. ಇದಕ್ಕೆ ವಿದೇಶದಲ್ಲಿ ಹೆಚ್ಚು ಡಿಮ್ಯಾಂಡ್ ಇದೆ ಎಂದು ಹೇಳಿ ಜನರನ್ನು ಯಾಮಾರಿಸುತ್ತಿದ್ದರು. ಇದೇ ರೀತಿ, ನಗರದ ಮಹಿಳೆಗೆ 35 ಲಕ್ಷ ರೂ.ಗೆ ಮಾರಾಟ ಮಾಡಲು ಡೀಲ್‌ ಕುದುರಿಸಿಕೊಂಡ ಆರೋಪಿಗಳು ಮುಂಗಡವಾಗಿ ಐದು ಲಕ್ಷ ಪಡೆದಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ ಸಿಸಿಬಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದೆ‌.

 

Leave a Reply

Your email address will not be published.