Home Latest ಹಿಮಾಚಲ ಪ್ರದೇಶ ಹೈ ಅಲರ್ಟ್; ಆತಂಕದಲ್ಲಿ ಗಡಿಭಾಗದ ಜನ   

ಹಿಮಾಚಲ ಪ್ರದೇಶ ಹೈ ಅಲರ್ಟ್; ಆತಂಕದಲ್ಲಿ ಗಡಿಭಾಗದ ಜನ   

93
0
SHARE

ಹಿಮಾಚಲ ಪ್ರದೇಶ: ಲಡಾಖ್​ನ ಗಾಲ್ವನ್​ ಕಣಿವೆಯಲ್ಲಿ ಭಾರತ – ಚೀನಾ ನಡುವಿನ ಗಲಾಟೆ ಹಿಂಸಾತ್ಮಕ ರೂಪಪಡೆದಿರುವ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಅಲ್ಲಿನ ಸರ್ಕಾರ ಹೈ ಅಲರ್ಟ್​ ಘೋಷಣೆ ಮಾಡಿದೆ.ಅಲ್ಲಿನ ಲೈನ್​ ಆಫ್​ ಆಕ್ಚುವಲ್​ ಕಂಟ್ರೋಲ್​ ಬಳಿಯಿರುವ ಪ್ರದೇಶಗಳಾದ ಕಿನ್ನೌರ್​​, ಲಾಹೌಲ್​ – ಸ್ಪಿತಿ ಜಿಲ್ಲೆಗಳಲ್ಲಿ ಜನರ ಸುರಕ್ಷತೆ ದೃಷ್ಟಿಯಿಂದ ಹೈ – ಅಲರ್ಟ್​ ಘೋಷಣೆ ಮಾಡಲಾಗಿದೆ. ಈ ಸಂಬಂಧ ಎಲ್ಲ ಇಂಟೆಲಿಜೆನ್ಸ್​ ಏಜೆನ್ಸಿಗಳನ್ನು ಅಲರ್ಟ್​ ಮಾಡಲಾಗಿದೆ ಎಂದು ಹಿಮಾಚಲ ಪ್ರದೇಶ ರಾಜ್ಯದ ಪೊಲೀಸ್ ವಕ್ತಾರ ಕುಶಾಲ್​ ಶರ್ಮ ವ್ಯಕ್ತಪಡಿಸಿದ್ದಾರೆ.

ಚೀನಾ ಮತ್ತು ಭಾರತದ ಸಂಘರ್ಷದಿಂದ ಗಡಿಗೆ ಸಮೀಪದಲ್ಲಿರುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂಟೆಲಿಜೆನ್ಸ್​ನಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಕುಶಾಲ್​ ಶರ್ಮ ಸ್ಪಷ್ಟಪಡಿಸಿದ್ದಾರೆ. ಕಿನ್ನೌರ್​ ಜಿಲ್ಲೆಯಲ್ಲಿ ಸುಮಾರು 14 ಗ್ರಾಮಗಳಿದ್ದು, ಸ್ಥಳೀಯರಿಗೆ ಗಡಿಭಾಗಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ಈ ಗ್ರಾಮಗಳಲ್ಲಿ ಸೇನಾ ವಾಹನಗಳು ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

LEAVE A REPLY

Please enter your comment!
Please enter your name here