Home District ಹಿಟ್ ಅಂಡ್ ರನ್ ಗೆ ವೃದ್ದ ಬಲಿ!

ಹಿಟ್ ಅಂಡ್ ರನ್ ಗೆ ವೃದ್ದ ಬಲಿ!

ಹಿಟ್ ಅಂಡ್ ರನ್ ಗೆ ವೃದ್ದ ಬಲಿ!

387
0

ಚಾಮರಾಜನಗರ : ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ವೃದ್ದರೊಬ್ಬರು ಹಿಟ್ ಅಂಡ್ ರನ್ ಗೆ ಸಿಕ್ಕಿಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ 9 ಗಂಟೆಗೆ ಸಂಭವಿಸಿದೆ. ದೊಡ್ಡರಾಯಪೇಟೆ ಗ್ರಾಮದ ಸಿದ್ದಯ್ಯ (75) ಎಂಬ ವೃದ್ದರು ಬಹಿರ್ದೆಸೆಗೆ ತೆರಳಿದ್ದರು. ಅಪರಿಚಿತ ವಾಹನವೊಂದು ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಪರಾರಿಯಾಗಿದೆ.

ಹಿಟ್ ಅಂಡ್ ರನ್ ನಿಂದ ಸಾವನ್ನಪ್ಪಿದ ಸಿದ್ದಯ್ಯನವರ ಮೃತ ದೇಹ ದೊಡ್ಡರಾಯಪೇಟೆಯ ಮುಖ್ಯ ರಸ್ತೆಯ ಮಧ್ಯೆ ಭಾಗದಲ್ಲಿ ಅನಾಥವಾಗಿ ರಕ್ತದ ಮಡುವಿನಲ್ಲಿ ಬಿದ್ದಿತ್ತು.ಘಟನೆಯ ಸುದ್ದಿ ದೊಡ್ಡರಾಯಪೇಟೆ ಗ್ರಾಮದಲ್ಲಿ ಹರಡುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ವೀಕ್ಷಿಸಿದರು. ರಕ್ತದ ಮಡುವಿನಲ್ಲಿ ಸಿದ್ದಯ್ಯನವರು ಮೃತರಾಗಿದ್ದು ಕಂಡು ಸಂಭಂಧಿಕರ ನೋವಿನ ಅಳಲು ಮುಗಿಲು ಮುಟ್ಟುವಂತ್ತಿತ್ತು.

ಗ್ರಾಮಸ್ಥರು ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೊಲೀಸರು ಮಹಜರ್ ನಡೆಸಿ ಅಪಘಾತ ನಡೆಸಿದ ವಾಹನ ಪತ್ತೆಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ.

VIAಹಿಟ್ ಅಂಡ್ ರನ್ ಗೆ ವೃದ್ದ ಬಲಿ!
SOURCEಹಿಟ್ ಅಂಡ್ ರನ್ ಗೆ ವೃದ್ದ ಬಲಿ!
Previous articleಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಜೀಪು; 10ಜನರಿಗೆ ಗಾಯ; ಓರ್ವ ಸ್ಥಳದಲ್ಲೇ ಸಾವು
Next articleಹತ್ಯೆ ಮಾಡಿ ನೇಣು ಬಿಗಿದ ಕಿಡಿಗೇಡಿಗಳು!

LEAVE A REPLY

Please enter your comment!
Please enter your name here