ಸರಣಿ ಹತ್ಯೆಗಳ ಬೆನ್ನಲ್ಲೇ ರಾಜ್ಯಕ್ಕೆ ಭೇಟಿ ನೀಡಲಿರುವ ಗೃಹ ಸಚಿವ ಅಮಿತ್ ಷಾ

ಬೆಂಗಳೂರು

ಬೆಂಗಳೂರು: ಬೆಳ್ಳಾರೆ ಪ್ರವೀಣ್‌ ನೆಟ್ಟಾರು ಹತ್ಯೆಯ ಬಳಿಕ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ವಿರುದ್ಧವೇ ಸಿಟ್ಟು ಹೊರ ಹಾಕುತ್ತಿರುವ ಬೆನ್ನಲ್ಲೇ ಈಗ ಗೃಹ ಸಚಿವ ಅಮಿತ್‌ ಶಾ ಶೀಘ್ರವೇ ಕರ್ನಾಟಕಕ್ಕೆ ಬರುವ ಸಾಧ್ಯತೆಯಿದೆ. ಆಗಸ್ಟ್ 4ರಂದು ರಾಜ್ಯಕ್ಕೆ ದಿಢೀರ್‌ ಭೇಟಿ ನೀಡಲು ಅಮಿತ್ ಶಾ ಪ್ಲ್ಯಾನ್ ಮಾಡಿದ್ದಾರೆ. ಮಂಗಳವಾರ ಸಂಜೆಯೊಳಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮ ಅಧಿಕೃತಗೊಳ್ಳುವ ಸಾಧ್ಯತೆಯಿದೆ.

ಸಾಧಾರಣವಾಗಿ ಅಮಿತ್‌ ಶಾ ರಾಜ್ಯಕ್ಕೆ ಬರುವ ಕಾರ್ಯಕ್ರಮ ಮುಂಚಿತವಾಗಿಯೇ ನಿಗದಿಯಾಗಿರುತ್ತದೆ. ಆದರೆ ಈ ಬಾರಿ ರಾಜ್ಯ ನಾಯಕರಿಗೆ ಮಾಹಿತಿ ನೀಡದೇ ಹೈಕಮಾಂಡ್‌ ದಿಢೀರ್‌ ಆಗಿ ನಿಗದಿ ಪಡಿಸಿದೆ. ಒಂದು ಪಕ್ಷದ ಕಾರ್ಯಕ್ರಮ, ಇನ್ನೊಂದು ಸರ್ಕಾರಿ ಕಾರ್ಯಕ್ರಮವನ್ನು ನಿಗದಿ ಮಾಡಿಕೊಂಡು ರಾಜ್ಯಕ್ಕೆ ಅಮಿತ್‌ ಶಾ ಆಗಮಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Leave a Reply

Your email address will not be published.