ಮನೆಯೊಂದರಲ್ಲಿ ಭಾರಿ ಸ್ಫೋಟ: ದುರಂತದಲ್ಲಿ 14 ಜನರ ದಾರುಣ ಸಾವು

ರಾಷ್ಟ್ರೀಯ

ಬಿಹಾರ: ಮನೆಯೊಂದರಲ್ಲಿ ಭಾರಿ ಸ್ಫೋಟದಿಂದಾಗಿ 14 ಮಂದಿ ಸಾವನ್ನಪ್ಪಿ, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಬಾಗಲ್ಪುರದಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಸ್ಫೋಟ ಸಂಭವಿಸಿದ್ದು, ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ತಾ ತಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಜ್ವಾಲಿಚಕ್‌ನಲ್ಲಿರುವ ಮನೆಯೊಂದರಲ್ಲಿ 11.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಇನ್ನೂ ಹಲವು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ.

ಸ್ಫೋಟದ ಶಬ್ದ ಇಡೀ ನಗರಕ್ಕೆ ಕೇಳಿಸಿದ್ದು, ಸ್ಫೋಟದ ನಂತರ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮನೆಯಲ್ಲಿ ಪಟಾಕಿಗಳ ತಯಾರಿಕೆ ನಡೆಯುತ್ತಿದ್ದು, ಇದೇ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಇನ್ನೂ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಮೃತರಲ್ಲಿ ಒಂದು ಮಗು ಕೂಡಾ ಇದೆ ಎಂದು ತಿಳಿದುಬಂದಿದ್ದು, ಗಾಯಾಗಳುಗಳನ್ನು ಮತ್ತು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಎಸ್‌ಎಸ್‌ಪಿ ಮತ್ತು ಡಿಐಜಿ ಕೂಡ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published.