Home District  ಅಂಗನವಾಡಿಗೆ ಸೇರಬೇಕಿದ್ದ ದಿನಸಿ ಪದಾರ್ಥಗಳು ಹೋಗಿದ್ದು ಎಲ್ಲಿ ?

 ಅಂಗನವಾಡಿಗೆ ಸೇರಬೇಕಿದ್ದ ದಿನಸಿ ಪದಾರ್ಥಗಳು ಹೋಗಿದ್ದು ಎಲ್ಲಿ ?

652
0

ಬೆಂಗಳೂರು ಗ್ರಾಮಾಂತರ: ಮಕ್ಕಳಿಗೆ ಗರ್ಭಿಣಿಯರ ಸೇರಬೇಕಾದ ದಿನಸಿ ಪದಾರ್ಥಗಳ ಲಾರಿ ಲೋಡ್ ಅಂಗನವಾಡಿ ಕಾರ್ಯಕರ್ತೆಯ ಮನೆಗೆ ಸೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತರಬಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂದಹಾಗೇ ಗ್ರಾಮದ ಅಂಗನವಾಡಿಯಲ್ಲಿ ೪೫ ಕ್ಕೂ ಹೆಚ್ಚು ಮಕ್ಕಳಿದ್ದು, ಹಲವು ಜನ ಗರ್ಭಿಣಿಯರಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಅಂಗನವಾಡಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಗತ್ಯ ದಿನಸಿ ಪದಾರ್ಥಗಳನ್ನ ಕಳುಹಿಸಿಕೊಡಳಾಗುತ್ತೆ. ಇನ್ನೂ ಕಳುಹಿಸಿಕೊಟ್ಟ ಆಹಾರ ದಿನಸಿ ಪದಾರ್ಥಗಳನ್ನ ಅಂಗನವಾಡಿಯಲ್ಲಿ ಇಡೋದರ ಬದಲು ಅಂಗನವಾಡಿ ಕಾರ್ಯಕರ್ತೆ ಸುಮಂಗಲ ಎಂಬುವವರು ತಮ್ಮ ನಿವಾಸ ನಂದಗುಡಿಗೆ ತರಿಸಿಕೊಂಡಿದ್ದಾರೆ.

ಇನ್ನೂ ತರಬಹಳ್ಳಿಗೆ ಸೇರಬೇಕಿದ್ದ ದಿನಸಿಯನ್ನ ಅಂಗನವಾಡಿ ಕಾರ್ಯಕರ್ತೆ ಲಪಟಾಯಿಸುತ್ತಿರುವ ಆರೋಪ ಕೇಳಿ ಬಂದಿದ್ದು, ಗ್ರಾಮಸ್ಥರು ದಿನಸಿ ಪದಾರ್ಥಗಳನ್ನ ಅಂಗನವಾಡಿ ಕಾರ್ಯಕರ್ತೆಯ ಮೆನೆಗೆ ತಲುಪಿಸುವಾಗ ರೇಡ್‌ಹ್ಯಾಂಡಾಗಿ ಹಿಡಿದಿದ್ದಾರೆ. ಅಂಗನವಾಡಿಗೆ ಕಳುಹಿಸೋದು ಬಿಟ್ಟು ಯಾಕೆ ನಿಮ್ಮನೆಗೆ ತೆಗೆದುಕೊಳ್ಥಿದ್ದಿರಿ ಅಂತಾ ಪ್ರಶ್ನೆ ಮಾಡಿದಾಗ ಕಾರ್ಯಕರ್ತೆ ಸುಮಂಗಲಾ ತಬ್ಬಿಬ್ಬಾಗಿದ್ದಾಳೆ.

ಇನ್ನೂ ಈ ಸಂಬಂಧ ತರಬಹಳ್ಳಿ ಗ್ರಾಮಸ್ಥರು ಹೊಸಕೋಟೆ ಸಿಡಿಪಿಓಗೆ ದೂರನ್ನ ಕೊಟ್ಟಿದ್ದು. ಈ ಬಗ್ಗೆ ತನಿಖೆಯನ್ನ ನಡೆಸಿ ಅಂಗನವಾಡಿ ಕಾರ್ಯಕರ್ತೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Previous articleಪ್ರಜಾಟಿವಿಯೊಂದಿಗೆ ‘ದಿ ವೈರಲ್ ಜಗದೀಶ್’ ಹೇಳಿದ್ದಾದರೂ ಏನು?; ವಿಶೇಷ ವರದಿ
Next articleಕನಕ ಗುರುಪೀಠದಲ್ಲಿ ವಿವಿಧ ಕಟ್ಟಡಗಳ ಉದ್ಘಾಟನೆ; ಸಚಿವ ಈಶ್ವರಪ್ಪ ಭಾಗಿ

LEAVE A REPLY

Please enter your comment!
Please enter your name here