ಹಾಟ್ ಲುಕ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ರಶ್ಮಿಕಾ ಮಂದಣ್ಣ

ಚಲನಚಿತ್ರ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಎಲ್ಲಿರುತ್ತಾರೋ ಅಲ್ಲಿ ಕ್ಯಾಮೆರಾಗಳಿಗೆ ಬರವಿರುವುದಿಲ್ಲ. ಅದರಲ್ಲೂ ಅವರು ಎಲ್ಲಿಗೆ ಹೋದರೂ, ಏನೇ ಮಾಡಿದರೂ ಸುದ್ದಿಗೆ ಬರುತ್ತಾರೆ. ಪುಷ್ಪಾ ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ಕ್ಯಾಮೆರಾಮನ್ ಪಾಲಿನ ದೇವತೆಯಂತಾಗಿದ್ದಾರೆ.

ಅಷ್ಟರ ಮಟ್ಟಿಗೆ ಕ್ಯಾಮೆರಾಗಳನ್ನು ಅವರನ್ನು ಆಬ್ಸರ್ ಮಾಡುತ್ತವೆ. ಮುಂಬೈನಲ್ಲಿ ನಡೆದ ಫ್ಯಾಶನ್ ಶೋನಲ್ಲಿ ಭಾಗಿಯಾಗಿದ್ದ ರಶ್ಮಿಕಾ ಕೆಂಪು ಬಣ್ಣದ ತುಂಡುಡುಗೆಯಲ್ಲಿ ಮಿರಮಿರ ಮಿಂಚುತ್ತಿದ್ದರು. ಇವರು ತೊಟ್ಟ ಕಾಸ್ಟ್ಯೂಮ್ ನಿಂದಾಗಿ ಇಡೀ ಕಾರ್ಯಕ್ರಮವೇ ರಂಗೇರಿತ್ತು.

ಅಷ್ಟರ ಮಟ್ಟಿಗೆ ಕಣ್ಣಿಗೆ ಕಕ್ಕುತ್ತಿದ್ದರಂತೆ ರಶ್ಮಿಕಾ. ಶೋ ಮುಗಿದ ತಕ್ಷಣ ನೆರದಿದ್ದ ಫೋಟೋಗ್ರಾಫರ್ ಕೂಡ ರಶ್ಮಿಕಾ ಜೊತೆ ಫೋಟೋ ತಗೆಸಿಕೊಂಡಿದ್ದಾರೆ ಎನ್ನುವುದು ಲೆಟೆಸ್ಟ್ ಸುದ್ದಿ. ಕನ್ನಡ ಸಿನಿಮಾ ರಂಗದಿಂದ ಬಣ್ಣದ ಜಗತ್ತಿಗೆ ರಶ್ಮಿಕಾ ಕಾಲಿಟ್ಟರೂ, ಇದೀಗ ಅವರು ಕೇವಲ ಸ್ಯಾಂಡಲ್ ವುಡ್ ನಟಿಯಾಗಿ ಉಳಿದಿಕೊಂಡಿಲ್ಲ.

ದಕ್ಷಿಣದ ತಾರೆಯ ಪಟ್ಟವನ್ನೂ ದಾಟಿ ಬಾಲಿವುಡ್ ನಟಿಯಾಗಿ ಬೆಳೆಯುತ್ತಿ ದ್ದಾರೆ. ಇದೀಗ ಅವರು ಬಾಲಿವುಡ್ ನಲ್ಲಿ ಒಟ್ಟು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರಂತೆ. ಸದ್ಯದಲ್ಲೇ ಅವರು ಕರಣ್ ಜೋಹಾರ್ ಸಿನಿಮಾಗೂ ಸಹಿ ಮಾಡಲಿದ್ದಾರಂತೆ ತಮಿಳು ಮತ್ತು ತೆಲುಗು ಸಿನಿಮಾ ರಂಗಕ್ಕೆ ಹೋದ ನಂತರ ಮತ್ತೆ ಅವರು ಕನ್ನಡ ಸಿನಿಮಾ ರಂಗದ ಬಗ್ಗೆ ಯೋಚನೆ ಕೂಡ ಮಾಡಿಲ್ಲ ಎನ್ನುವ ಆರೋಪವಿದೆ.

ಕನ್ನಡ ಸಿನಿಮಾಗಳನ್ನು ಅವರು ಒಪ್ಪುವುದಿಲ್ಲ ಎಂದೂ ಹೇಳಲಾಗುತ್ತಿದೆ. ಆದರೆ, ಈವರೆಗೂ ಅವರನ್ನು ಯಾರು ಅಪ್ರೋಚ್ ಮಾಡಿದ್ದಾರೆ, ಯಾರಿಗೆ ಅವರು ಕಾಲ್ ಶೀಟ್ ಕೊಟ್ಟಿಲ್ಲ ಅನ್ನುವುದು ಮಾತ್ರ ಬಹಿರಂಗವಾಗಿಲ್ಲ.

Leave a Reply

Your email address will not be published.