Home Crime ಹೊಟೇಲ್ ಮಾಲೀಕನ ಮೇಲೆ ಹಲ್ಲೆ ಪ್ರಕರಣ; ಹಲ್ಲೆಕೋರರ ಸೆರೆ

ಹೊಟೇಲ್ ಮಾಲೀಕನ ಮೇಲೆ ಹಲ್ಲೆ ಪ್ರಕರಣ; ಹಲ್ಲೆಕೋರರ ಸೆರೆ

178
0
SHARE

ಹುಬ್ಬಳ್ಳಿ. ಜೂ.14ರಂದು ಕ್ಷುಲ್ಲಕ ಕಾರಣಕ್ಕೆ ತಗಡ ಬಿರಿಯಾನಿ ಹೋಟೆಲ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೋಟೆಲ್ ಮಾಲೀಕ ತೌಸೀಪ್ ನಾಲಬಂದ ಎಂಬುವರ ಮೇಲೆ ರೌಡಿ ಶೀಟರಗಳಾದ ಗಣೇಶಪೇಟೆ ನಿವಾಸಿ ಇರ್ಷಾದ ಅಲಿಯಾಸ್ ಬಲ್ಲಾ ಬಳ್ಳಾರಿ, ಅಕ್ಬರ್ ಕುಮಟಾಕರ, ಖಮ್ಮು, ರಾಜಾ, ಸಾಧಿಕ ಹಾಗೂ ಇತರರು ಹಲ್ಲೆ ನಡೆಸಿದ್ದರು.

ಜೂ.14ರಂದು ಅಕ್ಬರ್ ಕುಮಟಾಕರ್ ಎಂಬಾತ ತೌಸೀಪನನ್ನು ಚಂದ್ರಕಲಾ ಟಾಕೀಸ್ ಬಳಿ ಕರೆಸಿಕೊಂಡು ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಹರ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಸೆರೆಹಿಡಿಯಲಾಗಿದೆ.

 

LEAVE A REPLY

Please enter your comment!
Please enter your name here