ಉಕ್ರೇನ್ ದೇಶದ ಸುಮಿ ಸಿಟಿಯಲ್ಲಿ ಮುಂದುವರೆದ ನೂರಾರು ಭಾರತೀಯರ ಆಕ್ರಂದನ

ರಾಷ್ಟ್ರೀಯ

ನವದೆಹಲಿ: ಉಕ್ರೇನ್ ದೇಶದ ಸುಮಿ ಸಿಟಿಯಲ್ಲಿ ಇನ್ನೂ ನೂರಾರು ಭಾರತೀಯರ ಆಕ್ರಂದನ ಮುಂದುವರೆದಿದೆ. ಭಾರತಕ್ಕೆ ಬೇಗ ಕರೆಸಿಕೊಳ್ಳಿ ಅಂತಾ ಬೆಂಗಳೂರು ವಿದ್ಯಾರ್ಥಿನಿ ಅಳಲು ತೊಡಿಕೊಂಡಿದ್ದಾಳೆ. ಸುಮಾರು 500ಕ್ಕೂ ಹೆಚ್ಚು ಭಾರತೀಯರು ಸುಮಿ ಸಿಟಿಯಲ್ಲಿ ಲಾಕ್​ ಆಗಿದ್ದು, ಅಪಾರ್ಟ್ ಮೆಂಟ್, ಹಾಸ್ಟೆಲ್ ಬಿಲ್ಡಿಂಗ್ ಕೆಳಗಡೆ ಬಂಕರ್​ಗಳಲ್ಲೇ ವಾಸಿಸುತ್ತಿದ್ದಾರೆ. ಜೊತೆಗೆ ನಿನ್ನೆಯಿಂದ ಸುಮಿ ಸಿಟಿಯಲ್ಲಿ ಕುಡಿಯುವ ನೀರು ಸಂಪರ್ಕವೂ ಸ್ಥಗಿತಗೊಂಡಿದೆ. ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳಿ ಅಂತಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮನವಿ ಮಾಡಿಕೊಂಡಿದ್ದಾರೆ.ನ್ಯೂಕ್ಲಿಯರ್ ಪವರ್ ಪ್ಲಾಂಟ್ ಮೇಲೆ ರಷ್ಯಾ ದಾಳಿ ಮಾಡಿರುವ ಹಿನ್ನೆಲೆ ಉಕ್ರೇನ್‌ನ ಜಫೋರಿಝಿಯಾ ನ್ಯೂಕ್ಲಿಯರ್ ಪವರ್‌ ಪ್ಲಾಂಟ್ ಮೇಲೆ ದಾಳಿ ಮಾಡಲಾಗಿದೆ. ಪರಮಾಣು ಸ್ಥಾವರದ ಮೇಲೆ ದಾಳಿ ಮಾಡುವುದು ಅಪರಾಧ ಎಂದು ದಾಳಿ ಬಗ್ಗೆ ಅಮೆರಿಕ ರಾಯಭಾರ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.

Leave a Reply

Your email address will not be published.