ಪತ್ನಿಯ ನಗ್ನ ವಿಡಿಯೋ ಇಟ್ಟುಕೊಂಡು ಪತಿಯೇ ಹಣಕ್ಕಾಗಿ ಬ್ಲಾಕ್ ಮೇಲ್..!

ಅಪರಾಧ

ಬೆಂಗಳೂರು: ಪತ್ನಿಯ ನಗ್ನ ವಿಡಿಯೋ ಇಟ್ಟುಕೊಂಡು ಪತಿಯೇ ಹಣಕ್ಕಾಗಿ ಬ್ಲಾಕ್​ಮೇಲ್ ಮಾಡಿರುವ ಆರೋಪ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಪತಿಯ ವಿರುದ್ಧ ನೊಂದ ಮಹಿಳೆಯು ಇಲ್ಲಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಗರ್ ಅರುಣ್ ಎಂಬಾತನೇ ವಿಡಿಯೋ ಬಳಸಿಕೊಂಡು ಹೆಂಡತಿಗೆ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪಿ. ಮದುವೆ ಬಳಿಕ ದಂಪತಿ ಮುಂಬೈನಲ್ಲಿ ವಾಸವಾಗಿದ್ದರು. ಪತಿಗೆ ಪೋರ್ನ್​ ವಿಡಿಯೋ ನೋಡುವ ಚಟವಿದೆ. ಅಲ್ಲದೆ ಪತಿಯು ಲೈಂಗಿಕವಾಗಿ ಹಿಂಸೆ ನೀಡಿದ್ದಲ್ಲದೆ, ಆತನೊಂದಿಗಿನ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಸೆರೆಹಿಡಿದಿದ್ದಾನೆ.

ಬಳಿಕ ಅವುಗಳನ್ನೇ ಇಟ್ಟುಕೊಂಡು 5 ಲಕ್ಷ ರೂಪಾಯಿ ಹಣಕ್ಕಾಗಿ ಬ್ಲಾಕ್​ಮೇಲ್ ಮಾಡಿದ್ದಾನೆ ಎಂದು ಪತ್ನಿ ದೂರಿದ್ದಾರೆ. ಇದರಿಂದ ಬೇಸತ್ತು ಮುಂಬೈ ತೊರೆದು ಬೆಂಗಳೂರಿಗೆ ಬಂದರೂ ಪತಿಯ ಕಿರುಕುಳ ಮುಂದುವರೆದಿತ್ತು. ಇದಲ್ಲದೆ, ಪತಿ ಸಾಗರ್ ಗೆಳೆಯ ಸುಲೇಶ್ ಕಾರ್ನಕ್ ಕೂಡ ತನಗೆ ಕಿರುಕುಳ ನೀಡಿದ್ದಾನೆ. ಇವರಿಬ್ಬರೂ ಸೇರಿಕೊಂಡು ಪೋರ್ನ್​ ಸೈಟ್​ವೊಂದನ್ನು ನಡೆಸುತ್ತಿರುವುದು ನನಗೆ ತಡವಾಗಿ ಗೊತ್ತಾಗಿದೆ. ಸಾಗರ್ ಜೊತೆ ಆತನ ಗೆಳೆಯನೂ ಸಹ ಹಣದ ಬೇಡಿಕೆ ಇಟ್ಟಿದ್ದಾನೆ. ಪತಿಯು ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದು, ಕ್ರಮ ಕೈಗೊಳ್ಳಬೇಕೆಂದು ಮಹಿಳೆಯು ದೂರಿನಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published.