ಗಂಡನ ಕಾಟ ತಾಳಲಾರದೆ ತವರು ಸೇರಿದ್ದ ಪತ್ನಿ: ಹೆಂಡತಿ ವಾಪಸ್ ಬರಬೇಕೆಂದು ಟವರ್ ಏರಿದ ಪತಿ

ರಾಷ್ಟ್ರೀಯ

ಜಲ್ನಾ: ಕುಡುಕ ಗಂಡನ ಕಾಟ ತಾಳಲಾರದೆ ತವರು ಸೇರಿದ್ದ ಹೆಂಡತಿ ವಾಪಸ್ ಬರಬೇಕೆಂದು ಆಗ್ರಹಿಸಿ ಕುಡುಕ ಗಂಡನೋರ್ವ ಟವರ್‌ ಏರಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.  ಮಹಾರಾಷ್ಟ್ರದ ಜಲ್ನಾದಲ್ಲಿ ಕುಡುಕ ಗಂಡನೋರ್ವ 100 ಅಡಿ ಎತ್ತರದ ಮೊಬೈಲ್ ಟವರ್ ಅನ್ನು ಏರಿದ್ದಾನೆ. ಬಡ್ನಾಪುರ್‌ ಜಿಲ್ಲೆಯ ದಭಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹೀಗೆ ಟವರ್ ಏರಿ ಕ್ವಾಟ್ಲೆ ನೀಡಿದ ಕುಡುಕನನ್ನು ಗಣಪತ್ ಬಕಲ್ ಎಂದು ಗುರುತಿಸಲಾಗಿದೆ. ಟವರ್‌ ಏರಿದ ಈತ ಗ್ರಾಮಸ್ಥರ ಭರವಸೆ ಬಳಿಕವಷ್ಟೇ ಕೆಳಗೆ ಇಳಿದಿದ್ದಾನೆ.

ಗ್ರಾಮಸ್ಥರು ಈತನಿಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಈತನ ಕುಟುಂಬದ ಅಂತರಿಕ ಕಲಹವನ್ನು ಪರಿಹರಿಸುತ್ತಾರೆ ಎಂದು ಭರವಸೆ ನೀಡಿದ್ದರು

ಈತ ಸಂಪೂರ್ಣವಾಗಿ ಮದ್ಯದ ಅಮಲಿನಲ್ಲಿದ್ದು, ನಾಲ್ಕು ಗಂಟೆಗಳ ಬಳಿಕ ಈತ ಟವರ್‌ನಿಂದ ಕೆಳಗೆ ಇಳಿದಿದ್ದಾನೆ.

ನಾಲ್ಕು ಗಂಟೆಗಳ ಕಾಲ ಎಲ್ಲರಿಗೂ ಪೀಕಲಾಟ ನೀಡಿ ಬಳಿಕ ಕೆಳಗಿಳಿದ ಈತನನ್ಉ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದಾರೆ.

 

 

Leave a Reply

Your email address will not be published.