Home Cinema “I Love You”ಅಂತಾ ಪ್ರೊಪೋಸ್ ಮಾಡಲು ಉಪ್ಪಿ ರೆಡಿ..! ಬಂತಾ ಉಪ್ಪಿ, ರಚಿತಾ ಪ್ರೇಮಕಥನ ಕಣ್ತುಂಬಿಕೊಳ್ಳೋ...

“I Love You”ಅಂತಾ ಪ್ರೊಪೋಸ್ ಮಾಡಲು ಉಪ್ಪಿ ರೆಡಿ..! ಬಂತಾ ಉಪ್ಪಿ, ರಚಿತಾ ಪ್ರೇಮಕಥನ ಕಣ್ತುಂಬಿಕೊಳ್ಳೋ ಘಳಿಗೆ..?

379
0
SHARE

ಐ ಲವ್ ಯೂ.. ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸಿನಿಮಾ.. ಸದ್ದು ಗದ್ದಲವಿಲ್ಲದೇ ಸುದ್ದಿ ಮಾಡಲು ಅಣಿಯಾಗ್ತಿರುವ ಐ ಲವ್ ಯೂ ಚಿತ್ರ ಇತ್ತೀಚೆಗಷ್ಟೇ ಬೆಣ್ಣೆ ನಗರಿಯಲ್ಲಿ ಅದ್ದೂರಿಯಾಗಿ ಹಾಡುಗಳನ್ನ ಬಿಡುಗಡೆ ಮಾಡುವ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.

ಇದರ ಬೆನ್ನಲ್ಲೆ ಇದೀಗ ಚಿತ್ರತಂಡ ಸಿನಿಮಾದ ಟೈಟಲ್ ಸಾಂಗ್ ಅದ್ದೂರಿಯಾಗಿ ಲಾಂಚ್ ಮಾಡಲು ಇತ್ತೀಚೆಗೆ ಚಿತ್ರತಂಡ ಮಾಧ್ಯಮದವರ ಮುಂದೆ ಹಾಜರಾಗಿತ್ತು.ಯಸ್.. ಪ್ರಜಾಕೀಯದ ಸೂತ್ರಧಾರ ಉಪೇಂದ್ರ ರಾಜಕೀಯ ಬಿಟ್ಟು ಸದ್ಯ ಐ ಲವ್ ಯೂ ಗುಂಗಿನಲ್ಲಿದ್ದಾರೆ. ಉಪ್ಪಿ ಸಿನಿಮಾ ಯಾವಾಗ ಬರುತ್ತಪ್ಪ ಅಂತ ಜಾತಕ ಪಕ್ಷಿಗಳಂತೆ ಕಾದುಕುಳಿದಿರುವ ರಿಯಲ್ ಸ್ಟಾರ್ ರಿಯಲ್ ಅಭಿಮಾನಿಗಳಿಗೆ ಈ ಚಿತ್ರದ ಮೂಲಕ ಕಡೆಗೂ ಗ್ಯೂಡ್ ನ್ಯೂಸ್ ಸಿಕ್ಕಿದೆ.

ಅದೇನಪ್ಪಾ ಅಂದ್ರೆ ಸದ್ಯ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಚಿತ್ರ ಬಿಡುಗಡೆಗೆ ಪ್ಲಾನ್ ಮಾಡಿದ್ದು. ಚಿತ್ರದ ಟೈಟಲ್ ಸಾಂಗನ್ನು ಗ್ರಾಂಡಾಗಿ ರಿಲೀಸ್ ಮಾಡಿತ್ತು. ಹಾಗಾಗಿನೇ ಕೊಂಚ ಬಿಡುವು ಮಾಡಿಕೊಂಡು ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ಉಪ್ಪಿ. ಮಲ್ಲೇಶಿಯಾ ಚಿತ್ರದ ಶೂಟಿಂಗ್ ಥ್ರಿಲ್ಲಿಂಗ್ ಅನುಭವ ನೀಡಿದ್ದು. ಆ ಒಂದು ಹಾಡಿನ ಝಲಕ್ ನೋಡಲು ಖುದ್ದು ತಾವು ಥ್ರಿಲ್ಲಾಗಿರುವುದಾಗಿ ಹೇಳಿದ್ರು.

ಒಂದು ಸಣ್ಣ ಗ್ಯಾಪ್ ಬಳಿಕ ಈಗ ಹೊಸ ಜೋಷ್‌ನಲ್ಲಿ, ನ್ಯೂ ಲುಕ್ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎಂಬ ಕಾನ್ಫಿಡೆಸ್ಸ್‌ನಲ್ಲೇ ಮಾತನಾಡಿದ್ರು.ಆರ್.ಚಂದ್ರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಉಪ್ಪಿ ಮತ್ತು ಚಂದ್ರು ಕಾಂಬಿನೇಷನ್‌ನ ಎರಡನೇ ಸಿನಿಮಾ ಇದಾಗಿದ್ದು. ಮಲೇಶಿಯಾದಲ್ಲಿ ಚಿತ್ರದ ಟೈಟಲ್ ಸಾಂಗ್ ಮುಗಿಸಿ ಬಂದಿರುವ ಚಂದ್ರು. ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿರುವ ಸಂತಸದಲ್ಲಿದ್ದಾರೆ. ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಚಿತ್ರವನ್ನು ತೆರೆಗೆ ತರುವ ಸಾಹಸ ಮಾಡ್ತಿರುವ ಚಂದ್ರು. ಚಿತ್ರವನ್ನು ಏಪ್ರಿಲ್ ಎರಡನೇ ವಾರ ರಿಲೀಸ್ ಮಾಡುವ ಪ್ಲಾನ್ ಇಟ್ಟುಕೊಂಡಿದ್ದಾರೆ.

ಚಿತ್ರದ ಮೇಲೆ ಈಗಾಗ್ಲೇ ನಿರೀಕ್ಷೆಗಳನ್ನು ದುಪ್ಪಟ್ಟಾಗಿದ್ದು. ಹಾಡುಗಳು ಈಗಾಗಲ್ಲೇ ಸೋಷಿಯಲ್ ಪ್ಲಾಟ್ ಫಾರ್ಮ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಚಿತ್ರದಲ್ಲಿ ಟ್ರೈಲರ್‌ನಲ್ಲಿ ಸಿಂಗಲ್ ಪೀಸ್ ತೊಟ್ಟು ಪೋಸ್ ಕೊಟ್ಟಿದ್ದ ಉಪ್ಪಿ ಕಮಾಲ್ ಕಂಡು ಕಂಗಾಲಾಗುವಂತೆ ಮಾಡ್ತಿದೆ. ಇದೆಲ್ಲದ್ರ ಜೊತೆಗೆ ಮಲ್ಲೇಶಿಯಾದಲ್ಲಿ ಡ್ರೀಮ್ ಸಾಂಗ್‌ಗೆ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಜೊತೆಗೆ ಬಿಂದಾಸಾಗಿ ಪ್ರೀತಿಯ ಡ್ಯುಯೇಟ್ ಹಾಡಿರೋದು ಎಲ್ಲರ ಗಮನಸೆಳೆಯುತ್ತಿದೆ. ‘ಇನ್ನು ಬೇಕು ಅನ್ನೊ ನಿನ್ನ ಮನಸ್ಸೊಂದು ಕಾಲ ಕನ್ನಡಿ ಎಂಬ ಹಾಡಿಗೆ ಮಸ್ತಾಗಿ ಕುಣಿದು ಕುಪ್ಪಳಿಸುವಂತೆ ಮಾಡ್ತಿದೆ. ಇನ್ನು ಸೋನುಗೌಡ ಚಿತ್ರದ ಮತ್ತೊಬ್ಬ ನಾಯಕಿ.

ಚಿತ್ರದಲ್ಲಿ ರಚಿತಾ ಜೊತೆಗೆ ಸೋನುಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಇದೇ ಮೊದಲ ಬಾರಿಗೆ ಉಪ್ಪಿ ಚಿತ್ರದಲ್ಲಿ ನಟಿಸಿರುವ ಎಕ್ಸೈಟ್‌ಮೆಂಟ್‌ನಲ್ಲಿರುವ ಸೋನು. ನನ್ನದ್ದು ಮುದ್ದಾದ ಪಾತ್ರವಾಗಿದ್ದು. ಉಪ್ಪಿ ಅಭಿಮಾನಿಗಳು ಚಿತ್ರ ರಿಲೀಸ್ ಆದ್ಮೇಲೆ ಪಾತ್ರವನ್ನು ಅಪ್ಪಿಕೊಳ್ಳೊದು ಗ್ಯಾರೆಂಟಿ ಅಂತಾರೆ.ಚಿತ್ರ ತೆಲುಗು ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಬರ್ತಿದ್ದು.. ಸೀಜಿ ವರ್ಕ್ ಸೇರಿದಂತೆ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬಿಝೀಯಾಗಿದೆ. ಡ್ಯಾನ್ಸ್ ಧನಂಜಯ್ ಸಾಹಿತ್ಯ, ತೋಟಂಬರ್ ಬೈಲು ಕಿರಣ್ ಸಂಗೀತ ಸಂಯೋಜನೆ, ಹಾಡುಗಳು ಮೂಡಿಬಂದಿದ್ದು. ಚಿತ್ರ ಹಾಡಿಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗ್ತಿದೆ.

ಈಗಾಗಲ್ಲೇ ನಾಲ್ಕು ಹಾಡುಗಳನ್ನು ಸೋಷಿಯಲ್ ಪ್ಲಾಟ್ ಫಾಂನಲ್ಲಿ ಬೂಮಿಂಗ್‌ನಲ್ಲಿದ್ದು. ಏಪ್ರಿಲ್ ೧೨ ರಂದು ಚಿತ್ರ ರಿಲೀಸ್ ಮಾಡುವ ಯೋಜನೆಯಲ್ಲಿ ಚಿತ್ರತಂಡ ಇದೆ.ಆರ್. ಚಂದ್ರು ನಿರ್ದೇಶನದ ಜೊತೆಗೆ ತಮ್ಮದೇ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣ ಚಿತ್ರಕ್ಕಿದ್ದು. ರವಿ ಖಾಳೆ, ಸಾಧುಕೋಕಿಲಾ, ಜೈಜಗದೀಶ್, ರವಿಶಂಕರ್ ಸೇರಿದಂತೆ ಕಲಾವಿದರ ದಂಡೇ ಚಿತ್ರಕ್ಕಿದೆ.

ಸದ್ಯ ಪ್ರೋಸ್ಟ್ ಪ್ರೋಡಕ್ಷನ್ ಕೆಲದಲ್ಲಿ ಬಿಝೀಯಾಗಿರುವ ಚಿತ್ರತಂಡ ಸದ್ಯ ವಿಡಿಯೋ ಸಾಂಗ್ ವಿಡಿಯೋ ಸಾಂಗ್ ಮೂಲಕ ಬ್ಯಾಂಗ್ ಮಾಡ್ತಿದೆ.ಅದೇನೇ ಇದ್ರು, ಟ್ರೇಲರ್ ಮತ್ತು ಹಾಡುಗಳ ಮೂಲಕ ಮೋಡಿ ಮಾಡ್ತಿರುವ ಉಪ್ಪಿಯ ಅಭಿನಯದ ‘ಐ ಲವ್ ಯೂ ಟೈಟಲ್ ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗ್ತಿದ್ದು. ರಿಯಲ್ ಸ್ಟಾರ್ ರಾಯಲ್ ಲುಕ್ ಇರುವ ಚಿತ್ರ ಅದ್ಯಾವ ರೀತಿ ಮೂಡಿಬಂದಿರುತ್ತೆ ಅನ್ನೋದಕ್ತುರ ಏಪ್ರಿಲ್‌ನಲ್ಲಿ ಸಿಗಲಿದೆ. ಅಲ್ಲಿವರೆಗೂ ಟ್ರೇಲರ್ ಮತ್ತು ಹಾಡುಗಳನ್ನು ಕೇಳಿ ಎಂಜಾಯ್ ಮಾಡಿ.

LEAVE A REPLY

Please enter your comment!
Please enter your name here