ನಾನು ಯಾರನ್ನೂ ಆಹ್ವಾನಿಸಿಲ್ಲ.. ಭೇಟಿಯಾಗಿಲ್ಲ! : ಹಮೀದ್ ಅನ್ಸಾರಿ

ರಾಷ್ಟ್ರೀಯ

ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಬೇಹುಗಾರಿಕೆ ನಡೆಸಿದ್ದೇನೆ ಎಂದು ಹೇಳಿಕೊಂಡ ಪಾಕಿಸ್ತಾನಿ ಪತ್ರಕರ್ತನನ್ನು ಯುಪಿಎ ಆಡಳಿತದಲ್ಲಿ ಹಮೀದ್ ಅನ್ಸಾರಿ ಭಾರತಕ್ಕೆ ಆಹ್ವಾನಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ ಆ ಎಲ್ಲ ಆರೋಪಗಳನ್ನು ಹಮೀದ್ ಅನ್ಸಾರಿ ನಿರಾಕರಿಸಿದ್ದಾರೆ. ಈ ಮಟ್ಟಿಗೆ ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಅವರು ಯುಪಿಎ ಆಡಳಿತಾವಧಿಯಲ್ಲಿ ಐದು ಬಾರಿ ಭಾರತಕ್ಕೆ ಬಂದಿದ್ದರು ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ್ದರು ಎಂದು ಹೇಳಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ಹಮೀದ್ ಅನ್ಸಾರಿ ಅವರನ್ನು ಪ್ರಶ್ನಿಸಿದ್ದು, ಅವರು ಈ ವಿವರಣೆ ನೀಡಿದ್ದಾರೆ. ಈ ಬಗ್ಗೆ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು, ”ನನ್ನ ವಿರುದ್ಧ ಸುಳ್ಳು ಪ್ರಚಾರ ಮಾಡಲಾಗುತ್ತಿದೆ, ಉಪರಾಷ್ಟ್ರಪತಿ ಪರವಾಗಿ ವಿದೇಶಿ ಅತಿಥಿಗಳಿಗೆ ಆಹ್ವಾನವನ್ನು ಸರಕಾರದ ಸಲಹೆಯಂತೆ ವಿದೇಶಾಂಗ ಸಚಿವಾಲಯ ಕಳುಹಿಸುತ್ತದೆ, ನನಗೂ ಬಂದಿಲ್ಲ. ಯಾರನ್ನೂ ಆಹ್ವಾನಿಸಿಲ್ಲ.ನಾನು ರಾಯಭಾರಿಯಾಗಿದ್ದ ಅವಧಿಯಲ್ಲಿ ಎಲ್ಲದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ.

Leave a Reply

Your email address will not be published.