ನಾನು ಸ್ಮೋಕ್ ಮಾಡ್ತೀನಿ, ಅದರಲ್ಲಿ ತಪ್ಪೇನಿದೆ? ಸೋನು ಶ್ರೀನಿವಾಸ್ ಗೌಡ

ಚಲನಚಿತ್ರ

ಕನ್ನಡಿಗರು ಸಾಕಷ್ಟು ಸಮಯದಿಂದ ಕಾದು ಕೂತಿದ್ದ ಬಿಗ್ ಬಾಸ್ ಓಟಿಟಿ ಶೋ ಈಗಾಗಲೇ ಶುರುವಾಗಿದೆ. ಮೊದಲ ದಿನವೇ ದೊಡ್ಮನೆ ಒಳಗೆ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ಕಿರುತೆರೆ, ಹಿರಿತೆರೆಯ ಸ್ಟಾರ್ ಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿರುವವರು ಬಿಗ್ ಬಾಸ್ ಮನೆ ಒಳಗೆ ಎಂಟ್ರಿಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗಿರೋ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಗೌಡರ ಬೋಲ್ಡ್ ಮಾತು ಸಖತ್ ಸದ್ದು ಮಾಡ್ತಿದೆ.

ಟಿಕ್ ಟಾಕ್, ರೀಲ್ಸ್ ಮೂಲಕ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಸೋನು ಬಿಗ್ ಬಾಸ್ ಸ್ಪರ್ಧಿ ಆಗಿ, ಕಾಣಿಸಿಕೊಳ್ತಿದ್ದಾರೆ. ಸೋನು ಗೌಡ ಬಿಗ್ ಬಾಸ್ ಎಂಟ್ರಿ ಬಳಿಕ ಸಾಕಷ್ಟು ನೆಗೆಟಿವ್ ಕಾಮೆಂಟ್ ಹರಿದು ಬರುತ್ತಿದೆ. ಈ ಬೆನ್ನಲ್ಲೇ ಸೋನು ಬೋಲ್ಡ್ ಮಾತು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ನಾನು ಸ್ಮೋಕ್ ಮಾಡ್ತೀನಿ, ಅದರಲ್ಲಿ ತಪ್ಪೇನಿದೆ? ಎಂದು ಬಿಗ್ ಬಾಸ್ ನಲ್ಲಿ ಸೋನು ಗೌಡ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಮೋಕ್ ಮಾಡುವ ವಿಚಾರ ಬಂದ ವೇಳೆ ನಟ ರೂಪೇಶ್ ಶೆಟ್ಟಿ ನಾನು ಸ್ಮೋಕ್ ಮಾಡಲ್ಲ ಅಂದರು. ಅದಕ್ಕೆ ಸೋನು, ಸ್ಮೋಕ್ ಮಾಡುವುದಿಲ್ಲವಾ? ನಾನು ಮಾಡ್ತೀನಿ ಎಂದರು. `ಸಿಗರೇಟ್ ಸೇದುತ್ತೀರಾ’ ಎಂದು ಅಚ್ಚರಿಯಿಂದ ರೂಪೇಶ್ ಕೇಳಿದ್ದಾರೆ. ಹೌದು, ನಾನು ಸ್ಮೋಕ್ ಮಾಡ್ತೀನಿ, ನಾನು ಕುಡಿಯುತ್ತೀನಿ ಅದರಲ್ಲಿ ತಪ್ಪೇನಿದೆ ಎಂದು ನೇರವಾಗಿ ರೂಪೇಶ್‌ಗೆ ಪ್ರಶ್ನಿಸಿದ್ದಾರೆ. ಸೋನು ಅವರ ಈ ಬೋಲ್ಡ್ ಮಾತು ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published.