
ಈದ್ಗಾ ಮೈದಾನದ ವಿವಾದ: ನಾಳೆ ನಾಗರೀಕ ಒಕ್ಕೂಟದಿಂದ ಪ್ರತಿಭಟನೆ
ಬೆಂಗಳೂರು: ಈದ್ಗಾ ಮೈದಾನ ಆಟದ ಮೈದಾನವಾಗಿ ಉಳಿಯಬೇಕೆಂದು ʼ ನಾಗರೀಕ ಒಕ್ಕೂಟದ ವತಿಯಿಂದ ನಾಳೆ ಚಾಮರಾಜ ಪೇಟೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಪ್ರತಿ ಮನೆ ಮನೆಗೆ, ಅಂಗಡಿ ಮಂಗಟ್ಟುಗಳಿಗೆ ತೆರಳಿ ಭಿತ್ತಿ ಪತ್ರಗಳನ್ನು ನೀಡುವ ಮೂಲಕ ಬಂದ್ಗೆ ಬೆಂಬಲ ನೀಡುವಂತೆ ಒತ್ತಾಯಿಸಿದ್ದಾರೆ.
ಪ್ರತಿ ಗೋಡೆಗಳಲ್ಲೂ ಬಂದ್ ಮಾಡುವ ಕುರಿತಾದ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಚಾಮರಾಜಪೇಟೆ ಬಂದ್ ಒತ್ತಾಯಿಸಿ ಇನ್ನೂ ಸಾವಿರಾರು ಜನರಿರಂದ ಬೈಕ್ ರ್ಯಾಲಿ ನಡೆಸಲಿದ್ದಾರೆ. ಹೀಗಾಗಿ ಚಾಮರಾಜಪೇಟೆ ಮಾರ್ಗವಾಗಿ ಸಂಚಾರಿಸೋವರಿಗೆ ನಾಳೆ ಟ್ರಾಫಿಕ್ ಸಮಸ್ಯೆ ಎದುರಾಗುವುದು ಗ್ಯಾರಂಟಿ. ಈ ಬಂದ್ಗೆ ಹಿಂದೂ ಸಂಘಟನೆ ಹಾಗೂ ಕನ್ನಡ ಪರ ಹೋರಾಟಗಾರರು ಬೆಂಬಲ ನೀಡುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.