ಈದ್ಗಾ ಮೈದಾನಕ್ಕಾಗಿ ಚಾಮರಾಜಪೇಟೆ ಬಂದ್: ಅಂಗಡಿ-ಮುಂಗಟ್ಟು ಮುಚ್ಚಿ ಬಂದ್ ಗೆ ಸಾಥ್ ಕೊಟ್ಟ ಸಾರ್ವಜನಿಕರು

ಬೆಂಗಳೂರು

ಬೆಂಗಳೂರು: ಈದ್ಗಾ ಮೈದಾನಕ್ಕಾಗಿ ಚಾಮರಾಜಪೇಟೆ ಬಂದ್​ ಮಾಡಲಾಗಿದ್ದು, ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟು ಮುಚ್ಚಿ ಸಾಥ್ ನೀಡಲಾಗಿದೆ. ಬಂದ್​ಗೆ ಸಾರ್ವಜನಿಕರಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ. ಅಂಗಡಿ-ಮುಂಗಟ್ಟು ಮುಚ್ಚಿ ಸಾರ್ವಜನರಿಕರ ಸಾಥ್​​​​ ಕೊಟ್ಟಿದ್ದು, BBMPಗೆ ಚಾಮರಾಜಪೇಟೆ ಮೈದಾನ ಪಡೆದುಕೊಳ್ಳಲು ಆಗ್ರಹ ಮಾಡಲಾಗುತ್ತಿದೆ. ಚಾಮರಾಜಪೇಟೆ ನಾಗರಿಕರ ಒಕ್ಕೂಟ  ಬಂದ್​ಗೆ ಕರೆ ನೀಡಿದೆ. ಸ್ವಯಂ ಪ್ರೇರಿತವಾಗಿ ಬಂದ್​ಗೆ ಒಕ್ಕೂಟ ಕರೆ ಕೊಟ್ಟಿದೆ. ಬಂದ್​ ಬೆಂಬಲದ ಬಿತ್ತಿ ಪತ್ರ ಹಾಕಿ ಜನರಿಂದ ಸ್ವಾಗತ ನೀಡಲಾಗಿದೆ. ಚಾಮರಾಜಪೇಟೆ ಮೈದಾನ BBMP ಸ್ವತ್ತಾಗಬೇಕು ಎಂದು ಒತ್ತಾಯ ಮಾಡಲಾಗುತ್ತಿದ್ದು, ಗಣೇಶ ಹಬ್ಬ, ಕನ್ನಡ ರಾಜ್ಯೋತ್ಸವಕ್ಕೂ ಸ್ಥಳ ಕೊಡಲು ಆಗ್ರಹ ಮಾಡಲಾಗಿದೆ.

 

 

Leave a Reply

Your email address will not be published.