ಈದ್ಗಾ ಮೈದಾನ ವಿವಾದ ಆಗಸ್ಟ್ 15ರೊಳಗೆ ಇತ್ಯರ್ಥ: BBMP ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಆಗಸ್ಟ್ 15ರೊಳಗೆ ಇತ್ಯರ್ಥವಾಗುವ ವಿಶ್ವಾಸ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈದಾನದ ಖಾತೆ ವರ್ಗಾವಣೆ ಇನ್ನು ಬಾಕಿ ಇದೆ.

ಈ ವಾರದ ಅಂತ್ಯಕ್ಕೆ ನೀಡಿದ್ದ ಗಡುವು ಅಂತ್ಯವಾಗುತ್ತದೆ. ಅನಂತರ, ಜಂಟಿ ಆಯುಕ್ತರು ಈ ಬಗ್ಗೆ ಅಂತಿಮ ಆದೇಶ ಹೊರಡಿಸಲಿದ್ದಾರೆ ಎಂದು ಹೇಳಿದರು. ಮಸೀದಿ ಬಿಟ್ಟು ಉಳಿದ ಜಾಗ ದಲ್ಲಿ ಬೇಲಿ ಹಾಕುತ್ತೇವೆ. ಈಗಾಗಲೇ ಬೇಲಿ ಹಾಕಲು ಗುರುತು ಕಾರ್ಯ ಆಗಿದೆ.

ಇದಕ್ಕೆ ಏಜೆನ್ಸಿಯನ್ನು ನೇಮಕ ಮಾಡಲಿದ್ದೇವೆ. ಮತ್ತೊಂದೆಡೆ ಖಾತೆಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಅದರ ಪ್ರಕ್ರಿಯೆಯೂ ನಡೆಯುತ್ತಿದೆ. 45 ದಿನಗಳ ಸಮಯಾವಕಾಶ ನೀಡಲಾಗಿತ್ತು. ಆದರೆ, ಈ ವಾರದ ಅಂತ್ಯದಲ್ಲಿ ಕಾಲಾವಕಾಶ ಮುಕ್ತಾಯವಾಗುತ್ತದೆ ಎಂದು ಹೇಳಿದರು.

Leave a Reply

Your email address will not be published.