ಈದ್ಗಾ ಮೈದಾನ ವಿವಾದ: ಚಾಮರಾಜಪೇಟೆ ಬಂದ್ ಗೆ ಬೆಂಬಲ ನೀಡಲು ಮುಸ್ಲಿಂ ವ್ಯಾಪಾರಿಗಳ ನಿರಾಕರಣೆ

ಬೆಂಗಳೂರು

ಬೆಂಗಳೂರು: ಈದ್ಗಾ ಮೈದಾನದ ವಿವಾದ ತೀವ್ರಗೊಂಡಿದ್ದು, ಜುಲೈ 12ರಂದು ಚಾಮರಾಜಪೇಟೆ ಬಂದ್‍ಗೆ ಕರೆ ನೀಡಲಾಗಿದೆ. ಆದರೆ ಇದೀಗ ಮುಸ್ಲಿಂ ವ್ಯಾಪಾರಿಗಳು ಬಂದ್ ಗೆ ನಿರಾಕರಿಸಿದ್ದಾರೆ.

ಚಾಮರಾಜಪೇಟೆ ಆಟದ ಮೈದಾನ(ಈದ್ಗಾ ಮೈದಾನ) ಮುಸ್ಲಿಮರಿಗೆ ಸೇರಿಲ್ಲ. ಇದು ನಮ್ಮ ಸ್ವತ್ತು ಎಂದು ಸ್ಥಳೀಯರು, ಸಂಘಟನೆಗಳು ಕಿಡಿಕಾರಿವೆ. ಚಾಮರಾಜಪೇಟೆ ಆಟದ ಮೈದಾನ ಉಳಿವಿಗಾಗಿ ಇದೇ 12ಕ್ಕೆ ಚಾಮರಾಜಪೇಟೆ ಬಂದ್‍ಗೆ ಕರೆ ನೀಡಿವೆ.

ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಸಂಪೂರ್ಣ ಸ್ಥಬ್ದಗೊಳ್ಳಲಿದೆ. ಆದರೆ, ಇದಕ್ಕೆ ಮುಸ್ಲಿಂ ವ್ಯಾಪಾರಿಗಳು ನಿರಾಕರಣೆ ಮಾಡಿದ್ದಾರೆ. ಬಂದ್‍ಗೆ ನಮ್ಮ ಬೆಂಬಲವಿಲ್ಲ. ನಮ್ಮ ಅಂಗಡಿಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಎಂದಿನಂತೆ ವ್ಯಾಪಾರ ಮಾಡ್ತೇವೆ. ಬಂದ್‍ನಿಂದ ಲಾಸ್ ಆದರೆ ಇವರೇನು ತಂದು ಕೊಡುತ್ತಾರಾ ಎಂದಿದ್ದಾರೆ.

ಬಿಬಿಎಂಪಿ ಕಮಿಷನರ್ ಇದು ಪಾಲಿಕೆಯ ಸ್ವತ್ತಲ್ಲ ಎಂದಿದ್ದರು. ವಕ್ಫ್‌ಬೋರ್ಡ್‌ ಇದು ನಮ್ಮ ಜಾಗ ಎಂದು ವಾದ ಮಾಡಿತ್ತು. ಹೀಗೆ ಗೊಂದಲದಲ್ಲಿದ್ದ, ಕ್ಷೇತ್ರದ ಜನ, ಭಾನುವಾರ ಈದ್ಗಾ ಮೈದಾನ ಸಮೀಪದ ಜಂಗಮ ಮಂಟಪದಲ್ಲಿ ಸಭೆ ನಡೆಸಿ, ಬಂದ್‍ಗೆ ತೀರ್ಮಾನಿಸಿದ್ದಾರೆ. ಬಂದ್ ದಿನ ಸಿರ್ಸಿ ಸರ್ಕಲ್‍ನಿಂದ ಈದ್ಗಾ ಮೈದಾನದವರೆಗೆ ಬೃಹತ್ ರ್ಯಾಲಿ ನಡೆಸಲು ಮುಂದಾಗಿದ್ದು, ಇದಕ್ಕೆ ಪೊಲೀಸರು ಅವಕಾಶ ನೀಡುವುದು ಅನುಮಾನ ಎನ್ನಲಾಗುತ್ತಿದೆ.

 

Leave a Reply

Your email address will not be published.