ಶತ್ರುಗಳಿಗೆ ನಾನು ಮೊದಲೇ ಗುರಿಯಾದರೆ, ನನ್ನ ಕುಟುಂಬ ಎರಡನೇ ಗುರಿ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ಅಂತರಾಷ್ಟ್ರೀಯ

ಉಕ್ರೇನ್​: ಶತ್ರು ರಾಷ್ಟ್ರ ರಷ್ಯಾದ ‘ವಿಧ್ವಂಸಕ ಗುಂಪುಗಳು’ ಉಕ್ರೇನ್ ರಾಜಧಾನಿ ಕೀವ್​ ಅನ್ನು ಪ್ರವೇಶಿಸಿದ್ದು, ಜನರು ಜಾಗರೂಕರಾ ಗಿರಿ ಮತ್ತು ಕರ್ಫ್ಯೂ ನಿಯಮಗಳನ್ನು ಪಾಲಿಸಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ. ವಿಡಿಯೋ ಸಂದೇಶವನ್ನು ನೀಡಿರುವ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಆಕ್ರಮಣಕಾರರ ವಿರುದ್ಧ ನಮ್ಮ ಪಡೆಗಳು ಹೋರಾಡುತ್ತಿದ್ದು, ಇಂತಹ ವೇಳೆಯಲ್ಲಿ ತಾವು ಕೀವ್​ನಲ್ಲೇ ಉಳಿಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.ಶತ್ರುಗಳಿಗೆ ನಾನು ಮೊದಲೇ ಗುರಿಯಾದರೆ, ನನ್ನ ಕುಟುಂಬ ಎರಡನೇ ಗುರಿಯಾಗಿದೆ. ಅವರು ರಾಷ್ಟ್ರದ ಮುಖ್ಯಸ್ಥನನ್ನು ನಾಶಪಡಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ಬಯಸುತ್ತಾರೆ. ನಾನು ರಾಜಧಾನಿಯಲ್ಲಿಯೇ ಇರುವೆ. ನನ್ನ ಕುಟುಂಬವೂ ಉಕ್ರೇನ್‌ನಲ್ಲೇ ಇರಲಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

Leave a Reply

Your email address will not be published.