
ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾಯ್ತು ವ್ಹೀಲಿಂಗ್ ಪುಂಡರ ಹಾವಳಿ..! ವಿಡಿಯೋ ನೋಡಿ
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ವ್ಹೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದೆ. ಸಂಚಾರಿ ಪೊಲೀಸ್ರು ಎಷ್ಟೇ ಜಾಗೃತಿ ಕ್ರಮ ಕೈ ಗೊಂಡರೂ ಬೆಳಗ್ಗೆ ಮತ್ತು ರಾತ್ರಿವೇಳೆ ವ್ಹೀಲಿಂಗ್ ಹುಚ್ಚಾಟ ಹೆಚ್ಚಾಗಿದ್ದು, ಸಾರ್ವಜನಿಕರು ಪುಂಡರ ಹಾವಳಿಗೆ ಬೇಸತ್ತು ಹೋಗಿದ್ದಾರೆ. ನಗರದ ಪ್ರಮುಖ ರಸ್ತೆಗಳು, ಅಂಡರ್ ಪಾಸ್, ಫ್ಲೈಓವರ್ ಗಳಲ್ಲಿ ವ್ಹೀಲಿಂಗ್ ಹೆಚ್ಚಾಗಿದ್ದು,
ಸೋಶಿಯಲ್ ಮೀಡಿಯಾ ಸೆಲ್ ಇದ್ರೂ ನೋ ಯೂಸ್ ಎನ್ನುವಂತಾಗಿದೆ. ಕಾಲು ಹ್ಯಾಂಡಲ್ ಮೇಲಿಟ್ಟು, ಒಂದೇ ಬೈಕ್ ನಲ್ಲಿ ಮೂವರು ಕೂತು ಡೆಡ್ಲಿ ರೈಡ್ ಮಾಡಿ ಇನ್ಟಾಗ್ರಾಮ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ