
ಮಳೆಹಾನಿ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ವಿಸಿಟ್ ಕೊಟ್ಟಿದ್ದಾರಾ?: ವಿಪಕ್ಷ ನಾಯಕ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಹಾನಿ ಆಗ್ತಾ ಇದ್ದು, ಒಬ್ಬ ಉಸ್ತುವಾರಿ ಮಂತ್ರಿಗಳೂ ಆಯಾ ಜಿಲ್ಲೆಗೆ ಹೋಗಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನರ ಕಷ್ಟ-ಸುಖಗಳನ್ನ ಕೇಳುವವರೇ ಇಲ್ಲದಂತಾಗಿದೆ. ಮೀಟಿಂಗ್ ಮಾಡಿದ್ರೆ ಸಾಕಾ..?
ಸಿಎಂ ವಿಸಿಟ್ ಮಾಡ್ಲಿ, ಸಾವಿರಾರು ಕೋಟಿ ಕೊಟ್ಟಿದ್ದೇವೆ ಅಂತಾರಲ್ಲ ಕೇಂದ್ರ ಸರ್ಕಾರದಿಂದ ಮಳೆ ಹಾನಿ ಪರಿಹಾರ ಸಿಕ್ಕಿದೆಯಾ..? ಕೇವಲ ಬಾಯಿ ಮಾತಲ್ಲಿ ಭರವಸೆ ನೀಡಿ ಅಧಿಕಾರಿಗಳು ಮನೆಯಲ್ಲಿ ಬೆಚ್ಚಗೆ ಕುಳಿತರೆ ಪರಿಹಾರ ಎಲ್ಲಿ ಸಿಗತ್ತೆ.
ಬಿಜೆಪಿ ಸರ್ಕಾರ ಕೇವಲ 40% ಕಮಿಷನ್ ಪಡೆಯುವುದರಲ್ಲಿಯೇ ಮಗ್ನವಾಗಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.