ಬೆಂಗಳೂರಲ್ಲಿ ತಾಯಿ, ಮಗು ಅನುಮಾನಾಸ್ಪದ ಸಾವು: ಸಾವಿನ ಸುತ್ತ ಅನುಮಾನದ ಹುತ್ತ

ಅಪರಾಧ ಬೆಂಗಳೂರು

ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಮತ್ತು ಮಗಳ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಬನಶಂಕರಿ ನಗರದಲ್ಲಿ ನಡೆದಿದೆ. ವಿರಾಜಪೇಟೆ ಮೂಲದ ಡಾ. ಶೈಮಾ ಮುತ್ತಪ್ಪ ಮತ್ತು ಇವರ ಮಗಳು ಆರಾಧನಾ ಮೃತ ದುರ್ದೈವಿಗಳು. ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೈಮಾರ ಪತಿ ನಾರಾಯಣ್ ಕೂಡ ಡೆಂಟಲ್​ ಡಾಕ್ಟರ್. ಇವರಿಬ್ಬರೂ ಓದುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ ವಿಚಾರ ಕುಟುಂಬಕ್ಕೆ ತಿಳಿದ ಸಂದರ್ಭದಲ್ಲೇ ಶೈಮಾರ ತಾಯಿ ಮೃತಪಟ್ಟಿದ್ದರು. ನಂತರ ಕುಟುಂಬ ಗಳನ್ನು ಒಪ್ಪಿಸಿ ಇಬ್ಬರೂ 10 ವರ್ಷದ ಹಿಂದೆ ಮದುವೆ ಆಗಿದ್ದರು. ಡೆಂಟಲ್​ ಕ್ಲಿನಿಕ್​ ಕೂಡ ನಡೆಸುತ್ತಿದ್ದರು.

ದಂಪತಿಗೆ ಮಗು ಕೂಡ ಇತ್ತು. ಎಂದಿನಂತೆ ಶನಿವಾರ ಬೆಳಗ್ಗೆ ಡಾ.ನಾರಾಯಣ್ ಅವರು ಕ್ಲಿನಿಕ್​ಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೈಮಾ ಮತ್ತು ಮಗು ಮೃತಪಟ್ಟಿದ್ದಾರೆ. ಘಟನೆ ವೇಳೆ ಶೈಮಾರ ಸಹೋದರ ಆಸ್ಟ್ರೇಲಿಯಾದಲ್ಲಿದ್ದರು. ಇಂದು ಸಹೋ ದರ ಬಂದು ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಾವಿನ ಬಗ್ಗೆ ಸೈಮಾರ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮಗುವನ್ನು ನೇಣು ಹಾಕಿ, ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ.

Leave a Reply

Your email address will not be published.