ಬೆಂಗಳೂರಿನಲ್ಲಿ ವಿಕೃತಿ: ಡ್ರಗ್ಸ್ ಮತ್ತಿನಲ್ಲಿ ಪತ್ನಿ ತಲೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಪತಿ..!

ಅಪರಾಧ ಬೆಂಗಳೂರು

ಬೆಂಗಳೂರು: ಡ್ರಗ್ಸ್ ನಶೆಯಲ್ಲಿ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಿ ಪತ್ನಿಯು ಪತಿಯ ವಿರುದ್ಧ ದೂರು ದಾಖಲಿಸಿರುವ ಘಟನೆ ನಡೆದಿದೆ. ತೆಲಂಗಾಣದ ಪ್ರತಿಷ್ಠಿತ ಬಟ್ಟೆ ಕಂಪನಿಯ ಮಾಲೀಕರ ಮಗಳನ್ನು ಆರೋಪಿ ಸಂದೀಪ್ ಎಂಬುವರಿಗೆ ಕಳೆದ ಜನವರಿಯಲ್ಲಿ ವಿವಾಹ ಮಾಡಿಕೊಡಲಾಗಿತ್ತು‌. ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ 4 ಕೆ.ಜಿ ಚಿನ್ನ, ಮಿನಿ‌ಕೂಪರ್ ಕಾರನ್ನು ಸಂದೀಪ್​ಗೆ ವರದಕ್ಷಿಣೆಯಾಗಿ ನೀಡಲಾಗಿತ್ತು. ವಿವಾಹಕ್ಕಾಗಿ 6 ಕೋಟಿ ರೂಪಾಯಿ ಖರ್ಚು ಖರ್ಚು ಮಾಡಲಾಗಿತ್ತು. ಇದಲ್ಲದೇ,

ತೆಲಂಗಾಣದಲ್ಲಿರುವ 2 ಜವಳಿ ಅಂಗಡಿಗಳನ್ನೂ ಕೂಡ ಸಂದೀಪ್ ಹೆಸರಿಗೆ ಬರೆದುಕೊಡಲಾಗಿತ್ತು. ಆದರೆ, ಸಂದೀಪ್ ಮಾತ್ರ ದುಶ್ಚಟಕ್ಕೆ ಬಿದ್ದಿದ್ದರು. ಮನೆಗೆ ಸ್ನೇಹಿತರನ್ನು ಕರೆಸಿಕೊಂಡು ಡ್ರಗ್ಸ್​ ಪಾರ್ಟಿ ಮಾಡುತ್ತಿದ್ದರು. ಇದನ್ನು ವಿರೋಧಿಸಿದರೆ ಗೆಳೆಯರ ಮುಂದೆಯೇ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದರು. ಬಳಿಕ ಅಶ್ಲೀಲವಾಗಿ ವರ್ತಿಸುತ್ತಿದ್ದರು ಎನ್ನಲಾಗ್ತಿದೆ. ಕೆಲ ದಿನಗಳ ಹಿಂದೆ ಡ್ರಗ್ಸ್​ ಸೇವಿಸಿದ ತನ್ನ ಪತಿ ನಶೆಯಲ್ಲಿ ನನ್ನ ತಲೆಯ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ. ಈ ಬಗ್ಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೊಂದ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

Leave a Reply

Your email address will not be published.