
ಹುಬ್ಬಳ್ಳಿಯಲ್ಲಿ ಸ್ನೇಕ್ ಸಂಗಮೇಶರಿಂದ ಹಾವು ರಕ್ಷಣೆ
ಹುಬ್ಬಳ್ಳಿ : ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ರಸ್ತೆಯ ರೈಲ್ವೆ ಹಾಸ್ಪಿಟಲ್ ವಾಟರ್ ಪ್ಲಾಂಟ್ ನಲ್ಲಿ ಸಿಲುಕಿಕೊಂಡಿದ್ದ ಹಾವನ್ನು ಉರಗ ರಕ್ಷಕ ಸ್ನೇಕ ಸಂಗಮೇಶ ರಕ್ಷಣೆ ಮಾಡಿದರು.
ವಾಟರ್ ಪ್ಲಾಂಟ್ ನಲ್ಲಿ ಸಿಲುಕಿಕೊಂಡಿದ್ದ ಹಾವನ್ನು ನೋಡಿದ ಸ್ಥಳೀಯರು ಕೆಲ ಕಾಲ ಭಯಗೊಂಡ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಂಗಮೇಶ ಹಾವನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟರು.