ಕೇರಳದಲ್ಲಿ ರಾಹುಲ್ ಗಾಂಧಿ ಅವರಿಂದ ಭಾರತ್ ಜೋಡೋ ಕಾರ್ಯಕ್ರಮಕ್ಕೆ ಚಾಲನೆ: KPCC ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೆಂಗಳೂರು

ಬೆಂಗಳೂರು: ರಾಷ್ಟ್ರಧ್ವಜವನ್ನು ಎಲ್ಲರಿಗೂ ಉಚಿತವಾಗಿ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದರು. ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 15ರಂದು ಬೃಹತ್ ರ್ಯಾಲಿ ನಡೆಯಲಿದ್ದು, ಸಂಗೊಳ್ಳಿ ರಾಯಣ್ಣ ಸರ್ಕಲ್​ನಿಂದ ಪಾದಯಾತ್ರೆ ಸಾಗಿ ನ್ಯಾಷನಲ್ ಕಾಲೇಜು‌ ಮೈದಾನದಲ್ಲಿ ಸಮಾವೇಶ ನಡೆಸುತ್ತೇವೆ ಎಂದರು. ಸಿಎಲ್​ಪಿ ನಾಯಕರಿಗೆ 75 ವರ್ಷದ ಜನ್ಮದಿನ ಸಂಭ್ರಮ. ಈ ದೇಶಕ್ಕೂ 75ರ ಸ್ವಾತಂತ್ರ್ಯದ ಸಂಭ್ರಮ.

ಇದೊಂದು ಅಭೂತ ಪೂರ್ವ ಸಂಭ್ರಮದ ಕಾರ್ಯಕ್ರಮ. ಕೇರಳದಲ್ಲಿ ಅಂದೇ ರಾಹುಲ್ ಗಾಂಧಿ ಅವರಿಂದ ಭಾರತ್ ಜೋಡೋ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಹಾಗಾಗಿ ಆಗಸ್ಟ್ 15ರಂದು ಎಲ್ಲರೂ ಭಾಗವಹಿಸಿ ಎಂದು ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ. ಇನ್ನು ರಾಷ್ಟ್ರಧ್ವಜವನ್ನು ಎಲ್ಲರಿಗೂ ಉಚಿತವಾಗಿ ಕೊಡಿ. ರಾಷ್ಟ್ರಧ್ವಜ ಇರುವುದು ವ್ಯಾಪಾರಕ್ಕಲ್ಲ. 25 ರೂಪಾಯಿ ಸರ್ಕಾರಕ್ಕೇನು ದೊಡ್ಡದ್ದಲ್ಲ. ನಾವು ಒಂದೂವರೆ ಲಕ್ಷ ಧ್ವಜ ಖರೀದಿಸಿದ್ದೇವೆ. ಧಾರವಾಡದ ಖಾದಿ ಭಂಡಾರಕ್ಕೆ ಆರ್ಡರ್ ಕೊಟ್ಟಿದ್ದೇವೆ. ತಲೆಯ ಟೋಪಿಯನ್ನೂ ಖರೀದಿಸಿದ್ದೇವೆ. ಎಲ್ಲರಿಗೆ ನಾವು ಉಚಿತವಾಗಿ ಕೊಡುತ್ತೇವೆ ಎಂದಿದ್ದಾರೆ.

Leave a Reply

Your email address will not be published.