ಮಹಾರಾಷ್ಟ್ರದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಅನುಮಾನಾಸ್ಪದ ದೋಣಿ ಪತ್ತೆ: ಪ್ರದೇಶದಲ್ಲಿ ಹೈ ಅಲರ್ಟ್

ರಾಷ್ಟ್ರೀಯ

ಮುಂಬೈ: ಎಕೆ 47 ರೈಫಲ್ ಹಾಗೂ ಮದ್ದುಗುಂಡುಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳಿದ್ದ ದೋಣಿಯೊಂದು ಮಹಾರಾಷ್ಟ್ರದ ರಾಯಗಢದ ಸಮುದ್ರದಲ್ಲಿ ಪತ್ತೆಯಾಗಿದ್ದು ಆ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ರಾಯಗಢದ ಹರಿಹರೇಶ್ವರ ಬೀಚ್ ಬಳಿ ಬೋಟ್ ಪತ್ತೆ ಆಗಿದ್ದು, ಅದರಲ್ಲಿ 3 ಎಕೆ 47 ರೈಫೆಲ್‍ಗಳು ಹಾಗೂ ಅನೇಕ ಮದ್ದು ಗುಂಡುಗಳು ಪತ್ತೆಯಾಗಿವೆ. ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆ ಪ್ರದೇಶವನ್ನು ಹೈಅಲರ್ಟ್ ಎಂದು ಘೋಷಿಸಿದ್ದಾರೆ.

ಘಟನೆಯ ಕುರಿತು ವಿಶೇಷ ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿರುವುದಾಗಿ ರಾಯಗಢ ಶಾಸಕಿ ಅದಿತಿ ತಟ್ಕರೆ ಹೇಳಿದ್ದಾರೆ. ಈ ಘಟನೆಯು ಗಣೇಶ ಹಬ್ಬಕ್ಕಿಂತ ಇಂತಹ ಆಂತಕದ ವಿಚಾರ ನಡೆದಿರುವುದು ಎಲ್ಲರನ್ನೂ ಅಭ್ರದತೆಯ ಭಯವನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದರು.

ಮುಂಬೈನಿಂದ 190 ಕಿಮೀ ದೂರದಲ್ಲಿರುವ ಬೋಟ್‌ನಲ್ಲಿ ಸಿಬ್ಬಂದಿ ಇಲ್ಲದಿದ್ದ ಬೋಟ್‌ನ್ನು ಕೆಲವು ಸ್ಥಳೀಯರು ಗಮನಿಸಿ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ದುಧೆ ಮತ್ತು ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದೋಣಿಯನ್ನು ಶೋಧಿಸಿದರು.

Leave a Reply

Your email address will not be published.