ನನ್ನ ಅಧಿಕಾರವಧಿಯಲ್ಲಿ ವಿರೋಧ ಪಕ್ಷದಲ್ಲಿದ್ದ ನೀವು ಕಡ್ಲೆಪುರಿ ತಿಂತಾ ಇದ್ರಾ? – ಸಿಎಂ ಗೆ ಟಾಂಗ್ ಕೊಟ್ಟ ಸಿದ್ದು

ಬೆಂಗಳೂರು

ಕಾಂಗ್ರೆಸ್ ಕಾಲದಲ್ಲಿನ ಅಕ್ರಮಗಳ ಕುರಿತು ದಾಖಲೆ ಬಿಡುಗಡೆ ಮಾಡ್ತೇನೆ ಎಂದಿರುವ ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದು, ನಮ್ಮ ಕಾಲದಲ್ಲಿ ಹಗರಣ ನಡೆದಿತ್ತು ಎನ್ನುವುದಾದರೆ ನೀವು ವಿರೋಧ ಪಕ್ಷದಲ್ಲಿದ್ದಾಗ ಏನ್​ ಮಾಡ್ತಿದ್ರಿ? ಕಡ್ಲೆಪುರಿ ತಿಂತಾ ಇದ್ಯಾ? ದಾಖಲೆ‌ ಇದ್ದರೆ ಅವತ್ತೇ ಹೇಳಬೀಕಿತ್ತಲ್ಲಾ? ಯಾಕೆ ಸುಮ್ಮನಿದ್ರಿ? ನನ್ನ ‌ಉಳಿಸೋಕೆ ಅಂತ ಆಗ ಮಾತಾಡಿರಲಿಲ್ವಾ?’ ಎಂದು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಗೃಹ ಸಚಿವರು ಸದನದಲ್ಲಿ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮವೇ ನಡೆದಿಲ್ಲ ಎಂದಿದ್ದರು. ಜವಾಬ್ದಾರಿ ಸ್ಥಾನದಲ್ಲಿದ್ದು ಸುಳ್ಳು ಉತ್ತರ ಕೊಟ್ಟಿದ್ದಾರೆ. ಸುಳ್ಳು ಹೇಳಿದ ಮೇಲೆ ಸಚಿವರಾಗಿ ಹೇಗೆ ಮುಂದುವರಿಯುತ್ತಾರೆ? ಗೃಹ ಸಚಿವರು ಸುಳ್ಳು ಹೇಳಿದ್ದು ಅಪರಾದ ಅಲ್ವಾ? ಅವರು ಕಾನೂನು ಓದಿ ಕೊಂಡಿದ್ದಾರಾ? ಬಿಜೆಪಿ ಕೂಡ ಅವರನ್ನು ‌ಮುಂದುವರಿಸಬಾರದು. ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ರೆ ಆಗ ಯಾಕೆ ಸುಮ್ಮನಿದ್ದರು? ಕಡ್ಲೆಪುರಿ ತಿನ್ನುತ್ತಿದ್ರಾ? ದಾಖಲೆ ಇದ್ರೆ ಬಿಡುಗಡೆ ಮಾಡಿ ಮಾತನಾಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

 

Leave a Reply

Your email address will not be published.