ನಮ್ಮ ಮೆಟ್ರೋದಲ್ಲಿ ಕಳಪೆ ಕಾಮಗಾರಿಯ ಆರೋಪ: ಮೆಟ್ರೋ ಸಂಚಾರದ ಮೇಲೆ ಕಪ್ಪು ಛಾಯೆ

ಬೆಂಗಳೂರು

ಬೆಂಗಳೂರು: ಬೆಂಗಳೂರು ಮೆಟ್ರೋ ಸಂಚಾರದ ಮೇಲೆ ಕಪ್ಪು ಛಾಯೆ ಮುನ್ಸೂಚನೆ ನೀಡಿದೆ. ಹಳಿಗಿಳಿದ 10 ವರ್ಷದಲ್ಲಿ ಮೆಟ್ರೋ ನಿಜಬಣ್ಣ ಬಯಲಾಗಿದ್ದು, ಎಂಜಿ ರಸ್ತೆಟು ಬೈಯ್ಯಪ್ಪನಹಳ್ಳಿ ಮಾರ್ಗದಲ್ಲಿ ನಿತ್ಯ ಸಮಸ್ಯೆ ಉಂಟಾಗುತ್ತಿದೆ. ಹತ್ತೇ ವರ್ಷಕ್ಕೆ ಬೇರಿಂಗ್ಗಳು ಕೈಕೊಡ್ತಿವೆ. ಕಳಪೆ ಕಾಮಗಾರಿಯಿಂದಲೇ ಈ ಸಮಸ್ಯೆ ತಲೆದೋರ್ತಿದ್ಯಾ ? ಬೇರಿಂಗ್ ಕೈಕೊಡ್ತಿರೋ ಕಾರಣ ಎದುರಾಗ್ತಿರೋ ಸಮಸ್ಯೆ ಉಂಟಾಗಿದ್ದು, ಆಗಾಗ ರಿಪೇರಿಯಿಂದಾಗಿ ಪ್ರಯಾಣಿಕರಿಗೂ ಕಿರಿಕಿರಿ ಉಂಟಾಗಿದ್ದು, ಸಂಪೂರ್ಣ ಮಾರ್ಗ ರಿಪೇರಿ ಮಾಡ್ಬೇಕಂದ್ರೆ ತಿಂಗಳಕಾಲ ಸ್ಥಗಿತಗೊಳಿಸ್ಬೇಕು ಅಂತಿದೆ. ಇನ್ನು, 2011 ಅಕ್ಟೋಬರ್ 20ರಂದು ಆರಂಭಗೊಂಡಿದ್ದ ಮಾರ್ಗ ಕೇವಲ 10 ವರ್ಷದಲ್ಲೇ ಆಗಾಗ ಮಾರ್ಗ ಕೈಕೊಡುತ್ತಿದೆ. ನಮ್ಮ ಮೆಟ್ರೋದಲ್ಲಿ ಕಳಪೆ ಕಾಮಗಾರಿಯ ಆರೋಪ ಕೇಳಿಬರುತ್ತಿದೆ.

Leave a Reply

Your email address will not be published.