ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ: BBMPಗೆ 50 ಸಾವಿರ ದೋಷಯುಕ್ತ ಧ್ವಜ ಹಿಂದಿರುಗಿಸಿದ ಜನರು

ಬೆಂಗಳೂರು

ಬೆಂಗಳೂರು: ಬೆಂಗಳೂರಿನ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ದೋಷಯುಕ್ತ ಧ್ವಜಗಳನ್ನು ಬಿಬಿಎಂಪಿಗೆ ಹಿಂದಿರುಗಿಸುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಕಳೆದ ಮೂರು ದಿನಗಳಲ್ಲಿ 50,000 ದೋಷಯುಕ್ತ ಧ್ವಜಗಳನ್ನು ಬಿಬಿಎಂಪಿಗೆ ಹಿಂತಿರುಗಿಸಲಾಗಿದೆ. ಇನ್ನೂ ನಾಗರಿಕರು ಧ್ವಜಗಳಲ್ಲಿ ಯಾವುದೇ ದೋಷ ಕಂಡುಬಂದಲ್ಲಿ, ಅವರು ತಾವು ಖರೀದಿಸಿದ ಬಿಬಿಎಂಪಿ ಕೌಂಟರ್‌ಗಳಿಗೆ ಹೋಗಬೇಕಾಗಿಲ್ಲ. ಬದಲಾಗಿ ಅವುಗಳನ್ನು ಹಿಂದಿರುಗಿಸಲು ಯಾವುದೇ ಬಿಬಿಎಂಪಿ ವಾರ್ಡ್ ಕಚೇರಿಗಳಿಗೆ ಭೇಟಿ ನೀಡಿ, ವಿನಿಮಯ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ. ಅದರನ್ವಯ ನಾಗರಿಕರು ದೋಷಪೂರಿತ ಧ್ವಜಗಳನ್ನು ಹಿಂದಿರುಗಿಸುತ್ತಿದ್ದಾರೆ.

Leave a Reply

Your email address will not be published.